ಮಡಿಕೇರಿ, ಡಿ. ೫: ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಚಿತ್ರೀಕರಣಗೊಂಡ ಕಿರುಚಿತ್ರವೊಂದು ಇದೀಗ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕೆ.ಎಂ. ಬಾಲಚಂದ್ರ ಮುತ್ತಪ್ಪ ನಿರ್ಮಿಸಿ, ನಿರ್ದೇಶಿಸಿರುವ ‘ಒನ್ ರೈಟ್ ಕಿಕ್’ ಹೆಸರಿನ ಚಿತ್ರ ಮಹಿಳೆಯರ ಕುರಿತಾದ ಅತ್ಯುತ್ತಮ ಕಿರುಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ೧೨ ಅಂರ್ರಾಷ್ಟಿçÃಯ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಆಗಸ್ಟ್ನಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಾಲಚಂದ್ರ ನಿರ್ದೇಶನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಂಬAಧಿತ ವಿಷಯ ಹೊಂದಿದ್ದ ಒನ್ ಬ್ಯಾಡ್ ಕಿಕ್ ಹೆಸರಿನ ಕಿರುಚಿತ್ರ ಚಿತ್ರೀಕರಣಗೊಂಡಿತ್ತು. ೧೫ ನಿಮಿಷ ಅವಧಿಯ ಕಿರುಚಿತ್ರದಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ ಸಂದೇಶ ತೋರಿಸಲಾಗಿತ್ತು.
ಈ ಕಿರುಚಿತ್ರ ಇದೀಗ ಜಗತ್ತಿನ ವಿವಿಧ ದೇಶಗಳ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುತ್ತಿದೆ. ಸಿಂಗಾಪುರ, ಟರ್ಕಿ ಸೇರಿದಂತೆ ವಿವಿಧ ದೇಶಗಳಲ್ಲಿ ಆಯೋಜಿತ ಸಿನಿಮಾ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಈ ಕಿರುಚಿತ್ರ ಈವರೆಗೆ ೧೨ ಪ್ರಶಸ್ತಿಗಳನ್ನು ಜಾಗತಿಕ ಮಟ್ಟದಲ್ಲಿ ತನ್ನದಾಗಿಸಿಕೊಂಡಿದೆ ಎಂದು ನಿರ್ದೇಶಕ ಕೆ.ಎಂ. ಬಾಲಚಂದ್ರ ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ಕಿರುಚಿತ್ರದ ಪ್ರದರ್ಶನಕ್ಕೆ ಆಹ್ವಾನ ಲಭಿಸಿದ್ದು ಕೊಡಗಿನಲ್ಲಿ ಚಿತ್ರೀಕರಣಗೊಂಡ ಕಿರುಚಿತ್ರವೊಂದು ವಿಶ್ವಮಟ್ಟದಲ್ಲಿ ಪ್ರದರ್ಶಿ ಸಲ್ಪಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದೂ ಬಾಲಚಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.