ನಾಪೆÀÇÃಕ್ಲು, ಡಿ. ೩: ಹುತ್ತರಿ ಹಬ್ಬದ ಸಂದರ್ಭ ಹಾಡುವ ಹುತ್ತರಿ ಹಾಡು, ಶ್ರೀ ಇಗ್ಗುತ್ತಪ್ಪ ದೇವರ ಹಾಡು, ಅಯ್ಯಪ್ಪ ದೇವರ ಹಾಡು, ಕಲ್ಯಾಟಜ್ಜಪ್ಪ ಹಾಡುಗಳನ್ನು ಹಾಡಿ ಹಬ್ಬಕ್ಕೆ ಮೆರಗು ನೀಡಿದ ನೆಲಜಿ ಗ್ರಾಮದ ಬಾಲಕರಾದ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕಾರ್ಯಪ್ಪ ಸಹೋದರರನ್ನು ಹಾಗೂ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಅವರನ್ನು ನೆಲಜಿ ಗ್ರಾಮದ ಅಂಗಡಿಕೇರಿ, ಕೇರಿಯೊರ್ಮೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತೋಷ ಕೂಟದ ಅಧ್ಯಕ್ಷ ಮಂಡಿರಾ ನಂದಾ ನಂಜಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬದ್ದಂಜೆಟ್ಟಿರ ನಾಣಯ್ಯ, ಗ್ರಾಮಸ್ಥರು ಇದ್ದರು.