ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ, ಸಮುದಾಯದಲ್ಲಿನ ವಿಶೇಷಚೇತನರ ಅಗತ್ಯತೆಗಳನ್ನು ಪರಿಶೀಲಿಸುತ್ತದೆ. ಎಲ್ಲಾ ಮಾನವ ಚಟುವಟಿಕೆಗಳಾದ ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗ, ಕುಟುಂಬ ಜೀವನ, ಸಾಮಾಜಿಕ ಚಲನಶೀಲತೆ ಮತ್ತು ರಾಜಕೀಯ ಸಬಲೀಕರಣದಲ್ಲಿ ವಿಶೇಷಚೇತನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುತ್ತದೆ.
ಕೊಡಗು ಜಿಲ್ಲೆಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಅಂದಾಜು ೧೧,೦೦೦ ವಿಶೇಷಚೇತನರ ಪೈಕಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿದ್ಯಾವಂತರಾಗಿದ್ದು, ವಿಶೇಷ ಶಾಲೆಗಳು ಮತ್ತು ಕೆಲವೇ ಕೆಲವು ಸಾಮಾನ್ಯ ಶಾಲೆಗಳು ಇಲ್ಲಿವೆ.
ಸುಂಟಿಕೊಪ್ಪದ ಸ್ವಸ್ಥ, ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರವು ವಿಶೇಷಚೇತನರಿಗೆ ಅವರ ಸಮುದಾಯದಲ್ಲಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮಗಳು ಜಿಲ್ಲೆಯ ಪ್ರತಿಯೊಬ್ಬ ವಿಶೇಷಚೇತನ ವ್ಯಕ್ತಿಯನ್ನು ತಲುಪುವ ಗುರಿಯನ್ನು ಹೊಂದಿವೆ, ಮತ್ತು ಸಮುದಾಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡುವ ಮೂಲಕ ಉತ್ತಮ ರಚನಾತ್ಮಕ ಕಾರ್ಯಕ್ರಮದ ಮೂಲಕ ಸೇವೆಗಳನ್ನು ಗರಿಷ್ಠಗೊಳಿಸಲು ಹಾಗೂ ಫಲಾನುಭವಿಗಳ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು, ಆರೋಗ್ಯ, ಶಿಕ್ಷಣ, ವೃತ್ತಿಪರ ಪುನರ್ವಸತಿ, ಸಬಲೀಕರಣ, ಚಲನಶೀಲತೆ ಮತ್ತು ಸುಸ್ಥಿರ ಜೀವನೋಪಾಯಕ್ಕಾಗಿ ಕಾರ್ಯಕ್ರಮ ಯೋಜಿಸಲಾಗಿದೆ.
ಮುಖ್ಯವಾಹಿನಿಯತ್ತ ವಿಶೇಷಚೇತನರು
ಸ್ವಸ್ಥ ನಡೆಸುತ್ತಿರುವ ಅಃಖ ಅommuಟಿiಣಥಿ ಃಚಿseಜ ಖehಚಿbiಟiಣಚಿಣioಟಿ (ಸಮುದಾಯ ಆಧಾರಿತ ವಿಶೇಷಚೇತರನ್ನು ಮುಖ್ಯವಾಹಿನಿಗೆ ತರುವ ಕಾರ್ಯ) ಕಾರ್ಯಕ್ರಮಗಳ ಮೂಲಕ ಮೂಲ ಸೌಲಭ್ಯಗಳನ್ನು ತಲುಪಿಸುವುದು, ವಿಶೇಷಚೇತನರ ಬಗ್ಗೆ ಜಾಗೃತಿ ಕಾರ್ಯಕ್ರಮ, ಆರ್ಥಿಕ ಸ್ವಾತಂತ್ರ್ಯವನ್ನು ವೇಗಗೊಳಿಸುವುದು, ವೃತ್ತಿಪರ ತರಬೇತಿ ಕಾರ್ಯಕ್ರಮದ ಮೂಲಕ ಅಗತ್ಯವಿರುವ ಕೌಶಲ್ಯಗಳನ್ನು ತುಂಬುವುದು, ಆರೋಗ್ಯ ಶಿಕ್ಷಣ ಸಂಪರ್ಕವನ್ನು ಬಲಪಡಿಸುವ ಸೇವೆಗಳು, ಸಮುದಾಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಆದಾಯ ಉತ್ಪಾದನೆಯ ಚಟುವಟಿಕೆಗಳನ್ನು ವಿಶೇಷಚೇತನರಿಗೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವಿಶೇಷಚೇತನರನ್ನು ಹೊಂದಿರುವ ಸೋಮವಾರಪೇಟೆ ತಾಲೂಕಿನಲ್ಲಿ ೨೦೧೦ ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಸಮುದಾಯದಲ್ಲಿ ಜಾಗೃತಿ ಮೂಡಿಸಿ, ವಿಶೇಷಚೇತನರ ನೇತೃತ್ವದ ಬೀದಿ ನಾಟಕ ತಂಡಗಳನ್ನು ನಿಯೋಜಿಸಲಾಗಿದೆ. ವಿಶೇಷಚೇತನರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು, ಭಾಗವಹಿಸಲು ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರ ಸ್ವಂತ ಸಾಮರ್ಥ್ಯಗಳನ್ನು ಗುರುತಿಸಲು ಇದು ಸಹಕಾರಿಯಾಗಿದೆ.
ಸ್ವಸ್ಥ ಅಃಖ, ಕಾರ್ಯಕ್ರಮವು ಯಶಸ್ವಿಯಾಗಿ, ಪರಿಸರ, ಸಾಮಾಜಿಕ, ಧೋರಣೆಯ, ಮತ್ತು ತಾಂತ್ರಿಕ, ಆರ್ಥಿಕ ಅಡೆತಡೆಗಳನ್ನು ಮುರಿದು, ಕೊಡಗು ಜಿಲ್ಲೆಯಲ್ಲಿ ಅಂತರ್ಗತ ಸಮಾಜದ ಪರಿಸರ ವ್ಯವಸ್ಥೆಯನ್ನು ರಚಿಸಿದೆ.
ಕಾರ್ಯಕ್ರಮದ ಹಲವು ವಿಭಾಗಗಳು
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ
ಬಡತನ ನಿರ್ಮೂಲನೆ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು, ಕಾರ್ಯಕ್ರಮದ ತಿರುಳಾಗಿ ಉಳಿದಿದೆ. ವಿಶೇಷಚೇತನರನ್ನು, ಅವರ ವೃತ್ತಿ ಆಯ್ಕೆ ಮತ್ತು ಅವರ ಆಯ್ಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಅವರನ್ನು ಸ್ವಾವಲಂಬಿಯನ್ನಾಗಿ ಮಾಡಿದೆ.
ಟೈಲರಿಂಗ್, ಪೇಪರ್ ಬ್ಯಾಗ್ ತಯಾರಿಕೆ, ನರ್ಸರಿ ನಿರ್ವಹಣೆ, ಅಣಬೆ ಕೃಷಿ, ಪುಸ್ತಕ ಬೈಂಡಿAಗ್, ಸ್ಕಿçÃನ್ ಪ್ರಿಂಟಿAಗ್, ಆರ್ಟ್ ಮತ್ತು ಕ್ರಾಫ್ಟ್ಗಳಲ್ಲಿ ಕೌಶಲ್ಯ ಅಭಿವೃದ್ಧಿ ಪ್ರೋಗ್ರಾಮರ್ಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ. ವಿವಿಧ ಉದ್ಯೋಗಾವಕಾಶಗಳ ಕುರಿತು ಸಂಸ್ಥೆಗಳು, ಖಾಸಗಿ ಮತ್ತು ಸಾರ್ವಜನಿಕ ವಲಯಗಳಿಗೆ ಅರಿವು ನೀಡಲಾಗುತ್ತದೆ, ಕೆಲಸದ ಸ್ಥಳದಲ್ಲಿ ವಿಶೇಷಚೇತನರನ್ನು ಸಮಾನವಾಗಿ ಕಾಣುವಂತೆ ಉತ್ತೇಜಿಸುವುದು ಅಗತ್ಯವಿದೆ.
ಆರೋಗ್ಯ
ಕೇಂದ್ರ ಸರಕಾರ ಎಲ್ಲಾ ಆರೋಗ್ಯ ಮತ್ತು ಚಲನಶೀಲತೆಗೆ ಸಂಬAಧಿಸಿದ ಸೇವೆಗಳನ್ನು ಪೂರೈಸುತ್ತದೆ. ಫಲಾನುಭವಿಗಳಿಗೆ ಸ್ಕೂಟರ್ಗಳು, ವೀಲ್ ಚೇರ್ಗಳಂತಹ ಹಲವಾರು ಸಹಾಯಕ ಸಾಧನಗಳನ್ನು ನೀಡಲು ಒತ್ತು ನೀಡುವುದರಿಂದ ಈ ಸಮುದಾಯದ ಚಲನಶೀಲತೆಯನ್ನು ಹೆಚ್ಚಿಸಿದೆ.
ಲೈಂಗಿಕವಾಗಿ ಹರಡುವ ಸೋಂಕುಗಳು, ಸರಿಪಡಿಸುವ ಶಸ್ತçಚಿಕಿತ್ಸೆಗಳು, ಫಿಸಿಯೋಥೆರಪಿ, ವಾಕ್ ಚಿಕಿತ್ಸೆ, ಸಂಗೀತ ಚಿಕಿತ್ಸೆ, ಕಲಾ ಚಿಕಿತ್ಸೆ, ವಿಶೇಷ ಬೆಂಬಲಕ್ಕೆ ಉಲ್ಲೇಖ, ಸಾಧನಗಳ ಚಲನಶೀಲತೆ, ಶ್ರವಣ, ದೃಷ್ಟಿ, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ ಸಾಧನಗಳ ಪರಿಚಯ ಅಃಖ ಕಾರ್ಯಕ್ರಮದ ಮೂಲಕ ಆಗುತ್ತಿದೆ.
ಶಿಕ್ಷಣ
ವಿಶೇಷಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು, ವಿಶೇಷ ಶಾಲೆಗಳಿಗೆ ಸೇರಿಸುವುದು, ನಂತರ ಸಾಮಾನ್ಯ ಶಾಲೆಗಳಿಗೆ ಸೇರಿಸುವುದು. ಉನ್ನತ ಶಿಕ್ಷಣಕ್ಕೂ ಪ್ರವೇಶ ಪಡೆಯುವಂತೆ ಕಾರ್ಯಯೋಜನೆ ತಯಾರಿಸುವುದು.
ಸಾಮಾಜಿಕ ಭದ್ರತಾ ಯೋಜನೆಗಳು
ಆರೋಗ್ಯ ಕಾರ್ಡ್ಗಳು, Uಆ - ಐಡಿ ಕಾರ್ಡ್ಗಳು, ಪಿಂಚಣಿ, ಬಸ್ಪಾಸ್, ಗ್ರಾಮ ಸಂಪನ್ಮೂಲ ಕಾರ್ಯಕರ್ತರ ಸಹಯೋಗದಲ್ಲಿ ವಿಶೇಷಚೇತನರಿಗೆ ತಲುಪುತ್ತಿವೆ.
ಸಾಮಾಜಿಕ ಮೂಲಸೌಕರ್ಯ ಮತ್ತು ಕ್ರೀಡಾ ಮೂಲಸೌಕರ್ಯ ಅಂಗವಿಕಲ ಸ್ನೇಹಿ ಶೌಚಾಲಯ, ರ್ಯಾಂಪ್ಗಳ ಅಳವಡಿಕೆ, ಕ್ರೀಡಾ ಮೂಲಸೌಕರ್ಯ ಒದಗಿಸುವುದು, ಸಮುದಾಯದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು, ಅವರ ತರಬೇತಿಗೆ ಸೌಲಭ್ಯಗಳನ್ನು ಒದಗಿಸುವುದು, ಆದ್ಯತೆಯ ಮೇರೆಗೆ ಭಾಗವಹಿಸುವುದು.
ಉದ್ಯೋಗ ಯೋಜನೆಗಳು
ಸಮುದಾಯದ ೧೫ ವಿಶೇಷಚೇತನರಿಗೆ ಜೇನುಸಾಕಣೆ ತರಬೇತಿಯನ್ನು ನೀಡಲಾಗುತ್ತಿದೆ, ಸುಸ್ಥಿರ ಜೀವನವನ್ನು ಉತ್ತೇಜಿಸಲು ಸಣ್ಣಪುಟ್ಟ ಅಂಗಡಿಗಳನ್ನು ಸ್ಥಾಪಿಸಲಾಗಿದೆ.
ಆರೈಕೆ ಮಾಡುವವರ ಜೀವನ ಗುಣಮಟ್ಟ ಮತ್ತು ಮಾನಸಿಕ ಆರೋಗ್ಯ
ಆರೈಕೆ ಮಾಡುವವರ ಜೀವನದ ಗುಣಮಟ್ಟಕ್ಕೆ ಮತ್ತು ಅವರ ಮಾನಸಿಕ ಆರೋಗ್ಯಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆತಂಕ, ಖಿನ್ನತೆ ಮತ್ತು ಒತ್ತಡದಂತಹ ಮಾನಸಿಕ ತೊಂದರೆಗಳನ್ನು ತಡೆಗಟ್ಟಲು ನಿಯಮಿತ ಸಮಾಲೋಚನೆ ಸೇವೆಯನ್ನು ಒದಗಿಸಲಾಗಿದೆ. ಸಂಸ್ಥೆಯು ಫಲಾನುಭವಿಗಳಿಗೆ ಮಾನಸಿಕ ಆರೋಗ್ಯ ಸಂಬAಧಿತ ಸೇವೆಗಳನ್ನು ನೀಡುತ್ತಿದೆ.
ಕೋವಿಡ್ ಸಂಬAಧಿತ ಚಟುವಟಿಕೆಗಳು
ಕೋವಿಡ್ ಸಮಯದಲ್ಲಿ ಫಲಾನುಭವಿಗಳಿಗೆ ನೈರ್ಮಲ್ಯ ಮತ್ತು ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಲಸಿಕಾ ಅಭಿಯಾನದಲ್ಲಿ ಭಾಗವಹಿಸಲು ಲಸಿಕೆಯ ಬಗ್ಗೆ ಇರುವ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳನ್ನು ಒಡೆಯಲು ಜಾಗೃತಿ ಮತ್ತು ಪ್ರಚಾರವನ್ನು ಮಾಡಲಾಯಿತು.
ವಿಶೇಷಚೇತನರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದೊಂದಿಗೆ ಸ್ವಸ್ಥ ಸಮುದಾಯ ಆಧಾರಿತ ಕಾರ್ಯಕ್ರಮಗಳು ಕೊಡಗು ಜಿಲ್ಲೆಯಲ್ಲಿ ಸಶಕ್ತ ಸ್ಥಾನಮಾನ ಮತ್ತು ಆರೋಗ್ಯಕರ ಸುಸ್ಥಿರ ಜೀವನದೊಂದಿಗೆ ವಿಶೇಷಚೇತನರನ್ನು ಮುನ್ನಡೆಸುತ್ತಿದೆ.