ನಗರ ಠಾಣೆಯಲ್ಲಿ ಮೂರು ಪ್ರಕರಣ ದಾಖಲು
ಮಡಿಕೇರಿ, ಡಿ. ೩: ಪ್ರವಾಸಿ ಕೇಂದ್ರ ಮಾಂದಲ್‌ಪಟ್ಟಿಗೆ ತೆರಳುವ ಜೀಪು ಬಾಡಿಗೆ ವಿಚಾರಕ್ಕೆ ಸಂಬAಧಿಸಿದAತೆ ಗುಂಪು ಗಲಭೆ ನಡೆದಿದ್ದು, ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ನಗರದ ಮುತ್ತಪ್ಪ ದೇವಾಲಯ ಬಳಿಯಲ್ಲಿ ಜೀಪು ಬಾಡಿಗೆ ಮಾಡುತ್ತಿರುವವರಿಗೂ, ನಂದಿಮೊಟ್ಟೆಯಲ್ಲಿ ಜೀಪು ಇಟ್ಟುಕೊಂಡಿರುವ ಬಾಡಿಗೆದಾರರಿಗೂ ಬಾಡಿಗೆ ವಿಚಾರದಲ್ಲಿ ಕಲಹವಾಗಿದೆ.
ಮುತ್ತಪ್ಪ ದೇವಾಲಯ ಬಳಿ ಸುಜಿತ್ ಶೆಟ್ಟಿ ಎಂಬವರ ಜೀಪನ್ನು ಅತಾವುಲ್ಲಾ ಎಂಬವರು ಚಾಲಿಸುತ್ತಿದ್ದು, ಇವರು ಕಡಿಮೆ ಬಾಡಿಗೆಗೆ ತೆರಳುತ್ತಿದ್ದಾರೆ ಎಂಬದಾಗಿ ಆತನ ಮೇಲೆ ನಂದಿಮೊಟ್ಟೆಯ ಉಮೇಶ್ ಮತ್ತಿತರರು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಉಮೇಶ್ ಹಾಗೂ ಅವರ ಬೆಂಬಲಿಗರಿಗೆ ಅತಾವುಲ್ಲಾ, ಸುಜಿತ್ ಶೆಟ್ಟಿ, ವಿನೋದ್ ಎಂಬವರು ಹಲ್ಲೆ ನಡೆಸಿದ್ದಾರೆ. ಇದೇ ವಿಚಾರದಲ್ಲಿ ಮತ್ತಷ್ಟು ಗೊಂದಲವೂ ಏರ್ಪಟ್ಟು ನಂದಿಮೊಟ್ಟೆಯ ಕೃಷ್ಣಪ್ಪ ಎಂಬವರ ಮೇಲೆಯೂ ಹಲ್ಲೆ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಒಟ್ಟು ಮೂರು ಪ್ರತ್ಯೇಕ ಹಲ್ಲೆ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ. ಅತಾವುಲ್ಲಾ ನೀಡಿರುವ ದೂರಿನಂತೆ ನಾಲ್ವರ ವಿರುದ್ಧ, ಉಮೇಶ್ ನೀಡಿರುವ ದೂರಿನಂತೆ ನಾಲ್ವರು ಹಾಗೂ ಕೃಷ್ಣಪ್ಪ ನೀಡಿರುವ ದೂರಿನಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿವೆ. ತಾ. ೧ ರಂದು ರಾತ್ರಿ ಈ ಘಟನೆ ನಡೆದಿದೆ.