ವರದಿ ಚಂದ್ರಮೋಹನ್
ಕುಶಾಲನಗರ, ಡಿ. ೨: ಕಾವೇರಿ ನದಿ ಸಂರಕ್ಷಣೆ ಹಾಗೂ ಕುಶಾಲನಗರ ಸುತ್ತಮುತ್ತ ನದಿ ತಟದ ಪ್ರವಾಹ ತಡೆಗಟ್ಟುವ ಹಿನ್ನೆಲೆಯಲ್ಲಿ ನದಿಯ ವಾಸ್ತವ ಸ್ಥಿತಿ ಬಗ್ಗೆ ಮತ್ತು ಒತ್ತುವರಿ ಬಗ್ಗೆ ಮಾಹಿತಿ ಕಲೆಹಾಕುವ ಸಂಬAಧ ಕಾವೇರಿ ನೀರಾವರಿ ನಿಗಮದ ನೇತೃತ್ವದಲ್ಲಿ ಖಾಸಗಿ ಸಂಸ್ಥೆಯೊAದು ಸರ್ವೆ ಕಾರ್ಯ ಮುಂದುವರಿಸಿದೆ.
ಗುಡ್ಡೆಹೊಸೂರು ಬಳಿಯಿಂದ ಕುಶಾಲನಗರ ಮೂಲಕ ಕೂಡಿಗೆ ತನಕ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯ ನದಿ ತಟದ ಸರ್ವೆ ಕಾರ್ಯ ನಡೆಯುತ್ತಿದ್ದು, ಕಳೆದ ಒಂದು ತಿಂಗಳಿನಿAದ ನಿರಂತರ ಚಟುವಟಿಕೆಗಳು ಕಂಡುಬAದಿದೆ.
ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಮಂಗಳೂರಿನ ಖಾಸಗಿ ಸಂಸ್ಥೆಯಾದ ಬ್ರಹ್ಮರ್ ಟೆಕ್ನಾಲಜಿಸ್ ಸಂಸ್ಥೆಯ ತಜ್ಞರ ತಂಡ ಇದೀಗ ಡ್ರೋನ್ ಕ್ಯಾಮೆರಾ ಮೂಲಕ ಸರ್ವೇ ಕಾರ್ಯ ನಡೆಸುತ್ತಿದ್ದಾರೆ.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್, ಸಹಾಯಕ ಅಭಿಯಂತರ ಡಿ.ಡಿ ಕಿರಣ್ ಮತ್ತು ಬ್ರಹ್ಮರ ಟೆಕ್ನೋಲಜಿಸ್ ಸಂಸ್ಥೆಯ ತಜ್ಞರಾದ ಸಂತೋಷ್ ಚಂದ್ರ ಮತ್ತು ಅನೀಶ್ ಮಸ್ಕರೇನಸ್ ನೇತೃತ್ವದ ಸಿಬ್ಬಂದಿಗಳ ಎರಡು ತಂಡಗಳು ಕಳೆದ ಎರಡು ದಿನಗಳಿಂದ ಡ್ರೋನ್ ಕ್ಯಾಮೆರಾ ಮೂಲಕ ಸರ್ವೆ ಕಾರ್ಯ ನಡೆಸುತ್ತಿವೆ. ಈ ಹಿಂದೆ ಗ್ರೌಂಡ್ ಸರ್ವೆ ನಂತರ ರ‍್ಯಾಫ್ಟರ್ ಬಳಸಿ ನದಿ ಸರ್ವೆ ನಡೆಸಿದ್ದು ಇದೀಗ ಗ್ರೌಂಡ್ ಸರ್ವೆ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ವರದಿಯನ್ನು ಇಲಾಖೆಗೆ ಸಲ್ಲಿಸಲಾಗುವುದು ಎಂದು ಬ್ರಹ್ಮರ್ ಸಂಸ್ಥೆಯ ಮುಖ್ಯಸ್ಥ ಸಂತೋಷ್ ಚಂದ್ರ ತಿಳಿಸಿದ್ದಾರೆ. ನದಿ ಮಾರ್ಗ, ನದಿ ತಟದ ಮನೆಗಳು, ರಸ್ತೆ ಹಾಗೂ ಪ್ರವಾಹ ನುಗ್ಗುವ ಪ್ರದೇಶಗಳ ಬಗ್ಗೆ ಸರ್ವೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆ ಮೂಲಕ ಹಾರಂಗಿ ಜಲಾಶಯ ಮತ್ತು ಹಿನ್ನೆಲೆ ವ್ಯಾಪ್ತಿಯ ಸರ್ವೆ ಕಾರ್ಯ ಹಿಂದೆಯೇ ನಡೆದಿತ್ತು. ಇದೀಗ ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಕಾವೇರಿ ನದಿ ಸಂರಕ್ಷಣೆ ಮಾಡುವ ಸಂಬAಧ ಕಾರ್ಯ ಯೋಜನೆ ನಡೆಯುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ತಿಳಿಸಿದ್ದಾರೆ. ಸರ್ವೆ ಕಾರ್ಯ ಮುಗಿದ ಕೂಡಲೇ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜೀವನದಿ ಕಾವೇರಿ ಸಂರಕ್ಷಣೆ ಮತ್ತು ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಅವರ ಮೂಲಕ ಉಸ್ತುವಾರಿ ಸಚಿವರು, ಸಂಸದರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಸರ್ವೆ ಕಾರ್ಯ ಸಂದರ್ಭ ಹಾರಂಗಿ ಅಣೆಕಟ್ಟು ವಿಭಾಗದ ಅಭಿಯಂತರರಾದ ಸಿದ್ದರಾಜು, ಡಿ.ಡಿ. ಕಿರಣ್ ಮತ್ತಿತರರು ಇದ್ದರು.