ಮಡಿಕೇರಿ, ಡಿ. ೫: ಪ್ರಖ್ಯಾತ ಪ್ರವಾಸಿ ತಾಣವಾಗಿರುವ ನಗರದ ರಾಜಾಸೀಟ್ ಪ್ರವೇಶ ದ್ವಾರದ ಪಕ್ಕದಲ್ಲಿರುವ ಟಿಕೆಟ್ ಕೌಂಟರ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ರಾತ್ರಿ ೧೦.೪೫ ರ ಸುಮಾರಿಗೆ ಹೆಲ್ಮೆಟ್ ಧರಿಸಿದ್ದ ಕಳ್ಳನೋರ್ವ ರಾಜಾಸೀಟ್ ಪ್ರವೇಶಕ್ಕೆ ಟಿಕೆಟ್ ನೀಡುವ ಕೌಂಟರ್‌ನ ಬಾಗಿಲಿನ ಬೀಗ ಹೊಡೆದು ಒಳನುಗ್ಗಿದ್ದಾನೆ. ಬಳಿಕ ಕೊಠಡಿಯಲ್ಲಿ ಹಣ ಹಾಗೂ ವಸ್ತುವಿಗಾಗಿ ಕೆಲಕಾಲ ಹುಡುಕಾಟ ನಡೆಸಿದ್ದಾನೆ. ಕೊಠಡಿಯಲ್ಲಿದ್ದ ಎರಡು ಚಿಕ್ಕ ಬಾಕ್ಸ್ಗಳನ್ನು ತೆರೆದು ಕಳ್ಳ ನೋಡಿದ್ದಾನೆ. ಏನೂ ಸಿಗದ ಹಿನ್ನೆಲೆ ಅಲ್ಲಿಂದ ಆತ ಪರಾರಿಯಾಗಿದ್ದಾನೆ.
ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.