ಕೂಡಿಗೆ, ಡಿ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮದಲಾಪುರ ವ್ಯಾಪ್ತಿಯಲ್ಲಿ ಈಗಾಗಲೇ ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ಕಳೆದ ಹತ್ತು ದಿನಗಳಿಂದ ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗಿರಲಿಲ್ಲ. ಮಳೆ ತುಸು ಬಿಡುವು ನೀಡಿರುವುದರಿಂದ ಭತ್ತದ ಬೆಳೆಯ ಕಟಾವು ಮಾಡುವ ಕೆಲಸ ಆರಂಭವಾಗಿದೆ.

ಹಾರAಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ನೀರಾವರಿ ಸೌಲಭ್ಯ ಸಮರ್ಪಕವಾಗಿ ದೊರೆತ ಹಿನ್ನೆಲೆಯಲ್ಲಿ ರೈತರು ಹೆಚ್ಚು ಇಳುವರಿ ಪಡೆಯಲು ಹೈಬ್ರೀಡ್ ತಳಿಯ ಭತ್ತದ ಸಸಿಗಳನ್ನು ನಾಟಿ ಮಾಡಿದ್ದರು. ಬೆಳೆಯು ಉತ್ತಮವಾಗಿ ಬಂದು ಕೊಯ್ಯುವ ಹಂತದಲ್ಲಿದ್ದು, ಮಳೆಯಿಂದಾಗಿ ತೊಂದರೆಗಳು ಆಗುತ್ತಿವೆ ಎಂದು ಈ ಭಾಗದ ರೈತರುಗಳಾದ ಕೃಷ್ಣ, ರಾಜ, ಪರಮೇಶ್, ಜವರೇಗೌಡ, ತಿಮ್ಮಪ್ಪ, ಅರ್ಜುನ, ನಾಗರಾಜ್ ತಿಳಿಸಿದ್ದಾರೆ.