ಗೋಣಿಕೊಪ್ಪಲು, ಡಿ.೬: ಬಾಳೆಲೆ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಗೋ ಮಾಂಸ ಮಾರಾಟದ ದಂಧೆ ನಡೆಯುತ್ತಿದ್ದು, ಆರೋಪಿ ಗಳನ್ನು ಕೂಡಲೇ ಬಂಧಿಸುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಳೆಲೆಯಲ್ಲಿ ಸೋಮವಾರದ ಸಂತೆ ದಿನವಾದ ಹಿನ್ನೆಲೆ ಮೂವರು ಅಸ್ಸಾಮಿ ಕಾರ್ಮಿಕರು ಗೋ ಮಾಂಸವನ್ನು ತಂದು ಬೇಕಾದವರಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿ ದ್ದಂತೆ ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯ ಕಾಟೀಮಾಡ ಶರೀನ್, ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಸುಕೇಶ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರ ಬಳಿ ಮಾರಾಟಕ್ಕೆ ತಂದಿದ್ದ ಗೋ ಮಾಂಸ ಪತ್ತೆಯಾಗಿದೆ.

ಕೂಡಲೇ ಇವರನ್ನು ಪೊಲೀಸ್ ವಶಕ್ಕೆ ಪಡೆಯುವಂತೆ ಬಾಳೆಲೆ ಪಟ್ಟಣದಲ್ಲಿ ಧರಣಿ ನಡೆಸಿ ವೃತ್ತ ನಿರೀಕ್ಷಕರು ಸ್ಥಳಕ್ಕೆ ಆಗಮಿಸುವಂತೆ ಸ್ಥಳೀಯರು ಪಟ್ಟು ಹಿಡಿದರು.

ಸುದ್ದಿ ತಿಳಿದು ಗೋಣಿಕೊಪ್ಪ ಪೋಲಿಸ್ ವೃತ್ತ ನಿರೀಕ್ಷಕ ಜಯರಾಂ, ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಬಾಳೆಲೆ ನಗರಕ್ಕೆ ಬಂದು ಮಾಹಿತಿ ಪಡೆದುಕೊಂಡರು.

ಈ ವೇಳೆ ಗ್ರಾಮಸ್ಥರು ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆಯಲು ಆಗ್ರಹಿಸಿದರು. ಈ ವೇಳೆ ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ಮಾತಿನ

(ಮೊದಲ ಪುಟದಿಂದ) ಚಕಮಕಿ ನಡೆಯಿತು.ಬಾಳೆಲೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಗೋ ಸಾಗಾಣಿಕೆ, ಕಳ್ಳತನ ನಡೆಯುತ್ತಿದೆ. ಇದೀಗ ಯಾವುದೇ ರೀತಿಯ ಭಯವಿಲ್ಲದೇ ಪಟ್ಟಣದಲ್ಲಿ ಗೋ ಮಾಂಸದ ಮಾರಾಟ ನಡೆಯುತ್ತಿರುವುದು ಆತಂಕದ ವಿಚಾರ. ಇದರ ಹಿಂದೆ ಯಾರ ಕೈವಾಡ ಅಡಗಿದೆ.? ಇಂತಹ ದಂಧೆಗೆ ಬೆಂಬಲ ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು,

ಎರಡು ದಿನದಲ್ಲಿ ಈ ಬಗ್ಗೆ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ತಪ್ಪಿದ್ದಲ್ಲಿ ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪೋಡಮಾಡ ಸುಕೇಶ್, ಚಕ್ಕೇರ ಸೂರ್ಯ ಎಚ್ಚರಿಸಿದರು.

ವೃತ್ತ ನಿರೀಕ್ಷಕ ಜಯರಾಂ ಸೂಕ್ತ ಕ್ರಮದ ಭರವಸೆ ನೀಡಿದರು.

ನಂತರ ಗೋ ಮಾಂಸ ಮಾರಾಟ ನಡೆಸಿದ ಆರೋಪದ ಮೇಲೆ ಸಲಮಾನ್, ಮಹಾಲಾಂ ಹಾಗೂ ಸಾಹಿಲೋನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಟ್ಟಣದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ರಸ್ತೆ ತಡೆಗೆ ಗ್ರಾಮಸ್ಥರು ಮುಂದಾಗಿದ್ದರು. ಅಂತಿಮವಾಗಿ ರಸ್ತೆ ತಡೆಯನ್ನು ಕೈ ಬಿಡುವ ಮೂಲಕ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

- ಹೆಚ್.ಕೆ.ಜಗದೀಶ್