ಹೆಬ್ಬಾಲೆ, ಡಿ. ೫: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿ ಪುರಾತನ ದೇವಾಲಯ ಶಿಥಿಲ ಗೊಂಡ ಹಿನ್ನೆಲೆಯಲ್ಲಿ ರೂ. ೧.೨೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ಶ್ರೀ ಮಂಟಿಗಮ್ಮನವರ ಹಾಗೂ ಶ್ರೀ ಉಮಾಮಹೇಶ್ವರ ದೇವತಾ ಸಮಿತಿ ವತಿಯಿಂದ ಶಿಥಿಲ ಗೊಂಡಿರುವ ಹಳೇಯ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ಅದೇ ಜಾಗದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಗ್ರಾಮ ದೇವತೆ ಶಕ್ತಿ ಸ್ವರೂಪಿಣಿ ಶ್ರೀ ಮಂಟಿಗಮ್ಮ ತಾಯಿಯ ಗರ್ಭಗುಡಿ ಯಥಾಸ್ಥಿತಿ ಕಾಯ್ದು ಕೊಂಡು ಸುತ್ತಲು ನೂತನ ಕಟ್ಟಡ ಹೆಬ್ಬಾಲೆ, ಡಿ. ೫: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿ ಪುರಾತನ ದೇವಾಲಯ ಶಿಥಿಲ ಗೊಂಡ ಹಿನ್ನೆಲೆಯಲ್ಲಿ ರೂ. ೧.೨೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ಶ್ರೀ ಮಂಟಿಗಮ್ಮನವರ ಹಾಗೂ ಶ್ರೀ ಉಮಾಮಹೇಶ್ವರ ದೇವತಾ ಸಮಿತಿ ವತಿಯಿಂದ ಶಿಥಿಲ ಗೊಂಡಿರುವ ಹಳೇಯ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ಅದೇ ಜಾಗದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಗ್ರಾಮ ದೇವತೆ ಶಕ್ತಿ ಸ್ವರೂಪಿಣಿ ಶ್ರೀ ಮಂಟಿಗಮ್ಮ ತಾಯಿಯ ಗರ್ಭಗುಡಿ ಯಥಾಸ್ಥಿತಿ ಕಾಯ್ದು ಕೊಂಡು ಸುತ್ತಲು ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕುಮಾರ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಇದೊಂದು ಅಳಿಲು ಸೇವೆ ಎಂದು ಭಾವಿಸುತ್ತೇನೆ ಎಂದರು.
ಕೊಡ್ಲಿಪೇಟೆ ಕಿರುಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾರ್ಗ ದರ್ಶನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಿ ದೇವಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ. ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀ ಮಂಟಿಗಮ್ಮ ದೇವಿಯ ಹಬ್ಬವನ್ನು ದ್ವೆöÊವಾರ್ಷಿಕ (ಎರಡು ವರ್ಷಗಳಿ ಗೊಮ್ಮೆ)ವಾಗಿ ವಿಜೃಂಭಣೆಯಿAದ ನಡೆಸಲಾಗುತ್ತದೆ. ದೇವಿಯ ದರ್ಶನ ಪಡೆಯಲು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಭಕ್ತರ ಇಷ್ಟಾರ್ಥ ಈಡೇರಿಸುವಲ್ಲಿ ದೇವಿಯ ಮಹಿಮೆ ಅಪಾರವಾಗಿದೆ ಎಂದು ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ. ದೇವಾಲಯ ನಿರ್ಮಾಣ ಕಾರ್ಯಕ್ಕೆ ದಾನಿಗಳಿಂದ ವಸ್ತು ರೂಪದಲ್ಲಿ ಹಾಗೂ ಧನ ಸಹಾಯ ಹರಿದು ಬರುತ್ತಿದೆ. ಭಕ್ತರು ತನು, ಮನ, ಧನ ನೀಡಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿ ಮನವಿ ಮಾಡಿದೆ.
ದೇವಾಲಯ ನಿರ್ಮಾಣ ಕಾರ್ಯಕ್ಕೆ ಧನ ಸಹಾಯ ಮಾಡಲು ಇಚ್ಛಿಸುವ ಭಕ್ತರು ಶಿರಂಗಾಲ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಉಳಿತಾಯ ಖಾತೆ ನಂಬರ್ ೧೨೨೫೮೧೦೦೦೬೦೪೬೪. (IಈSಅ ಅಔಆಇ Pಏಉಃ ೦೦೧೨೨೫೮.)ಗೆ ನೇರವಾಗಿ ಹಣ ಜಮಾ ಮಾಡಬಹುದು.
ಜೀರ್ಣೋದ್ಧಾರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಕಾಳಿಂಗಪ್ಪ, ಅಧ್ಯಕ್ಷ ಎಸ್.ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ರುದ್ರಪ್ಪ, ಕಾರ್ಯದರ್ಶಿ ಎಸ್.ಎಸ್. ಮಹೇಶ್, ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಮುಖಂಡರಾದ ಎಸ್.ಎ. ಶ್ರೀನಿವಾಸ್, ಧನೇಂದ್ರ ಕುಮಾರ್, ಎಸ್.ಇ. ರಾಜಪ್ಪ, ಸಿ.ಎನ್. ಲೋಕೇಶ್, ಎಸ್.ಕೆ. ಪ್ರಸನ್ನ, ಎಸ್.ಸಿ. ನೇಮೇಶ್, ಎಸ್.ಪಿ. ಚೇತನ್, ಎಂ.ಎಸ್. ಗಣೇಶ್, ವಿಜಯ ಕುಮಾರ್ ಹಾಗೂ ಗ್ರಾಮಸ್ಥರು ನೂತನ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.