ಮಡಿಕೇರಿ, ಡಿ. ೩: ಜಿಲ್ಲೆಯ ೫೬ ಡಿ-ಗ್ರೂಪ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿರುವ ಸಂಬAಧ ಪ್ರತಿಕ್ರಿಯಿಸಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕಳ್ಳಿಚಂಡ ಕಾರ್ಯಪ್ಪ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳ ಸೇವಾ ಅವಧಿ, ಕೋವಿಡ್ ಆರಂಭದಲ್ಲಿ ಕೇವಲ ೬ ತಿಂಗಳು ಎಂದಾಗಿತ್ತು. ಕೋವಿಡ್ ಮುಂದುವರಿದ ಕಾರಣ ಇದನ್ನು ಮತ್ತೆ ವಿಸ್ತರಿಸಿ ಇದೀಗ ಒಂದೂವರೆ ವರ್ಷ ಕಳೆದಿದೆ. ಅವರುಗಳ ಗುತ್ತಿಗೆ ಅವಧಿ ಮುಗಿದಿರುವ ಕಾರಣ ಸೇವೆಯಿಂದ ವಜಾಗೊಳಿಸಲಾಗಿದೆ ಎಂದರು.