ಕೂಡಿಗೆ, ಡಿ. ೪: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವ ಮತ್ತು ವಿದ್ಯುತ್ ಅಲಂಕೃತ ಮಂಟಪಗಳ ಮೆರವಣಿಗೆ ಮತ್ತು ಪೂಜೋತ್ಸವ ಕಾರ್ಯಕ್ರಮಗಳು ತಾ. ೫ ರಂದು (ಇಂದು) ನಡೆಯಲಿವೆ.
ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ, ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತಾ. ೫ ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹಃ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಕಲಶಗಳ ಸ್ಥಾಪನೆ, ನಂತರ ಗಣಹೋಮ, ದುರ್ಗಾಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಧ್ಯಾಹ್ನ ಅಮ್ಮನವರಿಗೆ ಅಭಿಷೇಕ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಯ ಸೇವೆಗಳು ನಡೆಯಲಿವೆ.
ನಂತರ ಸಂಜೆ ೮ ಗಂಟೆಗೆ ಅಮ್ಮನವರಿಗೆ ಹಣ್ಣು ತುಪ್ಪ ನೈವೇದ್ಯ, ರಾತ್ರಿ ೧೦ ಗಂಟೆಗೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕೊಂಡು ಹೊರಡುವ ಉತ್ಸವ ದೊಂದಿಗೆ ಹರಕೆ ಹೊತ್ತ ಭಕ್ತಾದಿಗಳು ಮೆರವಣಿಗೆ ನಂತರ ರಾತ್ರಿ ೧೨ ಗಂಟೆಗೆ ಮದ್ದುಗುಂಡು ಹಾಗೂ ವರ್ಣರಂಜಿತ ಬಾಣ ಬಿರುಸುಗಳ ವಿಶೇಷ ಕಾರ್ಯ ಕ್ರಮ ೨.೩೦ ಗಂಟೆಗೆ ಶ್ರೀ ಅಮ್ಮನವರ ಬನದಲ್ಲಿ ಪೂಜಾ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಂದ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ ತಿಳಿಸಿದ್ದಾರೆ.