ಮಡಿಕೇರಿ, ಡಿ. ೩: ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ನಗರದ ಸರಕಾರಿ ಪಿ.ಯು. ಕಾಲೇಜಿನಲ್ಲಿ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಪ್ರತಿಯೊಬ್ಬರು ಆರೋಗ್ಯಕ್ಕೆ ಆದ್ಯತೆ ನೀಡಬೇಕು ಮತ್ತು ಏಡ್ಸ್ ಬಗ್ಗೆ ಜಾಗೃತರಾಗಬೇಕೆಂದು ಕರೆ ನೀಡಿದರು. ಆರೋಗ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಕುಲಪತಿ ಡಾ. ರವಿ ಕರುಂಬಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಎನ್.ಡಿ. ಅಚ್ಚಯ್ಯ, ಕಾರ್ಯದರ್ಶಿ ಲಲಿತಾ ರಾಘವನ್, ವೃತ್ತಿಪರ ಸೇವಾ ನಿರ್ದೇಶಕರಾದ ಮಾಳಿಗೆ ಪೈ, ಪ್ರಮುಖರಾದ ಅನಿಲ್ ಕೃಷ್ಣಾನಿ, ಮೃಣಾಲಿನಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವಿದ್ಯಾರ್ಥಿಗೆ ಪ್ರೋತ್ಸಾಹ ಧನ

ರೋಟರಿ ಸಾಪ್ತಾಹಿಕ ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಅಮರಜೀತ್ ಅವರಿಗೆ ೧೦ ಸಾವಿರ ರೂ.ಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು. ಹಿರಿಯ ರೋಟೇರಿಯನ್ ಡಾ. ಎಂ.ಜಿ. ಪಾಟ್ಕರ್ ವಿದ್ಯಾರ್ಥಿ ವೇತನವನ್ನು ಪ್ರಾಯೋಜಿಸಿದ್ದಾರೆ.