ಸಿದ್ದಾಪುರ, ಡಿ ೪ : ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ನಲಿ-ಕಲಿ ವಿಭಾಗದ ಮಕ್ಕಳಿಗಾಗಿ ಸಿದ್ದಾಪುರದ ಸೂಪರ್‌ಟೆಕ್ಸ್ ಬಟ್ಟೆ ಅಂಗಡಿಯ ಮಾಲೀಕರು ೩೦ ಕುರ್ಚಿಗಳನ್ನು ಉದಾರವಾಗಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಭಾರತಿ ಭಕ್ತವತ್ಸಲ ಹಾಗೂ ಶಿಕ್ಷಕಿಯರು ಹಾಜರಿದ್ದರು.