ನಾಪೋಕ್ಲು, ಡಿ. ೪: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಮೌಲಾನ ಶಾಫಿ ಶಹದಿ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ತಾ. ೬ ರಂದು (ನಾಳೆ) ಪೂರ್ವಾಹ್ನ ೧೦.೩೦ ಗಂಟೆಗೆ ಮಡಿಕೇರಿಗೆ ಆಗಮಿಸುವ ಅವರು ೧೧ ಗಂಟೆಗೆ ಕೊಟ್ಟಮುಡಿ ಮರ್ಕಝ್ ಹಿದಾಯದಲ್ಲಿ ನಡೆಯುವ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಎಮ್ಮೆಮಾಡು ಸೂಫಿ ಶಹೀದ್ ದರ್ಗಾಕ್ಕೆ ಭೇಟಿ ನೀಡಿ ಮೈಸೂರಿಗೆ ಹಿಂತಿರುಗಲಿದ್ದಾರೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಪ್ರಕಟಣೆ ತಿಳಿಸಿದೆ.