ಖಗೋಳತಜ್ಞರಿಂದ ಈ ವರ್ಷ ಗುರುತಿಸಲ್ಪಟ್ಟ ಲಿಯೊನಾರ್ಡ್ ಹೆಸರಿನ ಧೂಮಕೇತು (ಅomeಣ), ಸೂರ್ಯನ ಸುತ್ತದ ತನ್ನ ಕಕ್ಷೆಯಲ್ಲಿ, ಸೂರ್ಯನನ್ನು ಸಮೀಪಿಸುತ್ತಿದ್ದು, ಭೂಗ್ರಹ ನಿವಾಸಿಗಳಿಗೆ ಬರೀ ಕಣ್ಣಿನಲ್ಲಿ ನೋಡುವ ಭಾಗ್ಯ ದೊರಕಲಿದೆ. ಈ ವರ್ಷದ ಜನವರಿ ೩ ರಂದು ಯುನೈಟೆಡ್ ಕಿಂಗ್‌ಡÀಮ್‌ನ ಖಗೋಳತಜ್ಞ ಗ್ರೆಗ್ ಲಿಯೊನಾರ್ಡ್ ಎಂಬವರು ಇದನ್ನು ಕಂಡುಹಿಡಿದು, ಅವರ ಹೆಸರಿನಲ್ಲಿಯೇ ಧೂಮಕೇತುವನ್ನು ಕೂಡ ಹೆಸರಿಸಿದರು. ಅವರು ಇದನ್ನು ಕಂಡುಹಿಡಿದಾಗ ಸೂರ್ಯನಿಂದ ಸುಮಾರು ೭೫೦ ಮಿಲಿಯನ್ ಕಿ.ಮೀ ನಷ್ಟು ದೂರದಲ್ಲಿದ್ದ ಧೂಮಕೇತು, ಡಿಸೆಂಬರ್ ೬ ರಂದು ಭೂಗ್ರಹದಿಂದ ಸುಮಾರು ೩೧.೬ ಮಿಲಿಯನ್ ಕಿ.ಮೀ ದೂರದಲ್ಲಿ ಗೋಚರಿಸಲಿದೆ. ಇದುವರೆಗೆ ಕೇವಲ ಅತ್ಯಂತ ದುಬಾರಿ ಗಣಕೀಕೃತ ಟೆಲಿಸ್ಕೋಪ್‌ಗಳ ಸಹಾಯದಿಂದ ಮಾತ್ರ ಕಾಣಿಸುತ್ತಿದ್ದ ಲಿಯೋನಾರ್ಡ್ ಡಿಸೆಂಬರ್ ತಿಂಗಳಿನಲ್ಲಿ ಬರಿ ಕಣ್ಣಿಗೆ ಕಾಣಸಿಗಲಿದೆ.

ಭಾರತದಲ್ಲಿ ಡಿಸೆಂಬರ್ ೬ ರಂದು ಅತ್ಯಂತ ಪ್ರಕಾಶಿತ

ಡಿಸೆಂಬರ್ ೬ರಂದು (ನಾಳೆ)ರ ಮುಂಜಾನೆ ಸೂರ್ಯ ಉದಯಿಸುವುದಕ್ಕಿಂತ ೧ ಗಂಟೆ ಮುಂಚಿತವಾದರೂ ಎದ್ದು ಪೂರ್ವ ದಿಕ್ಕಿನತ್ತ ಕಣ್ಣು ಹಾಯಿಸಿದರೆ ಆರ್ಕ್ಟ್ರಸ್ (ಕೆಂಪು ಬಣ್ಣದ ನಕ್ಷತ್ರ) ಹೆಸರಿನ ಪ್ರಕಾಶಯುತ ನಕ್ಷತ್ರ ಹೊಳೆಯುತ್ತಿರುತ್ತದೆ. ಇದರ ಎಡಭಾಗಕ್ಕೆ ಕಣ್ಣು ಹಾಯಿಸಿದರೆ ನೀಲಿ ಹಾಗೂ ಬಿಳಿ ಬಣ್ಣ ಮಿಶ್ರಿತ ಲಿಯೋ ಧೂಮಕೇತುವಿನ ದರ್ಶನ ಪಡೆಯಬಹುದಾಗಿದೆ. ಈ ಧೂಮಕೇತು ರೆಟ್ರೋಗ್ರೇಡ್ ಕಕ್ಷೆಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತೆ, ಅಂದರೆ ಗ್ರಹಗಳು ಸೂರ್ಯನ ಸುತ್ತ ಸುತ್ತುವ ಕಕ್ಷಾಮಾರ್ಗಕ್ಕೆ ತದ್ವಿರುದ್ಧವಾಗಿ ಈ ಧೂಮಕೇತುವಿನ ಕಕ್ಷೆಯಿದೆ. ಸೂರ್ಯನ ಸುತ್ತದ ಇದರ ಕಕ್ಷಾ ಅವಧಿ ಸುಮಾರು ೮೦,೦೦೦ ವರ್ಷ ಎಂದು ಅಂದಾಜಿಸಲಾಗಿದ್ದು, ಮತ್ತೆ ಇದನ್ನು ನೋಡುವ ಭಾಗ್ಯ ಈ ಜೀವಮಾನದಲ್ಲಿ ಬರಲು ಅಸಾಧ್ಯ. ಡಿಸೆಂಬರ್ ೬ ರಂದು ಇದನ್ನು ನೋಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಂತರ ಡಿಸೆಂಬರ್ ೧೨ ರ ಬಳಿಕ ಪೂರ್ವ ಬಾನಂಚಿನ ಕೆಳಗೆ ಸರಿಯಲಿದ್ದು, ಡಿಸೆಂಬರ್ ೧೭ ರ ಬಳಿಕ ಕೆಲವು ದಿನಗಳು ಸೂರ್ಯಾಸ್ತ ಬಳಿಕ ಪಶ್ಚಿಮ ದಿಕ್ಕಿನಲ್ಲಿ ಕಡಿಮೆ ಪ್ರಕಾಶತೆಯಿಂದ ಗೋಚರಿಸಲಿದೆ. ೨೦೨೨ ರ ಜನವರಿ ೩ ರಂದು ಸೂರ್ಯನಿಂದ ಕೇವಲ ೫೭.೨ ಮಿಲಿಯನ್ ಕಿ.ಮೀ ನಷ್ಟು ದೂರದಲ್ಲಿ ರಲಿದ್ದು, ಬಳಿಕ ಹೊರಬಾಹ್ಯಾಕಾಶಕ್ಕೆ ಸಾಗಿ ಮರೆಯಾಗಲಿದೆ.

ಧೂಮಕೇತು ಎಂದರೇನು..?

ಐಸ್, ಧೂಳು ಹಾಗೂ ಕಲ್ಲುಗಳಿಂದ ಕೂಡಿರುವ ಸೂರ್ಯನ ಸುತ್ತ ಚಲಿಸುವ, ವಾತಾವರಣವಿರುವ (ಕ್ಷÄದ್ರಗ್ರಹಗಳಿಗೆ(ಂsಣeಡಿoiಜ) ವಾತಾವರಣವಿರುವುದಿಲ್ಲ) ಒಂದು ಪದಾರ್ಥಕ್ಕೆ ಧೂಮಕೇತು ಎನ್ನುತ್ತಾರೆ. ಅಂಡಾಕಾರದ ಕಕ್ಷೆ ಹೊಂದಿರುವ ಧೂಮಕೇತುಗಳು, ಕಕ್ಷಾ ಪ್ರದಕ್ಷಿಣೆಯಲ್ಲಿ ಸೂರ್ಯನಿಂದ ಸಮಾನ ದೂರ ಹೊಂದಿರುವುದಿಲ್ಲ. ಆದ್ದರಿಂದ ಅದು ಒಮ್ಮೆ ಸೂರ್ಯನತ್ತ ಸಮೀಪಿಸಿದರೆ ಮತ್ತೆ ಸೂರ್ಯನ ಸಮೀಪ ಬರಬೇಕೆಂದರೆ ಒಂದು ಸಂಪೂರ್ಣ ಪ್ರದಕ್ಷಿಣೆಯ ಅಗತ್ಯವಿದೆ. (ಹೇಲೀಸ್ ಎಂಬ ಹೆಸರಿನ ಕಾಮೆಟ್ ೭೬ ವರ್ಷಗಳಿಗೊಮ್ಮೆ ಸೂರ್ಯನತ್ತ ಕಾಣಸಿಗುತ್ತದೆ. ಆದರೆ ಲಿಯೋನಾರ್ಡ್ ೮೦,೦೦೦ ವರ್ಷಗಳಿಗೊಮ್ಮೆ ಗೋಚರಿಸುತ್ತದೆ.) ಸೂರ್ಯನನ್ನು ಸಮೀಪಿಸುವಾಗ ಉಷ್ಣಾಂಶ ಹೆಚ್ಚಾಗುವ ಕಾರಣ ಅದರಲ್ಲಿನ ಐಸ್ ಪದಾರ್ಥಗಳು ಅನಿಲವಾಗಿ ಮಾರ್ಪಾಡಾಗುವ ಮೂಲಕ ರೋಮಾಂಚಕ ಪ್ರದರ್ಶನ ನೀಡುತ್ತವೆ. ಅಂದಾಜು ಸುಮಾರು ೧೦ ಕಿ.ಮೀ ಅಗಲ ಹೊಂದಿರುವ ಧೂಮಕೇತುಗಳು, ಸೂರ್ಯನತ್ತ ಆಗಮಿಸುವಾಗ ಅವುಗಳಲ್ಲಿನ ಐಸ್ ಅನಿಲ ರೂಪಕ್ಕೆ ಮಾರ್ಪಡುವಾಗ ಗ್ರಹಗಳ ಗಾತ್ರಗಳಿಗಿಂತಲೂ, ಅನಿಲಗಳು ವಿಸ್ತೀರ್ಣ ಹೊಂದಲಿದೆ. ಈ ಕಾರಣದಿಂದಾಗಿ ಭೂಮಿಯಿಂದ ಇವುಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

-ಪ್ರಜ್ವಲ್ ಜಿ.ಆರ್.