ನಾಪೋಕ್ಲು, ಡಿ. ೨: ಕೃಷಿ ಚಟುವಟಿಕೆಗಳೊಂದಿಗೆ ಗ್ರಾಮೀಣ ಜನತೆ ಹೈನುಗಾರಿಕೆ ನಡೆಸುವುದು ಸರ್ವೇ ಸಾಮಾನ್ಯ. ಇಂತಹ ಉಪ ಕಸುಬನ್ನು ಕ್ರಮಬದ್ಧವಾಗಿ ಮಾಡದಿದ್ದಲ್ಲಿ ಸಾಕಿದ ದನ ಕರುಗಳು ಮನಬಂದAತೆ ಅಲೆದು ಸಾರ್ವಜನಿ ಕರಿಗೆ ಸಂಕಷ್ಟವನ್ನು ತಂದೊಡ್ಡುತ್ತಿವೆ. ಬೀಡಾಡಿ ದನಗಳು ನಿರಂತರ ಅಪಘಾತ, ಜೀವಹಾನಿಯಂತಹ ಘಟನೆಗಳಿಗೆ ಕಾರಣವಾಗುತ್ತಿವೆ.

ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಬರುವ ದೇವರಕೊಲ್ಲಿ ಗ್ರಾಮದಲ್ಲಿ ನೆಲೆಸಿರುವ ಕೆಲ ಮಂದಿ ತಾವು ಸಾಕಿ ಸಲಹಬೇಕಾದ ದನ ಕರುಗಳನ್ನು ಮನಬಂದAತೆ ಗ್ರಾಮ ವ್ಯಾಪ್ತಿಯಲ್ಲಿ ಬಿಟ್ಟಿರುವುದು ಇದೀಗ ಸಮಸ್ಯೆಗೆ ಕಾರಣವಾಗಿದೆ.

ದೇವರಕೊಲ್ಲಿಯ ಹೆದ್ದಾರಿಯಲ್ಲಿ ರಾತ್ರಿ ಸಮಯ ರಸ್ತೆಯ ಮೇಲೆ ಅಲ್ಲಲ್ಲಿ ಹತ್ತಾರು ದನ ಕರುಗಳು ಗುಂಪಾಗಿ ಮಲಗಿರುವುದು ಕಂಡು ಬರುತ್ತದೆ. ಇದು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹಗಲಲ್ಲಾದರೆ ರಸ್ತೆಯ ಮೇಲಿರುವ ಜಾನುವಾರುಗಳು ಸ್ಪಷ್ಟವಾಗಿ ಕಾಣುತ್ತವೆ.

ಅದೇ ರಾತ್ರಿಯ ಅವಧಿಯಲ್ಲಿ ವಾಹನ ಸವಾರರಿಗೆ ಜಾನುವಾರುಗಳಿರುವುದು ಮತ್ತು ಅವುಗಳ ಚಲನವಲನಗಳು ಸ್ಪಷ್ಟವಾಗಿ ಕಾಣದೆ, ಹಠಾತ್ತನೆ ಎದುರಿಗೆ ಬರುವ ಜಾನುವಾರುಗಳಿಂದ ವಾಹನಗಳನ್ನು ತಪ್ಪಿಸುವ ಗಡಿಬಿಡಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ಕೆಲ ಸಮಯಗಳ ಹಿಂದೆ ದೇವರಕೊಲ್ಲಿಯ ಒಂದೆರಡು ಅಂಗಡಿಗಳು ಇರುವಲ್ಲಿ ಅಳವಡಿಸಿರುವ ಸೋಲಾರ್ ದೀಪದ ಕೆಳಗೆ ಈ ಬೀಡಾಡಿ ದನಗಳು ರಾತ್ರಿವೇಳೆ ಇರುತ್ತಿದ್ದವು. ಇವುಗಳ ಉಪಟಳದಿಂದ ಬೇಸತ್ತ ಅಂಗಡಿ ಯವರು ಅಲ್ಲಿರುವ ಜಾನುವಾರು ಗಳನ್ನು ಓಡಿಸುತ್ತಿದ್ದ ಪರಿಣಾಮ ಇದೀಗ ಅಲ್ಲೇ ಸಮೀಪದಲ್ಲಿ, ಯಾವುದೇ ಬೆಳಕಿಲ್ಲದ ರಸ್ತೆಯಲ್ಲಿ ಜಾನುವಾರುಗಳು ಗುಂಪಾಗಿ ಮಲಗಿರುವುದು (ಅಲೆದಾಡುವುದು) ಸಾಮಾನ್ಯವೆಂಬAತಾಗಿದೆ.

ಈ ಬಗ್ಗೆ ಸಂಬAಧಪಟ್ಟವರು ಗಮನ ಹರಿಸಿ, ದನಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವ, ಇಲ್ಲವೆ ದನಗಳ ಮಾಲೀಕರಿಗೆ ದಂಡ ವಿಧಿಸಿ, ಯಾವುದೇ ಕಾರಣಕ್ಕೂ ಜಾನುವಾರುಗಳು ರಸ್ತೆಗೆ ಬಾರದಂತೆ ನೋಡಿಕೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ ಸಂಭವಿಸುವ ಅಪಘಾತಗಳು, ಜೀವಹಾನಿಗಳನ್ನು ದೇವರಕೊಲ್ಲಿಗೆ ‘ದೇವರೇ’ ಬಂದರು ತಡೆಯಲು ಸಾಧ್ಯವಾಗದು.

- ದುಗ್ಗಳ ಸದಾನಂದ.