ಸೋಮವಾರಪೇಟೆ, ಡಿ.೩: ಪಟ್ಟಣದ ಬಸವೇಶ್ವರ ರಸ್ತೆಯಲ್ಲಿರುವ ಶಿಥಿಲಾವಸ್ಥೆಯ ವಾಸದ ಮನೆಯೊಂದರಲ್ಲಿ ಕಾರ್ಯಾ ಚರಿಸುತ್ತಿದ್ದ ಅಂಗನವಾಡಿ ಕೇಂದ್ರವನ್ನು ಇದೀಗ ಮಹಿಳಾ ಸಮಾಜದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಆ ಮೂಲಕ ಗಂಡಾAತರ ತಪ್ಪಿದಂತಾಗಿದೆ.
ಬಸವೇಶ್ವರ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆಗೆ ತಲುಪಿದ್ದು, ಗೋಡೆಗಳು ಬೀಳುವ ಹಂತದಲ್ಲಿದ್ದವು. ಈ ಕಟ್ಟಡದಲ್ಲಿ ೧೫ಕ್ಕೂ ಅಧಿಕ ಪುಟಾಣಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೇಂದ್ರದ ಗೋಡೆಗಳು ಈಗಲೋ ಆಗಲೋ ಎಂಬAತಿದ್ದವು.
ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ವಾರ್ಡ್ ಸದಸ್ಯ ಮೃತ್ಯುಂಜಯ ಅವರು ಅಧಿಕಾರಿಯ ಗಮನ ಸೆಳೆದಿದ್ದರು. ಸ್ಥಳ ಪರಿಶೀಲನೆ ನಡೆಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ಅವರು, ವಾಸ್ತವಾಂಶವನ್ನು ಮನಗಂಡು ಕೇಂದ್ರದ ಸ್ಥಳಾಂತರಕ್ಕೆ ಕ್ರಮವಹಿಸಿದರು. ಇದರೊಂದಿಗೆ ಬಸವೇಶ್ವರ ರಸ್ತೆಯಲ್ಲಿರುವ ಪ.ಪಂ.ಗೆ ಸೇರಿದ ಜಾಗವನ್ನು ನೀಡಿದರೆ ಇಲಾಖೆ ಯಿಂದಲೇ ಕಟ್ಟಡ ನಿರ್ಮಿಸಿಕೊಳ್ಳುವ ಭರವಸೆ ನೀಡಿದ್ದರು.
ಇದೀಗ ಅಂಗನವಾಡಿ ಕೇಂದ್ರವನ್ನು ಮಹಿಳಾ ಸಮಾಜಕ್ಕೆ ಸ್ಥಳಾಂತರಿಸ ಲಾಗಿದ್ದು, ಗಂಡಾAತರ ತಪ್ಪಿದಂತಾಗಿದೆ.
ಪೋಷಣ್ ಅಭಿಯಾನ: ಸ್ಥಳಾಂತರಗೊAಡ ಕೇಂದ್ರದಲ್ಲಿ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನದಡಿ ಸೀಮಂತ ಕಾರ್ಯಕ್ರಮ ನಡೆಯಿತು.
ಇಲಾಖೆಯ ಅಧಿಕಾರಿ ಅಣ್ಣಯ್ಯ, ಮೇಲ್ವಿಚಾರಕಿ ಗುರುಬಸಮ್ಮ, ಪ.ಪಂ. ಸದಸ್ಯ ಬಿ.ಆರ್. ಮೃತ್ಯುಂಜಯ, ಅಂಗನವಾಡಿ ಕಾರ್ಯಕರ್ತೆ ಜಗದಾಂಭ, ಸಹಾಯಕಿ ಸೌಮ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿತು.