ವೀರಾಜಪೇಟೆ, ಡಿ. ೨: ಮಾಕುಟ್ಟ ಗೇಟ್ ಪ್ರವೇಶಿಸುವ ಎರಡು ಕಡೆಯ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ಮಾಡು ವಂತೆ ಮತ್ತು ಪ್ರತ್ಯೇಕ ವಾಹನಗಳಿಗೆ ಅರಣ್ಯ ಪ್ರದೇಶದ ರಸ್ತೆ ಬದಿಗಳಲ್ಲಿ ಸೂಕ್ತ ಕಾರಣಗಳಿಲ್ಲದೆ ವಾಹನ ಗಳನ್ನು ನಿಲ್ಲಿಸದಂತೆ, ಈ ಮಾರ್ಗವನ್ನು ಕ್ರಮಿಸಲು ಸಮಯ ನಿಗದಿಪಡಿಸಿ ಈ ವೇಳೆಯಲ್ಲಿ ಈ ಅಂತರವನ್ನು ಕ್ರಮಿಸದೇ ಇದ್ದಲ್ಲಿ ಸಂಬAಧಪಟ್ಟವರು ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕೆಂದು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋದ ಒತ್ತಾಯಿಸಿದ್ದಾರೆ.

ಬೇಟೋಳಿ ಗ್ರಾಮ ಪಂಚಾಯಿತಿ ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊAಡಿದೆ. ಮಾಕುಟ್ಟದಿಂದ ಪೆರುಂಬಾಡಿ ಮಧ್ಯ ಅಂದಾಜು ೧೮ ಕಿ.ಮೀ. ಅಂತರದ ಅರಣ್ಯ ಪ್ರದೇಶ ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಆಹಾರ ಸೇವನೆ, ಮಾಡಿ ತ್ಯಾಜ್ಯಗಳನ್ನು ರಸ್ತೆ ಬದಿ ಮತ್ತು ಅರಣ್ಯದ ಒಳಭಾಗಕ್ಕೆ ಎಸೆಯುತ್ತಿದ್ದಾರೆ. ಇದರ ಜೊತೆಗೆ ಮದ್ಯದ ಬಾಟಲಿಗಳೂ ಹೇರಳವಾಗಿ ಕಂಡು ಬಂದಿದೆ. ಕೇರಳ ಗಡಿಭಾಗ (ಕೂಟು ಪೊಳೆ) ಮಾಕುಟ್ಟದಿಂದ ಪೆರಂಬಾಡಿ ಕೆರೆಯವರೆಗೆ ಮೀಸಲು ಅರಣ್ಯ ಪ್ರದೇಶವಿದೆ. ಮಾಕುಟ್ಟ ಗೇಟ್‌ನಿಂದ ಪೆರಂಬಾಡಿ ಗೇಟ್‌ನವರೆಗೆ ಅಂದಾಜು ೨೦ ಕಿಲೋಮೀಟರ್ ರಾಜ್ಯ ಹೆದ್ದಾರಿ ಹಾದು ಹೋಗಿರುತ್ತದೆ, ಮತ್ತು ಕೇರಳದ ಕಣ್ಣೂರು ಭಾಗದ ಜನರಿಗೆ ಮುಖ್ಯ ಸಂಪರ್ಕ ರಸ್ತೆಯೂ ಕೂಡಾ ಆಗಿರುತ್ತದೆ. ಸಾರಿಗೆ, ಸರಕು ಮತ್ತು ಪ್ರವಾಸಿ ವಾಹನಗಳಂತೆ ಬಿಡುವಿಲ್ಲದೆ ಹಗಲು-ರಾತ್ರಿ ಯಾವುದೇ ಅಂಕುಶವಿಲ್ಲದೆ (ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ) ಮಾಕುಟ್ಟದಿಂದ ಪೆರುಂಬಾಡಿ ಎರಡೂ ಭಾಗಕ್ಕೆ ಸಂಚರಿ ಸುತ್ತಿರುತ್ತದೆ. ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಗಾಗ್ಗೆ ಇವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆದರೂ ಈ ರೀತಿಯ ದುಂಡಾ ವರ್ತನೆ ಮುಂದುವರಿಯುತ್ತಲೇ ಇದೆ ಎಂದು ಅವರು ವಿವರಿಸಿದ್ದಾರೆ.