ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಡಿ. ೫ : ಟಾಟಾ ಸಂಸ್ಥೆಯ ಸ್ವಾಧೀನದಲ್ಲಿರುವ ಪ್ರಸ್ತುತ ಟೀ ಬೆಳೆಯಲಾಗುತ್ತಿರುವ ಸರಿಸುಮಾರು ೧೩೦೦ ಎಕರೆ ಜಾಗವನ್ನು ಈ ಸಂಸ್ಥೆಯಿAದ ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ವೀರಾಜಪೇಟೆ ಸಿವಿಲ್ ನ್ಯಾಯಾಲಯದಿಂದ ಐತಿಹಾಸಿಕವಾದ ಮಹತ್ವದ ತೀರ್ಪು ಹೊರಬಿದ್ದಿದೆ. ಟಾಟಾ ಸಂಸ್ಥೆ ಹಾಗೂ ಸರಕಾರದ ನಡುವಿನ ಈ ಜಾಗದ ವಿವಾದಕ್ಕೆ ತೆರೆ ಬಿದ್ದಂತಾಗಿದ್ದು ಸರಕಾರದ ಪರವಾಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಕುರಿತಂತೆ ಕಳೆದÀ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದ್ದ ಟಾಟಾ ಸಂಸ್ಥೆಗೆ ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಜಿ. ಲೋಕೇಶ ಅವರು ತಾ. ೩ರಂದು ತೀರ್ಪು ಪ್ರಕಟಿಸಿದ್ದು ಟಾಟಾ ಸಂಸ್ಥೆ ಹಾಗೂ ಗ್ಲೆನ್ ಲೋರ್ನಾ ಕಂಪೆನಿ ಮೂಲಕ ಹೂಡಿದ್ದ ಎರಡು ದಾವೆಗಳನ್ನು ವಜಾಗೊಳಿಸಿದ್ದಾರೆ. ಈ ಜಾಗಕ್ಕೆ ಸಂಬAಧಿಸಿದAತೆ ಮುಂದಿನ ಸೂಕ್ತ ಕ್ರಮವನ್ನು ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಸರಕಾರದ ಪರವಾಗಿ ಈ ಬಗ್ಗೆ ಅಪರ ಸರಕಾರಿ ವಕೀಲರಾದ ಕಂಜಿತAಡ ಅನಿತ ದೇವಯ್ಯ ಅವರು ವಾದ ಮಂಡಿಸಿದ್ದಾರೆ. ವಿವಾದಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಹಶೀಲ್ದಾರರಾದ ಯೋಗಾನಂದ ಅವರು ಸಾಕಷ್ಟು ಆಧಾರಗಳ ಸಹಿತವಾಗಿ ಸಾಕ್ಷಿದಾರರಾಗಿ ಹೇಳಿಕೆ ನೀಡಿದ್ದು, ಇವುಗಳನ್ನು ಹಾಗೂ ವಕೀಲರ ವಾದವನ್ನು ಎತ್ತಿಹಿಡಿದ ನ್ಯಾಯಾಲಯ ಐತಿಹಾಸಿಕವಾದ ತೀರ್ಪನ್ನು ನೀಡಿದ್ದು ಸಾವಿರಗಟ್ಟಲೆ ಎಕರೆ ಜಾಗವನ್ನು ಸರಕಾರದ ವಶಕ್ಕೆ ಪಡೆಯಲು ಆದೇಶ ನೀಡಿದೆ.
ಇದರ ನಡುವೆ ಈ ಹಿಂದಿನ ದಾಖಲೆಯಲ್ಲಿ ಇದ್ದ ಪೈಸಾರಿ - ಮೀಸಲು ಅರಣ್ಯ ಎಂಬದನ್ನು ಸಂಸ್ಥೆಯು ರೆಡೀಮ್ ಸಾಗು ಎಂದು ಬದಲಾಯಿಸಿಕೊಂಡಿತ್ತು. ದಿನಾಂಕ ೭.೪.೨೦೦೬ರಲ್ಲಿ ಕರ್ನಾಟಕ ಸರಕಾರದ ಅರಣ್ಯ ಮತ್ತು ಜೀವಶಾಸ್ತç ಇಲಾಖೆ ಇದನ್ನು ಒಪ್ಪದೆ ಕಾನೂನು ಬಾಹಿರವಾಗಿ ಆರ್.ಟಿ.ಸಿ.ಯಲ್ಲಿ, ಎಂಸಿಯಲ್ಲಿ ಟೆನ್ಯೂರ್ (ನಿಬಂಧನೆ)ಯನ್ನು ರೆಡೀಮ್ ಸಾಗು ಎಂದು ಮಾಡಿದೆ ಎಂದು ಮತ್ತು ಮೂಲವಾಗಿ ೧೯೧೪ರ ಸಂದರ್ಭದಲ್ಲಿ ಗೇಣಿ ಕೊಡುವಾಗ ಇದ್ದಂತೆ ಇದನ್ನು ಮತ್ತು ಸರಿಪಡಿಸಿ ಅರಣ್ಯ ಮತ್ತು ಮೀಸಲು ಅರಣ್ಯವೆಂದು ಸರಿಪಡಿಸುವಂತೆ ಸೂಚಿಸಿದ್ದು ಅದನ್ನು ಕಂದಾಯ ದಾಖಲೆಗಳಲ್ಲಿ ಅದೇ ರೀತಿಯಾಗಿ ಸರಿಪಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಟಾಟಾ ಕಂಪೆನಿ ಹಾಗೂ ಗ್ಲೆನ್ ಲೋರ್ನಾ ಪ್ಲಾಂಟೇಷನ್‌ನವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸದರಿ ತಿದ್ದುಪಡಿ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ಮತ್ತೆ ವೀರಾಜಪೇಟೆ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಇದೀಗ ವಿಚಾರಣೆ ಬಳಿಕ ಈ ಅರ್ಜಿ ವಜಾಗೊಂಡಿದೆ.
ಈ ಪ್ರಕರಣದ ಹಿನ್ನೆಲೆ
೧೯೧೪ ಮತ್ತು ೧೯೧೫ರ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಸರಕಾರ ಮೆಕ್ ಡೋಗಲ್ ಗ್ಲೆನ್ ಲೋರ್ನಾ ಲಿಮಿಟೆಡ್‌ಗೆ ಸುಮಾರು ೧೩೦೦ಕ್ಕೂ ಅಧಿಕ ಎಕರೆ ಪೈಸಾರಿ ಜಾಗವನ್ನು ಟೀ ಸಾಗುವಳಿಗೆ ೯೯೯ ವರ್ಷಗಳ ಲೀಸ್ ಆಧಾರದಲ್ಲಿ ಒಪ್ಪಂದದAತೆ ಬಿಟ್ಟುಕೊಟ್ಟಿತ್ತು. ಆ ಸಮಯದಲ್ಲಿ ಇದಕ್ಕೆ ಲೀಸ್‌ರೆಂಟ್ (ಬಾಡಿಗೆ ದರ) ನಿಗದಿ ಮಾಡಲಾಗಿತ್ತು. ನಂತರದ ದಿನದಲ್ಲಿ ಅದನ್ನು ತಿದ್ದುಪಡಿ ಮಾಡುವ ಮತ್ತು ಲೀಸ್ ಅವಧಿಯನ್ನು ಕಾಲಕಾಲಕ್ಕೆ ಬದಲಾವಣೆ ಮಾಡುವ ಅಧಿಕಾರವನ್ನು ಅಂದಿನ ಸರಕಾರ ತನ್ನ ಬಳಿ ಇಟ್ಟುಕೊಂಡಿತ್ತು. ಇದರೊಂದಿಗೆ ಮರಗಳನ್ನು ಕತ್ತರಿಸಿ ಮರದ ಮೌಲ್ಯವನ್ನು ಅರಣ್ಯ ಇಲಾಖೆಯಿಂದ ನಿಗದಿಪಡಿಸಿ ಅದನ್ನು ಸರಕಾರಕ್ಕೆ ಕಟ್ಟುವಂತೆಯೂ ನಿರ್ಬಂಧವಿತ್ತು. ಇದಲ್ಲದೆ ಸರಕಾರದ ಸ್ಥಳೀಯ ನೀತಿಯಂತೆ (ರೆವಿನ್ಯೂ ಟ್ಯಾಕ್ಸ್) ಸ್ಥಳೀಯ ಕರವನ್ನು ಸಹ ಸದರಿ ಕಂಪೆನಿ ಪಾವತಿಸಬೇಕಾಗಿತ್ತು. ಇದಾದ ಬಳಿಕ ಸದರಿ ಗ್ಲೆನ್ ಲೋರ್ನಾ ಕಂಪೆನಿಯವರು ಈ ಜಾಗವನ್ನು ೧೯೨೮ರಲ್ಲಿ ಅನಾರ್ಕಲ್ ಟೀ ಕಂಪೆನಿ ಲಿಮಿಟೆಡ್‌ಗೆ ಲೀಸ್ ಅಗ್ರಿಮೆಂಟ್ (ಗೇಣಿ ಹಕ್ಕನ್ನು) ಹಸ್ತಾಂತರ ಮಾಡಿತ್ತು. ನಂತರ ಪುನಃ ೧೯೮೫ರಲ್ಲಿ ಕನ್ಸಾಲಿಡೇಟೆಟ್ ಟೀ ಕಂಪೆನಿ (ಈಗ ಟಾಟಾ ಕಾಫಿ ಲಿಮಿಟೆಡ್)ಗೆ ಹಕ್ಕುಗಳನ್ನು ಮತ್ತೆ ವರ್ಗಾವಣೆ ಮಾಡಲಾಗಿತ್ತು.
ಕಾನೂನು ಬಾಹಿರ ಬದಲಾವಣೆ
ಆದರೆ ಈ ನಡುವೆ ಪೈಸಾರಿ ಎಂದು ಆರ್.ಟಿ.ಸಿ.ಯಲ್ಲಿದ್ದ ಟೆನ್ಯೂರ್ (ನಿಬಂಧನೆ) ಅನ್ನು ಕಾನೂನು ಬಾಹಿರವಾಗಿ ರೆಡೀಮ್ಡ್ ಸಾಗು ಲ್ಯಾಂಡ್ ಎಂದು ಸರಕಾರದ ಯಾವುದೇ ಆದೇಶವಿಲ್ಲದೆ ಬದಲಾಯಿಸಲಾಗಿದೆ ಎಂದು ಸರಕಾರ ಪ್ರಸ್ತಾಪಿಸಿತ್ತು.
(ಮೊದಲ ಪುಟದಿಂದ) ಇದಕ್ಕೂ ಮುನ್ನ ೧೯೪೦ರಲ್ಲಿ ಆಗಿನ ಕೂರ್ಗ್ ಕಮೀಷನರ್ ೯೯೯ ವರ್ಷಗಳ ಲೀಸ್ ಅವಧಿಯನ್ನು ೯೯ ವರ್ಷಕ್ಕೆ ಎಂದು ಸೀಮಿತಗೊಳಿಸಿ ಬದಲಾಯಿಸಿದ್ದ ಪ್ರಕರಣವೂ ನಡೆದಿತ್ತು. ನಂತರದಲ್ಲಿ ಬಂದ ಸರಕಾರ ಇವೆಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ೨೦೦೬ರಲ್ಲಿ ಅಂತಿಮ ಆದೇಶ ಹೊರಡಿಸಿ ಗೇಣಿಯ ಅವಧಿಯನ್ನು ೯೯ ವರ್ಷವೆಂದೇ ಸೂಚಿಸಿ ಬರಬೇಕಾಗಿದ್ದ ಗೇಣಿ ಬಾಡಿಗೆ, ಕತ್ತರಿಸಿದ ಮರದ ಮೌಲ್ಯದ ವಸೂಲಾತಿಗಾಗಿಯೂ ಸೂಚನೆ ನೀಡಿತ್ತು.
ಇದರಂತೆ ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ಕಂಪೆನಿಗಳ ಗೇಣಿ ಅವಧಿಯನ್ನು ಮೂಲ ಗೇಣಿ ದಿನಾಂಕದಿAದ ೯೯ ವರ್ಷಗಳ ಅವಧಿಗೆ ಮಿತಿಗೊಳಿಸುವುದು, ಈ ಭೂಮಿಗಳ ಗುತ್ತಿಗೆ ಅವಧಿಯು ಪೂರ್ಣವಾದ ತಕ್ಷಣ ಮೀಸಲು ಅರಣ್ಯವೆಂದು ಪರಿಗಣಿಸುವುದು ಹಾಗೂ ಭೂಮಿಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಹಿಂಪಡೆಯಬೇಕಿದೆ. ಈ ಆದೇಶದನ್ವಯ ಅರಣ್ಯ ಇಲಾಖೆ, ಕಂಪೆನಿಗೆ ನೋಟೀಸ್ ನೀಡಿ ಕಾನೂನು ಕ್ರಮ ಕೈಗೊಂಡಿತ್ತು. ಈಗಾಗಲೇ ಟಾಟಾ ಮತ್ತು ಗ್ಲೆನ್‌ಲೋರ್ನಾ ಕಂಪೆನಿ ಗೇಣಿಯ ಬಾಡಿಗೆ ರೂ. ೫೨೦ ಕೋಟಿಯಷ್ಟನ್ನು ಪಾವತಿಸಬೇಕಿದ್ದು ಈ ಬಗ್ಗೆಯೂ ಕ್ರಮ ವಹಿಸಲಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡ ಗೇಣಿಯ ಹಕ್ಕಿನ ವರ್ಗಾವಣೆ ಭಾರತ ಸಂವಿಧಾನದ ಪರಿಚ್ಛೇಧ
೩೯(ಃ)ಯಲ್ಲಿನ ಅವಕಾಶಗಳಿಗೆ ಮತ್ತು ಸಂವಿಧಾನದ ಪ್ರಸ್ತಾವನೆ ಹಾಗೂ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ೧೯೯೬ರಲ್ಲಿ ಪ್ರಕರಣವೊಂದರಲ್ಲಿ ತೀರ್ಪಿನಲ್ಲಿ ಹೇಳಿದೆ.
ಈ ಎಲ್ಲಾ ವಿಚಾರಗಳನ್ನು ಒಳಗೊಂಡAತೆ ವಾದ-ವಿವಾದ ನಡೆದಿದ್ದು ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿ ಕಂಪೆನಿಯ ಮೂಲಕ ಹೂಡಲಾಗಿದ್ದ ಎರಡು ದಾವೆಗಳನ್ನು ವಜಾಗೊಳಿಸಿ ಆದೇಶ ನೀಡಿದೆ.
ಕಂಪೆನಿಯ ವಾದವೇನಿತ್ತು?
೧. ಆರ್.ಟಿ.ಸಿ.ಯಲ್ಲಿ ರೆಡೀಮ್ ಸಾಗು ಎಂದಿರುವುದನ್ನು ಮೀಸಲು ಅರಣ್ಯ ಎಂದು ದಾಖಲೆಯಲ್ಲಿ ತಿದ್ದುಪಡಿ ಮಾಡಿರುವುದು ನಿಯಮ ಬಾಹಿರವಾಗಿದೆ. ೨. ಇದನ್ನು ಪುನಃ ರೆಡೀಮ್ ಸಾಗು ಎಂದು ಬದಲು ಮಾಡಲು ತಹಶೀಲ್ದಾರರು, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕಂಪೆನಿ ಕೋರಿಕೊಂಡಿತ್ತು.
ವಕೀಲರ ಪ್ರತಿಕ್ರಿಯೆ
ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿರುವ ಅಪರ ಸರಕಾರಿ ವಕೀಲರಾದ ಅನಿತ ದೇವಯ್ಯ ಅವರು ಇದೊಂದು ಐತಿಹಾಸಿಕವಾದ ತೀರ್ಪಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಸಾಕಷ್ಟು ಪೂರಕವಾದ ಸಾಕ್ಷö್ಯಗಳು ದಾಖಲಾತಿಗಳು ಇದ್ದವು. ಇದರಿಂದಾಗಿ ಸರಕಾರದ ಪರವಾಗಿ ತೀರ್ಪು ಬಂದಿದೆ ಎಂದು ಹೇಳಿದ್ದಾರೆ.
ತಹಶೀಲ್ದಾರ್ ಹೇಳಿಕೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಅವರು ನ್ಯಾಯಾಲಯದಿಂದ ಈ ಬಗ್ಗೆ ನೋಟೀಸ್ ಬಂದ ಬಳಿಕ ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.