ಕಣಿವೆ, ಡಿ. ೬ : ಇಲ್ಲಿಗೆ ಸಮೀಪದ ಹಾರಂಗಿ ರಸ್ತೆಯ ಚಿಕ್ಕತ್ತೂರಿನಲ್ಲಿ ಅರೆಭಾಷೆ ಗೌಡ ಸಮಾಜದ ೧೩ ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಅರೆಭಾಷೆ ಗೌಡ ಸಂಘದ ಅಧ್ಯಕ್ಷ ಮತ್ತಾರಿ ಮುದ್ದಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಗರಗಂದೂರಿನ ಕೃಷಿಕ ಪೆರ್ಲಂಪಾಡಿ ಚೆಂಗಪ್ಪ ಉದ್ಘಾಟಿಸಿದರು.
ಸಂಘದ ಸ್ಥಾಪಕರೂ ಆದ ಸಂಘದ ಕಾರ್ಯದರ್ಶಿ ಚೆರಿಯಮನೆ ಮಾದಪ್ಪ ಮಾತನಾಡಿ, ಜನಾಂಗದ ಆಚಾರ ವಿಚಾರಗಳು ನಶಿಸದಂತೆ ಗೌಡ ಸಮಾಜದ ಬಂಧುಗಳು ಎಚ್ಚರ ವಹಿಸುವ ಮೂಲಕ ಅರೆಭಾಷೆಯ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದರು. ಸಮಾಜದ ಬಂಧುಗಳನ್ನು ವರ್ಷಕ್ಕೊಮ್ಮೆ ಒಂದೆಡೆ ಸೇರಿಸಿ ಅವರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿತ್ತು. ಆದರೆ ಕೊರೊನಾ ಕಾರಣಕ್ಕೆ ಸದ್ಯಕ್ಕೆ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದರು. ಚಿಕ್ಕತ್ತೂರು ಗ್ರಾಮದ ದೊಡ್ಡೇರ ಸುರೇಶ್ ಎಂಬವರ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರುಂಬಿ ಶಿವಪ್ಪ, ಮತ್ತಾರಿ ಕಾವೇರಮ್ಮ, ಮತ್ತಾರಿ ಹರ್ಷ, ಉಳಿಯಡ್ಕ ಜಗದೀಶ್, ಖಜಾಂಚಿ ಪೊಕ್ಕುಳಂಡ್ರ ಸುಂದರ, ಕುದುಪಜೆ ಹೊನ್ನಣ್ಣ, ಮಂಜ್ಞAಡ್ರ ಬೋಪಯ್ಯ ಮೊದಲಾದವರಿದ್ದರು. ಸಮಾಜ ಬಾಂಧವರು ಭಾಗವಹಿಸಿದ್ದರು.