ಪೊನ್ನಂಪೇಟೆ, ಡಿ. ೫: ಭಾರತ ಹಾಕಿ ತಂಡದ ಮಾಜಿ ನಾಯಕ, ಪದ್ಮಶ್ರೀ ಪುರಸ್ಕೃತ ಡಾ. ಎಂ.ಪಿ. ಗಣೇಶ್ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಾಗರಿಕ ವೇದಿಕೆಯ ಪದಾಧಿಕಾರಿ ಗಳೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಎಂ.ಪಿ. ಗಣೇಶ್ ಅವರು ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭ ಗಣೇಶ್ ಅವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ ನಾಗರಿಕ ವೇದಿಕೆಯ ಪದಾಧಿಕಾರಿಗಳು ಪೊನ್ನಂಪೇಟೆಯ ಆಸ್ಟೊçà ಟರ್ಫ್ ಮೈದಾನ ದುರಸ್ತಿ, ಹೊಸ ಕ್ರೀಡಾ ವಸತಿ ನಿಲಯ ಸ್ಥಾಪನೆ, ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ, ಕೊಡಗಿನಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ‍್ಯಾಕ್ ಮೈದಾನ ನಿರ್ಮಾಣದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಬಿ.ಪೂಣಚ್ಚ, ಕಾರ್ಯ ದರ್ಶಿ ಚೇಂದಿರ ಎನ್. ಭೀಮಯ್ಯ, ಉಪಾಧ್ಯಕ್ಷ ಹಾಗೂ ತಾಲೂಕು ಹೋರಾಟ ಸಮಿತಿಯ ಖಜಾಂಚಿ ಚೆಪ್ಪುಡಿರ ಕೆ. ಸೋಮಯ್ಯ, ನಿರ್ದೇಶಕರು ಗಳಾದ ಆಲಿರ ಎರ್ಮು ಹಾಜಿ, ಕಳ್ಳೇಂಗಡ ಎಂ.ಗಣಪತಿ, ಕಟ್ಟೇರ ಲಾಲಪ್ಪ, ರೇಖಾ ಶ್ರೀಧರ್, ಸದಸ್ಯರಾದ ಕಾಕಮಾಡ ಬಿ.ಅರ್ಜುನ್, ಚೆಪ್ಪುಡಿರ ಎಂ. ಮುತ್ತಪ್ಪ, ಕೋದೇಂಗಡ ಎ. ವಿಠಲ, ರಾಜೇಂದ್ರ, ಮತ್ರಂಡ ಅಪ್ಪಚ್ಚು, ಮೂಕಳೇರ ಕುಶಾಲಪ್ಪ, ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಹಿರಿಯ ಛಾಯಾಗ್ರಾಹಕ ಎಸ್.ಎಲ್. ಶಿವಣ್ಣ, ಸ್ಥಳೀಯರಾದ ಅಜ್ಜಿಕುಟ್ಟೀರ ಕರುಣ್ ಹಾಜರಿದ್ದರು.