ಶನಿವಾರಸಂತೆ, ಡಿ. ೪: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಗಣಪತಿ-ಚಂದ್ರಮೌಳೇಶ್ವರ-ಪಾರ್ವತಿ ದೇವಾಲಯದಲ್ಲಿ ಸೇವಾ ಸಮಿತಿ ವತಿಯಿಂದ ವಾರ್ಷಿಕ ಪೂಜೆ ಲಕ್ಷ ದೀಪೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ಆಚರಿಸಲಾಯಿತು.
ಅರ್ಚಕ ಮಾಲತೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಮೊದಲಿಗೆ ಗಣಪತಿ ದೇವರಿಗೆ ವಿಶೇಷ ಪ್ರಾರ್ಥನೆ, ಚಂದ್ರಮೌಳೇಶ್ವರನಿಗೆ ರುದ್ರಾಭಿಷೇಕ, ಪಂಚಾಮೃತಭಿಷೇಕ, ಬಿಲ್ವಾರ್ಚನೆ ಮಾಡಲಾಯಿತು. ದೇವಾಲಯದ ಪ್ರಾಂಗಣದಲ್ಲಿ ನೂರಾರು ಭಕ್ತರು ಲಕ್ಷ ದೀಪಗಳನ್ನು ಬೆಳಗಿಸಿದರು.
ನಂತರ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಾಯಿತು.
ಭಕ್ತರಿಗೆ ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಗಿತ್ತು. ಸಿಡಿ ಮದ್ದಿನ ಪ್ರದರ್ಶನ ಜನಮನ ರಂಜಿಸಿತು. ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.