ಪೆರಾಜೆ, ಡಿ. ೩: ಕೋವಿಡ್ ಲಸಿಕೆ ಪಡೆಯ ದವರಿಗೆ ಮನೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಿಸುವು ಕಾರ್ಯ ನಡೆಯುತ್ತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎರಡನೇ ಡೋಸ್ಗೆ ಅರ್ಹರಾದವರಿಗೆ ಮತ್ತು ಮೊದಲ ಡೋಸ್ ತೆಗೆದುಕೊಳ್ಳದವರಿಗೆ ಲಸಿಕೆ ಹಾಕುತ್ತಿದ್ದಾರೆ. ಅಲ್ಲದೇ ಲಸಿಕೆ ಹಾಕಿಸಲು ಹಿಂದೇಟು ಹಾಕುವವರ ಮನವೊಲಿಸಿ ಮತ್ತು ಲಸಿಕೆ ತೆಗೆದುಕೊಳ್ಳಲು ಬರಲು ಅಸಹಾಯಕರುಗಳ ಮನೆಗಳಿಗೆ ತೆರಳಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಈ ಕಾರ್ಯದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಘು ಎಂ.ಆರ್., ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ಶೈಲಜಾ ಮತ್ತು ಜಯಶ್ರೀ ಭಾಗವಹಿಸಿದ್ದರು.