ಮಡಿಕೇರಿ, ಡಿ. ೫: ಇಟಲಿಯಲ್ಲಿ ನಡೆದ ಅಂರ‍್ರಾಷ್ಟಿçÃಯ ಕಾಫಿ ಸಂಸ್ಥೆಯಾದ ಇಲ್ಲಿ ಕಾಫೆಯು ಉತ್ತಮ ಗುಣಮಟ್ಟದ ಕಾಫಿ ಉತ್ಪಾದಕರಿಗೆ ನೀಡುವ ವಾರ್ಷಿಕ ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಅವಾರ್ಡ್ (ಇಡಿಟಿesಣo iಟಟಥಿ iಟಿಣeಡಿಟಿಚಿಣioಟಿಚಿಟ ಛಿoಜಿಜಿee ಚಿತಿಚಿಡಿಜ) ೨೦೨೧ರ ಪ್ರಶಸ್ತಿಗೆ ಮಾದಾಪುರ ಸಮೀಪದ ಜಂಬೂರು ಕಾಫಿ ಎಸ್ಟೇಟ್ ಆಯ್ಕೆಯಾಗಿದೆ.

ಕಳೆದ ೨೦೧೬ ರಿಂದ ನೀಡಲಾಗುತ್ತಿರುವ ಈ ೬ನೇ ವರ್ಷದ ಪ್ರಶಸ್ತಿಯನ್ನು ಟಾಟಾ ಕಾಫಿ ಲಿಮಿಟೆಡ್‌ನ ಜಂಬೂರು ಎಸ್ಟೇಟ್ ಪಡೆದುಕೊಂಡಿದೆ. ಕಳೆದ ಡಿಸೆಂಬರ್ ೨ ರಂದು ಇಟಲಿಯಲ್ಲಿ ನಡೆದ ಗುಣಮಟ್ಟದ ಕಾಫಿ ಸ್ಪಧೆೆðಯಲ್ಲಿ ಅತ್ಯುತ್ತಮ ಕಾಫಿ ಉತ್ಪಾದಿಸುವ ೯ ರಾಷ್ಟçಗಳ ೧೭ ಮಂದಿ ಬೆಳೆಗಾರರು ಭಾಗವಹಿಸಿದ್ದರು.

ಅಂರ‍್ರಾಷ್ಟಿçÃಯ ಪಾಕಶಾಸ್ತç ಮತ್ತು ಕಾಫಿ ತಜ್ಞರ ಸ್ವತಂತ್ರ ಸಮಿತಿಯು ಜಂಬೂರು ಎಸ್ಟೇಟ್‌ನ ಕಾಫಿಯನ್ನು ಬೆಸ್ಟ್ ಆಫ್ ದ ಬೆಸ್ಟ್ ಎಂದು ಗುರುತಿಸಿ ಮೊದಲ ಸ್ಥಾನ ನೀಡಿದೆ. ಈ ಸ್ಪರ್ಧೆಯಲ್ಲಿ ಜಂಬೂರು ಎಸ್ಟೇಟ್ ಅನ್ನು ಬಿ.ಎಂ. ನಾಚಪ್ಪ ಪ್ರತಿನಿಧಿಸಿದ್ದರು.

ಈ ಅಂರ‍್ರಾಷ್ಟಿçÃಯ ಎರಡನೇ ಉನ್ನತ ಪ್ರಶಸ್ತಿಯಾದ ‘ಕಾಫಿ ಲವರ್ಸ್ ಚಾಯ್ಸ್’ ಪ್ರಶಸ್ತಿಯನ್ನು ಗ್ವಾಟೆಮಾಲಾದ ಪ್ರೋಯೆಕ್ಟೊ ಲಿಫ್ಟ್ ಒಲೋಪಿಟಾ ಎಸ್ಟೇಟ್‌ಗೆ ನೀಡಲಾಯಿತು. ಈ ಸ್ಪರ್ಧೆಯಲ್ಲಿ ಬ್ರೆಜಿಲ್, ಕೊಲಂಬಿಯಾ, ಕೋಸ್ಟರಿಕಾ, ಎಲ್ ಸಾಲ್ವಡಾರ್, ಇಥಿಯೋಪಿಯಾ, ಗ್ವಾಟೆಮಾಲಾ, ಹೊಂಡುರಾಸ್, ಭಾರತ ಮತ್ತು ನಿಕರಾಗುವಾ ದೇಶದಿಂದ ತಲಾ ಮೂವರು ಬೆಳೆಗಾರರು ಭಾಗವಹಿಸಿ ದ್ದರು. ಭಾರತದಿಂದ ಚಿಕ್ಕಮಗಳೂರು ಜಿಲ್ಲೆಯ ಬಸ್ಕಲ್ ಎಸ್ಟೇಟ್‌ನ ಬಾಲರಾಜು ಮತ್ತು ಹಳ್ಳಿಹಿತ್ಲು ಎಸ್ಟೇಟ್‌ನ ಮಹೇಶ್ ಗೌಡ ಅವರೂ ಭಾಗವಹಿಸಿದ್ದರು.

ಜಂಬೂರು ಎಸ್ಟೇಟ್ ಸಮೃದ್ಧ ಸಾವಯವ ಮಣ್ಣಿನ ಪ್ರದೇಶ ಹೊಂದಿದ್ದು ಸಮುದ್ರ ಮಟ್ಟದಿಂದ ೯೫೦-೧೦೦೦ ಮೀಟರ್ ಎತ್ತರದಲ್ಲಿದೆ. ೧೮೭೦ ರಲ್ಲಿ ಸ್ಥಾಪಿತವಾದ ಈ ಎಸ್ಟೇಟ್ ೩೯೦ ಹೆಕ್ಟೇರ್ ತೋಟದಲ್ಲಿ ಅರೇಬಿಕಾ ಕಾಫಿಯನ್ನು ಮಾತ್ರ ಬೆಳೆಸುತ್ತದೆ. ಈ ಎಸ್ಟೇಟ್‌ನಲ್ಲಿ ‘ಜಂಬೂರ್ ಗೋಲ್ಡ್’ ಎಂಬ ಉತ್ತಮ ಗುಣಮಟ್ಟದ ಅರೇಬಿಕಾ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಲ್ಲಿಕಾಫೆ ಅಧ್ಯಕ್ಷ ಆಂಡ್ರಿಯಾ ಇಲ್ಲಿ ಅವರು ಭಾರತವು ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲ ಬಾರಿ ಆಗಿದೆ. ಭಾರತದಲ್ಲಿ ಎತ್ತರದ ಮರಗಳ ನೆರಳಿನಡಿಯಲ್ಲಿ ಕಾಳುಮೆಣಸು, ಕಿತ್ತಳೆ, ವೆನಿಲ್ಲಾ, ಏಲಕ್ಕಿ ಮತ್ತು ದಾಲ್ಚಿನ್ನಿ ಯಂತಹ ಇತರ ಬೆಳೆಗಳೊಂದಿಗೆ ಕಾಫಿ ಬೆಳೆಯುವ ದೇಶವಾಗಿದೆ ಎಂದರಲ್ಲದೆ ಮಿಶ್ರಬೆಳೆಯ ನಡುವೆಯೂ ಅತ್ಯುತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸಿರುವುದು ಕಾಫಿಗೆ ಉತ್ತಮ ಭವಿಷ್ಯ ಇರುವುದನ್ನು ತೋರಿಸುತ್ತಿದೆ ಎಂದರು.

ಇಲ್ಲಿಕಾಫೆ ಎಂಬುದು ಇಟಾಲಿ ಯನ್ ಕೌಟುಂಬಿಕ ಸಂಸ್ಥೆ ಆಗಿದ್ದು ಇದನ್ನು ೧೯೩೩ ರಲ್ಲಿ ಇಟಲಿಯ ಟ್ರಿಯೆಸ್ಟ್ನಲ್ಲಿ ಸ್ಥಾಪಿಸಲಾ ಯಿತು. ‘ಇಲ್ಲಿ’ ವಿಶ್ವದ ಪ್ರಮುಖ ಜಾಗತಿಕ ಕಾಫಿ ಬ್ರಾಂಡ್ ಆಗಿದ್ದು, ಉತ್ಕೃಷ್ಟ ದರ್ಜೆಯ ಅರೇಬಿಕಾ ಕಾಫಿಯನ್ನು ೧೪೦ ದೇಶಗಳಲ್ಲಿ ಕೆಫೆಗಳು, ರೆಸ್ಟೋರೆಂಟ್ ಗಳು, ಹೊಟೇಲ್‌ಗಳು ಮತ್ತು ಕಚೇರಿಗಳು ಮತ್ತು ಮನೆಗಳಲ್ಲಿ ಮಾರಾಟ ಮಾಡುತ್ತಿದೆ.