ವೀರಾಜಪೇಟೆ, ಡಿ. ೩: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆಸಲಾಗಿದ್ದು, ಅದರಂತೆ ಬೆಳೆ ನಷ್ಟ ಶೇಖಡ ೩೩ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ಪ್ರದೇಶವನ್ನು ಈ ಕೆಳಕಂಡAತೆ ನಮೂದಿಸಲಾಗಿದ್ದು, ಅದರಂತೆ ಈ ಗ್ರಾಮಗಳಿಗೆ ಸಂಬAಧಪಟ್ಟ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಅರ್ಜಿದಾರರು ತಕ್ಷಣವೇ ಪರಿಹಾರ ಅರ್ಜಿಗಳನ್ನು ಸಂಬAಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ / ನಾಡ ಕಚೇರಿಗಳಿಗೆ ನೀಡಲು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಾಜಪೇಟೆ ತಾಲೂಕು : ಅಮ್ಮತ್ತಿ ಹೋಬಳಿ : ಹೊಸೂರು, ಬೆಟ್ಟಗೇರಿ, ಕಾವಾಡಿ, ಕಾರ್ಮಾಡು, ಕುಂಬೇರಿ,
(ಮೊದಲ ಪುಟದಿಂದ) ಬಿಳುಗುಂದ, ಹೊಸಕೋಟೆ, ಮೇಕೂರು ಹೊಸ್ಕೇರಿ, ಚೆನ್ನಯ್ಯನಕೋಟೆ, ಪುಲಿಯೇರಿ, ಬಾಡಗ - ಬಾಣಂಗಾಲ, ಕರಡಿಗೋಡು, ಸಿದ್ದಾಪುರ, ಚಿಕ್ಕನಹಳ್ಳಿ, ಗುಹ್ಯ, ಕೊಡಗು ಶ್ರೀರಂಗಪಟ್ಟಣ, ಮಾಲ್ದಾರೆ.
ವೀರಾಜಪೇಟೆ ಹೋಬಳಿ : ಕಂಡAಗಾಲ, ವಿ.ಬಾಡಗ, ನಾಂಗಾಲ, ೧ನೇ ರುದ್ರಗುಪ್ಪೆ, ೨ನೇ ರುದ್ರಗುಪ್ಪೆ, ಕೆದಮುಳ್ಳೂರು, ಪಾಲಂಗಾಲ, ಬೇಟೋಳಿ, ಹೆಗ್ಗಳ, ಬಾಳುಗೋಡು, ಆರ್ಜಿ.
ಪೊನ್ನಂಪೇಟೆ ತಾಲೂಕು: ಪೊನ್ನಂಪೇಟೆ ಹೋಬಳಿ : ಬಿ.ಶೆಟ್ಟಿಗೇರಿ, ಕುಟ್ಟಂದಿ, ಕೊಂಗಣ.
ಹುದಿಕೇರಿ ಹೋಬಳಿ : ತೆರಾಲು, ಪರಕಟಗೇರಿ, ಪೋರಾಡ್, ಬಾಡಗರಕೇರಿ, ಬಿರುನಾಣಿ, ಹೈಸೊಡ್ಲೂರು, ಕೋಣಗೇರಿ, ಹುದಿಕೇರಿ.
ಶ್ರೀಮಂಗಲ ಹೋಬಳಿ: ಕುಮಟೂರು, ಬೀರುಗ, ಶ್ರೀಮಂಗಲ, ಮಂಚಳ್ಳಿ, ವೆಸ್ಟ್ ನೆಮ್ಮಲೆ, ಈಸ್ಟ್ ನೆಮ್ಮಲೆ, ಟಿ. ಶೆಟ್ಟಿಗೇರಿ, ಕುರ್ಚಿ, ಕುಟ್ಟ.