ಭಾರತದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ

ನವದೆಹಲಿ, ಡಿ. ೫: ಭಾರತದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟç ರಾಜಧಾನಿ ದೆಹಲಿಯಲ್ಲಿ ೫ನೇ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ದೆಹಲಿಯಲ್ಲಿ ಮೊದಲನೇ ಓಮಿಕ್ರಾನ್ ಪ್ರಕರಣ ಪತ್ತೆಯಾದಂತಾಗಿದೆ. ಸೋಂಕಿತನನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇವರು ತಾಂಜಾನಿಯದಿAದ ಬಂದವರಾಗಿದ್ದರೆAದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೂ ೧೭ ಮಂದಿಯಲ್ಲಿ ಕೋವಿಡ್-೧೯ ಸೋಂಕು ಕಾಣಿಸಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ಸೋಂಕು ಭಾರತದಲ್ಲಿ ಮೊದಲು ಕರ್ನಾಟಕದ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಇದುವರೆಗೆ ಕರ್ನಾಟಕದಲ್ಲಿ ೨, ಗುಜರಾತ್‌ನಲ್ಲಿ ಒಂದು ಪ್ರಕರಣ, ಮುಂಬೈನಲ್ಲಿ ೧ ಓಮಿಕ್ರಾನ್ ಕೇಸ್ ದೃಢಪಟ್ಟಿತ್ತು. ಸದ್ಯ ರಾಷ್ಟç ರಾಜಧಾನಿಯಲ್ಲಿ ಇನ್ನೊಂದು ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಹೊಸ ರೂಪಾಂತರಿ ತಳಿಯ ಕೇಸ್‌ಗಳು ೫ಕ್ಕೆ ಏರಿಕೆ ಕಂಡಿವೆ. ಓಮಿಕ್ರಾನ್ ಈಗಾಗಲೇ ೩೦ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಮುನ್ನೆಚ್ಚರಿಕೆ ವಹಿಸಿದೆ. ಈ ಸೋಂಕು ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, ಮೂರನೇ ಅಲೆ ಉಂಟು ಮಾಡುವಷ್ಟು ಪ್ರಸರಣ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಭಾರತದಲ್ಲೂ ಕೂಡ ಓಮಿಕ್ರಾನ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಐವರು ಪುತ್ರಿಯರೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ರಾಜಸ್ಥಾನ, ಡಿ. ೫: ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ೫ ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ್ದು ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ. ಪತಿಯೊಂದಿಗೆ ದಿನನಿತ್ಯದ ಜಗಳದಿಂದ ಮಹಿಳೆ ಬೇಸತ್ತಿದ್ದಳು ಎಂದು ಹೇಳಲಾಗುತ್ತಿದೆ. ಮೃತ ಮಹಿಳೆಯನ್ನು ಕಲಿಯಾಹೆಡಿ ಗ್ರಾಮದ ನಿವಾಸಿ ಶಿವಲಾಲ್ ಬಂಜಾರ ಪತ್ನಿ ಬದ್ಮಾದೇವಿ ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಅಪ್ರಾಪ್ತ ಐವರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿತ್ರಿ (೧೪), ಅಂಕಲಿ (೮), ಕಾಜಲ್ (೬), ಗುಂಜನ್ (೪) ಮತ್ತು ಒಂದು ವರ್ಷದ ಅರ್ಚನಾ ಮೃತ ಐವರು ಅಪ್ರಾಪ್ತ ಬಾಲಕಿಯರು. ಪತಿ ಸಂಬAಧಿಕರೊಬ್ಬರ ಸಂತಾಪ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ಗ್ರಾಮಸ್ಥರು ಆರು ಶವಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಬೆಂಗಳೂರು, ಡಿ. ೫: ೧೪ ವರ್ಷದ ಬಾಲಕಿ ಅಪಾರ್ಟ್ಮೆಂಟ್‌ನ ೧೨ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹುಳಿಮಾವಿನಲ್ಲಿ ಭಾನುವಾರ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೃತ ಬಾಲಕಿ ಖಾಸಗಿ ಶಾಲೆಯಲ್ಲಿ ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮೃತ ಬಾಲಕಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದ್ದು ಸಿವಿಲ್ ಕಾಂಟ್ರಾಕ್ಟರ್ ವೀರೇಂದ್ರ ಅವರ ಪುತ್ರಿಯಾಗಿದ್ದಾಳೆ. ಈಕೆ ಹುಳಿಮಾವುನ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದಾರೆ. ರಾತ್ರಿ ೧೦.೩೦ಕ್ಕೆ ಈ ಘಟನೆ ನಡೆದಿದ್ದು, ಊಟದ ನಂತರ ಡ್ರಾಯಿಂಗ್ ರೂಮ್‌ನಲ್ಲಿರುವ ಬಾಲ್ಕನಿಗೆ ತೆರಳಿದ್ದರು. ಕೆಲವು ಸಮಯದ ಬಳಿಕ ಆಕೆಯ ಸಹೋದರನಿಗೆ ಆಕೆ ಚೀರುತ್ತಿದ್ದ ಶಬ್ದ ಕೇಳಿಬಂದಿದ್ದು ಆತ ಅಲ್ಲಿಗೆ ತೆರಳಿ ನೋಡುವ ವೇಳೆಗೆ ಯುವತಿ ಕೆಳಗೆ ಬಿದ್ದಿದ್ದಳು. ಭದ್ರತಾ ಸಿಬ್ಬಂದಿಯೂ ಸಹ ಆಕೆ ಕೆಳಗೆ ಬಿದ್ದ ಶಬ್ದ ಕೇಳಿದ್ದು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಜವಾದ್ ಚಂಡಮಾರುತ;ಒಡಿಶಾದಲ್ಲಿ ಭಾರಿ ಮಳೆ

ಭುವನೇಶ್ವರ್, ಡಿ. ೫: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತದ ಪರಿಣಾಮವಾಗಿ ಭಾನುವಾರದಂದು ಒಡಿಶಾದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಕಳೆದ ೬ ಗಂಟೆಗಳಲ್ಲಿ ಚಂಡಮಾರುತ ಕಿ.ಮೀ. ಪ್ರತಿ ಗಂಟೆಗೆ ೨೦ ವೇಗದಲ್ಲಿ ಉತ್ತರ-ಈಶಾನ್ಯದತ್ತ ಚಲಿಸಿದೆ ಎಂದು ಹವಾಮಾನ ಇಲಾಖೆಯ ಕಚೇರಿ ಬೆಳಿಗ್ಗೆಯ ಬುಲೆಟಿನ್‌ನಲ್ಲಿ ತಿಳಿಸಿತ್ತು. ಮಧ್ಯಾಹ್ನದ ವೇಳೆಗೆ ಚಂಡಮಾರುತ ಮತ್ತಷ್ಟು ವಾಯುಭಾರ ಕುಸಿತದೊಂದಿಗೆ ಪುರಿ ಬಳಿ ಇರುವ ಒಡಿಶಾ ಕಡಲ ತೀರಕ್ಕೆ ತಲುಪಿದೆ.

ಭಯೋತ್ಪಾದಕರೆಂದು ಭಾವಿಸಿ ನಾಗರಿಕರ ಹತ್ಯೆ

ಗುವಾಹಟಿ, ಡಿ. ೫: ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳು ೧೩ ನಾಗರಿಕರನ್ನು ಭಯೋತ್ಪಾದಕರೆಂದು ಭಾವಿಸಿ ಹತ್ಯೆ ಮಾಡಿವೆ. ಮೋನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ಯಾರಾ ಕಮಾಂಡೋಗಳೆAದು ಹೇಳಲಾಗಿರುವ ಸಿಬ್ಬಂದಿಗಳು ನಾಗರಿಕರನ್ನು ಉಗ್ರರೆಂದು ತಪ್ಪಾಗಿ ಭಾವಿಸಿ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಟ್ರಕ್‌ನಲ್ಲಿ ವಾಪಸ್ಸಾಗುತ್ತಿದ್ದರು. ದೈನಂದಿನ ವೇತನ ಪಡೆಯುತ್ತಿದ್ದ ಕಾರ್ಮಿಕರಾಗಿದ್ದ ಇವರು ವಾರಾಂತ್ಯಗಳಲ್ಲಿ ಮಾತ್ರ ಮನೆಗೆ ಬರುತ್ತಿದ್ದರು. ಅಂತೆಯೇ ಶನಿವಾರದಂದು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಅವರನ್ನು ಭಯೋತ್ಪಾದಕರೆಂದು ಭಾವಿಸಿ ಪ್ಯಾರಾ ಕಮಾಂಡೋಗಳು ದಾಳಿ ನಡೆಸಿದ್ದಾರೆ. ಮೃತರು ಕೊನ್ಯಾಕ್ (ಬುಡಕಟ್ಟು) ಸಮುದಾಯದವರಾಗಿದ್ದು, ಘಟನೆಯಲ್ಲಿ ಸ್ಥಳದಲ್ಲೇ ೬ ಮಂದಿ ಸಾವನ್ನಪ್ಪಿದ್ದರೆ, ಚಿಕಿತ್ಸೆ ಪಡೆಯುತ್ತಿದ್ದ ೭ ಮಂದಿ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ೧೧ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬುಡಕಟ್ಟು ನಾಯಕ ಹೇಳಿದ್ದಾರೆ. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ನ್ಯಾಯದಾನವಾಗದೇ ಇದ್ದಲ್ಲಿ ಶವಗಳನ್ನು ಕುಟುಂಬ ಸದಸ್ಯರು ಪಡೆಯುವುದಿಲ್ಲ. ನಾವು ಅಂರ‍್ರಾಷ್ಟಿçÃಯ, ರಾಷ್ಟಿçÃಯ ಮಾನವಹಕ್ಕುಗಳ ಸಂಘಟನೆಗಳ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಸಂತ್ರಸ್ತರು ಜೀವಿಸುತ್ತಿದ್ದ ಗ್ರಾಮದಿಂದ ಅವರು ಕೆಲಸ ಮಾಡುತ್ತಿದ್ದ ಗಣಿ ೧೫ ಕಿ.ಮೀ. ದೂರವಿದೆ. ಬುಡಕಟ್ಟು ಮಂದಿ ಸಾವನ್ನಪ್ಪಿರುವುದರಿಂದ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‌ಪಿಒ) ವಾರ್ಷಿಕ ಹಾರ್ನ್ಬಿಲ್ ಹಬ್ಬವನ್ನು ರದ್ದುಪಡಿಸಿದೆ.

ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ

ಲುಮಾಜಾಂಗ್, ಡಿ. ೫: ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಸ್ಫೋಟ ಸಂಭವಿಸಿದ್ದು, ಇದುವರೆಗೂ ಕನಿಷ್ಟ ೧೩ ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಪತ್ತು ನಿರ್ವಹಣಾ ತಂಡ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಜಾವಾ ದ್ವೀಪದ ಅತೀ ಎತ್ತರದ ಪರ್ವತವಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇದರಿಂದ ಲಾವಾ ರಸವು ಹತ್ತಿರದಲ್ಲಿದ್ದ ಪೂರ್ವ ಜಾವಾ ಪ್ರಾಂತ್ಯದ ಹಳ್ಳಿಗಳನ್ನು ಆವರಿಸಿದ್ದು ಜನರು ಭಯಭೀತರಾಗಿ ಓಡಿಹೋಗಿದ್ದಾರೆ. ಜ್ವಾಲಾಮುಖಿ ಸ್ಫೋಟದ ಪರಿಣಾಮ ಜಾವಾ ಪ್ರಾಂತ್ಯದ ಹತ್ತಿರದ ನಗರಗಳಾದ ಲಮಾಂಗ್ ಮತ್ತು ಮಲಂಗ್ ನಡುವಿನ ಸೇತುವೆ ಕುಸಿತಗೊಂಡಿದೆ. ದುರಂತದಲ್ಲಿ ಸಾವನ್ನಪ್ಪಿದ್ದ ೧೩ ಜನರಲ್ಲಿ ಇಬ್ಬರನ್ನು ಮಾತ್ರ ಗುರುತಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

ಇಂದು ಮಹತ್ವದ ಸಭೆ

ನವದೆಹಲಿ, ಡಿ. ೫: ಭಾರತ-ರಷ್ಯಾ ನಡುವೆ ತಾ. ೬ ರಂದು ಸಭೆ ನಡೆಯಲಿದ್ದು, ಈ ವೇಳೆ ರಕ್ಷಣಾ ಕ್ಷೇತ್ರ, ಇಂಧನ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಸಹಿ ಹಾಕಲಿದ್ದಾರೆ. ಸಭೆಯಲ್ಲಿ ಅಫ್ಘಾನಿಸ್ತಾನ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ಉಗ್ರಸಂಘಟನೆಗಳಾದ ಲಷ್ಕರ್-ಇ-ತಹಿಬಾ, ಜೈಷ್-ಇ-ಮೊಹಮ್ಮದ್‌ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ.