*ಗೋಣಿಕೊಪ್ಪ, ಡಿ. ೪: ಉಮಾಮಹೇಶ್ವರಿ ದೇವಸ್ಥಾನ ವತಿಯಿಂದ ನಡೆಯುವ ಶ್ರೀ ಸುಬ್ರಹ್ಮಣ್ಯ ಷಷ್ಠಿಯು ತಾ. ೬ ರಿಂದ ತಾ. ೧೧ ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಈ ಸಂಬAಧ ಮಾಹಿತಿ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಸುಬ್ರಹ್ಮಣ್ಯ ಸ್ವಾಮಿಯ ಷÀಷ್ಠಿ ಪ್ರಯುಕ್ತ ತಾ. ೬ ರಂದು, ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಸಂಜೆ ೭ಕ್ಕೆ ದೀಪಾರಾಧನೆ ಸಂಜೆ ೮ಕ್ಕೆ ಮಹಾ ಮಂಗಳಾರಾತಿ.

ತಾ. ೭ ರಂದು, ಪ್ರಾತಃಕಾಲ ೫ಕ್ಕೆ ಇರುಬೆಳಕು, ದೇವರ ಪ್ರದಕ್ಷಿಣೆ ಮಧ್ಯಾಹ್ನ ೧೨.೩೦ಕ್ಕೆ ಮಹಾ ಮಂಗಳಾರತಿ, ರಾತ್ರಿ ೭ಕ್ಕೆ ದೀಪಾರಾಧನೆ, ದೇವರ ಪ್ರದಕ್ಷಿಣೆ ರಾತ್ರಿ ೮ಕ್ಕೆ ಮಹಾ ಮಂಗಳಾರತಿ. ತಾ. ೮ ರಂದು, ಪ್ರಾತಃಕಾಲ ೫ಕ್ಕೆ ದೇವರ ಪ್ರದಕ್ಷಿಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾ ಮಂಗಳಾರತಿ, ಸಂಜೆ ೭ಕ್ಕೆ ದೇವರ ಪ್ರದಕ್ಷಿಣೆ, ದೀಪಾರಾಧನೆ ರಾತ್ರಿ ೮ಕ್ಕೆ ಮಹಾ ಮಂಗಳಾರತಿ.

ತಾ. ೯ ರಂದು, ಅಳವಡಿಸಿ ಪ್ರಾತಃಕಾಲ ೫ಕ್ಕೆ ಇರುಬೆಳಕು, ದೇವರ ಪ್ರದಕ್ಷಿಣೆ ಪಂಚಾಮೃತ ಇತ್ಯಾದಿ ಸೇವೆಗಳು, ಮಧ್ಯಾಹ್ನ ೧.೩೦ಕ್ಕೆ ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಸಂಜೆ ೭ಕ್ಕೆ ದೇವರ ನೃತ್ಯ. ಸಾಮೂಹಿಕ ವಸಂತ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ.

ತಾ. ೧೦ ರಂದು, ಬೆಳಿಗ್ಗೆ ೭ಕ್ಕೆ ಭಕ್ತಾದಿಗಳಿಂದ ಸೇವೆ, ತಲೆಮುಡಿ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಇತ್ಯಾದಿ ಸೇವೆಗಳು ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ, ಸಂಜೆ ೭ಕ್ಕೆ ಅವಭೃತ ಸ್ನಾನ, ರಾತ್ರಿ ೮ಕ್ಕೆ ದೇಗುಲದಲ್ಲಿ ಸ್ವಾಮಿಯ ಪ್ರದಕ್ಷಿಣೆ, ರಾತ್ರಿ ೯ಕ್ಕೆ ಮಹಾ ಮಂಗಳಾರತಿ.

ತಾ. ೧೧ ರಂದು, ಹಬ್ಬದ ಪ್ರಯುಕ್ತ ಕಳಶ ಪೂಜೆ ಇರುವುದರಿಂದ ಮಧ್ಯಾಹ್ನದ ತನಕ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಜನವರಿ ೮ ರಂದು ಕಿರುಷಷ್ಠಿ ಹಬ್ಬಕ್ಕೆ ಹರಿಕೆ, ತಲೆಮುಡಿ, ತುಲಾಬಾರ, ರುದ್ರಾಭಿಷೆೆÃಕ, ಕ್ಷೀರಾಭಿಷೇಕ, ಎಳನೀರು, ಆಡುರೂಪ ಮತ್ತು ಅನ್ನಸಂತರ್ಪಣೆ ಏರ್ಪಡಿಸ ಲಾಗಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನದ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಜಪ್ಪೆಕೊಡಿ ರಾಜ ಉತ್ತಪ್ಪ, ಕುಲ್ಲಚಂಡ ಪ್ರಮೋದ್ ಗಣಪತಿ, ಶೋಬಿತ್ ಪಿ.ವಿ., ವಿ.ಟಿ. ವಾಸು, ಕಾಡ್ಯಮಾಡ ಚೇತನ್, ಜೆ.ಕೆ. ಸೋಮಣ್ಣ, ಪೊನ್ನಮಾಡ ಬೋಜಪ್ಪ, ಕೊಪ್ಪಿರ ಸನ್ನಿ ಸೋಮಯ್ಯ, ಸುರೇಶ್ ಹಾಗೂ ವ್ಯವಸ್ಥಾಪಕ ಮಧು ಉಪಸ್ಥಿತರಿದ್ದರು.