ಮಡಿಕೇರಿ, ಡಿ. ೫: ಪಡಿಯಾಣಿ ಎಮ್ಮೆಮಾಡು ಗ್ರಾಮದಲ್ಲಿನ ಕಾಫಿ ತೋಟ ವೊಂದರಿAದ ಅಕ್ರಮವಾಗಿ ಬೀಟಿ ಮರವನ್ನು ಕಡಿದು ಸಾಗಾಟ ಮಾಡಿದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆ ಪಡಿಯಾಣಿ ಎಮ್ಮೆಮಾಡು ಗ್ರಾಮದ ಪಿ.ಕೆ. ಅಬ್ದುಲ್ ಮಜೀದ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಧಾಳಿ ನಡೆಸಿದ ಡಿಸಿಐಬಿ ಪೊಲೀಸರು ಅಕ್ರಮವಾಗಿ ಬೀಟಿ ಮರವನ್ನು ಕಡಿದು ಸಾಗಾಟ ಮಾಡಿರುವುದನ್ನು ಪತ್ತೆ ಹಚ್ಚಿ
(ಮೊದಲ ಪುಟದಿಂದ) ಸ್ಥಳದಲ್ಲಿ ದೊರೆತ ಬೀಟಿ ನಾಟಾದೊಂದಿಗೆ ತೋಟದ ಮಾಲೀಕ ಪಿ.ಕೆ. ಅಬ್ದುಲ್ ಮಜೀದ್ ಹಾಗೂ ಸಹಚರ ಕೊಳಕೇರಿ ಮೂಸಾ ಅವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೀಟೆ ನಾಟಾ ಹಾಗೂ ಆರೋಪಿಗಳಿಬ್ಬರನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿಯವರಿಗೆ ಒಪ್ಪಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ಬೀಟಿ ಮರದ ಬೆಲೆಬಾಳುವ ನಾಟಾಗಳನ್ನು ಮಾರಾಟ ಮಾಡಿ ಕೃತ್ಯ ತಿಳಿಯಬಾರದೆಂದು ಬುಡ ಭಾಗಕ್ಕೆ ಬೆಂಕಿ ಹಚ್ಚಿರುತ್ತಾರೆ. ಆರೋಪಿಗಳು ಅಕ್ರಮವಾಗಿ ಸಾಗಿಸಿದ ಬೀಟಿ ಮರದ ಮೌಲ್ಯ ೩ ಲಕ್ಷ ರೂ.ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ, ಮಡಿಕೇರಿ ಉಪವಿಭಾಗ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಗುಪ್ತಚರ ದಳದ ಪೊಲೀಸ್ ಇನ್ಸ್ಪೆಕ್ಟರ್ ಐ.ಪಿ. ಮೇದಪ್ಪ, ಡಿಸಿಐಬಿ ಎಎಸ್‌ಐ ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶರತ್ ರೈ, ಅನಿಲ್ ಕುಮಾರ್ ಹಾಗೂ ಚಾಲಕ ಶಶಿಕುಮಾರ್ ಮತ್ತು ಅಭಿಲಾಷ್ ಇದ್ದರು.