ಗೋಣಿಕೊಪ್ಪ, ಡಿ. ೩: ಕೊಡವರ ಸಾಂಪ್ರದಾಯಿಕ ಪದ್ಧತಿಯ ಉಳಿವಿಗಾಗಿ ಕೊಡವಾಮೆಕಾಯಿತ್ ಎಂಬ ಉದ್ದೇಶದಿಂದ ಕೊಡವ ಕೂಟಾಳಿಯಡ ಕೂಟದಿಂದ “ಪದ್ಧತಿ ಪಡಿಕನ - ಸಮ್ಮಂದ ಅಡ್‌ಕನ” ಎಂಬ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ತಿಳಿಸಿದ್ದಾರೆ.

ಕೊಡವ ಕೂಟಾಳಿಯಡ ಕೂಟ ಕೊಡವ ಜನಾಂಗದಲ್ಲಿ ಹಲವು ಜನರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಂಡು ಬಂದಿದೆ. ಕೊಡವ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಕೊಡವ ಮದುವೆಗಳಲ್ಲಿ ಸಮ್ಮಂದ ಅಡ್‌ಕೊ ಪದ್ಧತಿ ವಿಚಾರದಲ್ಲಿ ಹಲವು ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವÀ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಕೊಡವ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳಸುವ ಉದ್ದೇಶದಿಂದ ತರಬೇತಿ ನಡೆಸಲು ನಿರ್ಧರಿಸಿದ್ದೇವೆ ಇದಕ್ಕೆ ಎಲ್ಲಾ ಸಂಘ-ಸAಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

“ಪದ್ಧತಿ ಪಡಿಕನ- ಸಮ್ಮಂದ ಅಡ್‌ಕನ” ಎಂಬ ತರಬೇತಿ ಶಿಬಿರವನ್ನು ಬೇರೆ ಬೇರೆ ಗ್ರಾಮಗಳಿಗೆ ತೆರಳಿ ಮಂದ್, ಶಾಲೆಗಳಲ್ಲಿ ಆಯೋಜಿಸಲಾಗುತ್ತದೆ. ಶಿಬಿರದಲ್ಲಿ ಸಮ್ಮಂದ ಅಡ್‌ಕನ ವಿಷಯದ ಪುಸ್ತಕ ಬಿಡುಗಡೆಗೊಳಿಸಲಾಗುವುದು ಎಂದು ಕೊಡವ ಕೂಟಾಳಿಯಡ ಕೂಟ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಹೇಳಿದರು. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಚಿಮ್ಮಚಿರ ಪವಿತ ರಜನ್-೮೭೬೨೩೦೪೧೭೫, ಚೆಟ್ಟೋಳಿರ ಶರತ್ ಸೋಮಣ್ಣ- ೯೯೭೨೫೩೮೦೩೦ ಸಂರ್ಪಕಿಸುವAತೆ ಕೋರಲಾಗಿದೆ.