xನಾಪೋಕ್ಲು, ಡಿ. ೨: ಗೋಣಿಕೊಪ್ಪದ ಹೊಟೇಲ್ ಪ್ರಣವ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪದಾರ್ಥಿ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ಹಿರಿಯ ಹಾಗೂ ನಿವೃತ್ತ ಶಿಕ್ಷಕ ಪಿ.ಎಸ್. ಗೋಪಾಲಕೃಷ್ಣ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಸಮಾಜದ ಅಧ್ಯಕ್ಷ ಪಿ.ಆರ್. ದಾಮೋದರ, ಕಾರ್ಯದರ್ಶಿ ಪಿ.ಆರ್. ಮುಕುಂದ, ಸಹಕಾರ್ಯದರ್ಶಿ ಪಿ.ಜಿ. ಜಯಶ್ರೀ, ನಿರ್ದೇಶಕರು ಹಾಜರಿದ್ದರು.