ಮಡಿಕೇರಿ, ಡಿ. ೩: ಅಯ್ಯಂಗೇರಿ ನಾಡ್, ಕುಯ್ಯಂಗೇರಿ ಗ್ರಾಮಕ್ಕೆ ಸೇರಿದ ಹೊದ್ದೂರು ಗ್ರಾಮಸ್ಥರು ವಾರ್ಷಿಕವಾಗಿ ಆಚರಿಸಿಕೊಂಡು ಬರುತ್ತಿರುವ ಹುತ್ತರಿ ಕೋಲಾಟ ಸಂಭ್ರಮದಿAದ ಜರುಗಿತು. ಗ್ರಾಮದ ದೈವನೆಲೆಯ ಬಾಳ್ ಭಂಡಾರವನ್ನು ಶ್ರೀ ಭಗವತಿ ದೇವಾಲಯದ ಸನ್ನಿಧಿಯಾದ ಚಾಮುಂಡಿ ದೈವದ ಮೂಲಕ ವಾದ್ಯಗೋಷ್ಠಿಯೊಂದಿಗೆ ಗ್ರಾಮಸ್ಥರೆಲ್ಲರೂ ಸೇರಿ ಶ್ರೀ ಶಾಸ್ತ-ಈಶ್ವರನ ಸನ್ನಿಧಾನಕ್ಕೆ ತಂದು ಗೌರವ ಅರ್ಪಿಸುವುದರ ಮೂಲಕ ಹಿಂದಿನ ಕಾಲದಲ್ಲಿ ಗ್ರಾಮದ ರಕ್ಷಣೆ ಮಾಡಿದ ಶಾಸ್ತ- ಈಶ್ವರನ ಚೋರಂಗೆ ಮಂದ್‌ನಲ್ಲಿ ಸಂಪನ್ನಗೊAಡಿತು. ಬಳಿಕ ಸಾಂಪ್ರದಾಯಿಕ ಉಡುಪಿನೊಂದಿಗೆ ವಿವಿಧ ಕೋಲಾಟಗಳನ್ನು ನಡೆಸಲಾಯಿತು. ಈ ಸಂದರ್ಭ ಗ್ರಾಮದ ಹಿರಿಯರಾದ ಮಂಡೇಪAಡ ಕರುಂಬಯ್ಯ, ಶ್ರೀ ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ಚೌರೀರ ಸುಗುಣ, ಕಾರ್ಯದರ್ಶಿ ನೆರವಂಡ ಸಂಜಯ್ ಪೂಣಚ್ಚ, ನಾಡತಕ್ಕ ನೆರವಂಡ ನಂಜಪ್ಪ, ಶ್ರೀ ಶಾಸ್ತ -ಈಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.