ಗುಡ್ಡೆಹೊಸೂರು, ಡಿ. ೩: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಾಡು ಬಳಿ ಹೆದ್ದಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಹೊರ ಜಿಲ್ಲೆಯಿಂದ ವಾಹನದಲ್ಲಿ ಕಸವನ್ನು ತಂದು ಸುರಿಯುತ್ತಿರುವ ಮಾಹಿತಿ ಮೇರೆಗೆ ಕಸ ಹಾಕಿದವರ ಕೈಯಿಂದಲೆ ಕಸವನ್ನು ತೆಗೆಯಿಸಿ ಜೊತೆಗೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ರೂ. ೩೦೦೦ ಸಾವಿರ ದಂಡ ಹಾಕಲಾಗಿದೆ. ಈ ಕಾರ್ಯದಲ್ಲಿ ಇಲ್ಲಿನ ಪಿ.ಡಿ.ಓ. ಶ್ಯಾಂ ತಮ್ಮಯ್ಯ ಮತ್ತು ಅರಣ್ಯ ಇಲಾಖಾಧಿಕಾರಿಗಳಾದ ದೇವಯ್ಯ ಮತ್ತು ಅನಿಲ್ ಡಿಸೋಜಾ ಅವರುಗಳು ಭಾಗವಹಿಸಿದ್ದರು.