ಮಡಿಕೇರಿ, ಡಿ. ೫: ಸಹಕಾರ ಭಾರತಿಯ ರಾಜ್ಯಕಾರ್ಯಕಾರಿಣಿ ತಾ. ೧ ರಂದು ಶಿವಮೊಗ್ಗದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಸಹಕಾರ ಭಾರತಿಯ ಜಿಲ್ಲಾ ಸಂಚಾಲಕ ನಂದಿನೆರವAಡ ರವಿಬಸಪ್ಪ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ರವಿ ಬಸಪ್ಪ ಅವರು, ಕೊಡಗು ಜಿಲ್ಲೆಯ ಮಾಹಿತಿಯನ್ನು ಒದಗಿಸಿ ಕೊಡಗಿನ ಎಲ್ಲಾ ಸಂಘಗಳ ಅಭಿವೃದ್ಧಿಗೆ ರಾಜ್ಯ ಸಮಿತಿಯ ಸಹಕಾರ ಕೋರಿದರು.
ತಾ. ೧೭ ರಿಂದ ೧೯ ರವರೆಗೆ ಲಕ್ನೋದಲ್ಲಿ ರಾಷ್ಟಿçÃಯ ಕಾರ್ಯಕಾರಿಣಿ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ ಪರವಾಗಿ ತಾವೂ ಸೇರಿದಂತೆ ಪದಾಧಿಕಾರಿಗಳಾದ ಉಮೇಶ್ ಉತ್ತಪ್ಪ, ಕನ್ನಂಡ ಸಂಪತ್, ಕಾಳನರವಿ, ಪಟ್ಟಡ ಮನು ರಾಮಚಂದ್ರ ಪಾಲ್ಗೊಳ್ಳಲಿರುವುದಾಗಿ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿ ಹಾಗೂ ರಾಷ್ಟಿçÃಯ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.