ಮಡಿಕೇರಿ, ಡಿ. ೨: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಸಮೀಕ್ಷೆಯನ್ನು ತಾ. ೩ ರಿಂದ (ಇಂದಿನಿAದ) ಆರಂಭಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮತ್ತು ಜಿಲ್ಲಾ ಸಫಾಯಿ ಕರ್ಮಚಾರಿ ಸಮೀಕ್ಷಾ ಕಾರ್ಯದ ನೋಡಲ್ ಅಧಿಕಾರಿ ಲಕ್ಷಿö್ಮ ಪಿ. ತಿಳಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಸಮೀಕ್ಷೆ ನಡೆಸುತ್ತಿದ್ದು, ೨೦೧೩ಕ್ಕಿಂತ ಮುಂಚೆ ಅಥವಾ ತದನಂತರ ಒಣ ಮಲ/ ಮಲದ ಸ್ವಚ್ಛತೆ, ಶೌಚಾಲಯದಿಂದ ತೆರೆದ ಚರಂಡಿಗೆ ಬಿಟ್ಟಿರುವ ಮಲವನ್ನು ಬರಿಕೈನಿಂದ ಸ್ವಚ್ಛತೆ, ಶೌಚಾಲಯಕ್ಕೆ ಹೊಂದಿಕೊAಡಿರುವ ಸಿಂಗಲ್ ಸಿಂಗಲ್ ಪಿಟ್‌ನ ಮ್ಯಾನ್ಯಯಲ್ (ಯಂತ್ರ ಉಪಯೋಗಿಸದೇ) ಸ್ವಚ್ಛತೆ ವೃತ್ತಿಯಲ್ಲಿ ತೊಡಗಿರುವ ವ್ಯಕ್ತಿಗಳು ಸಮೀಕ್ಷಾ ಕ್ಯಾಂಪ್‌ಗಳಲ್ಲಿ ದಾಖಲಾತಿಗಳ ಸಮೇತ ಹಾಜರಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ನೊಂದಣಿ ಗಾಗಿ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ (ಮೂಲ ಪ್ರತಿಯನ್ನು ಸಹ ತರುವುದು), ಆಧಾರ್ ಕಾರ್ಡ್ ಜೆರಾಕ್ಸ್ (ಮೂಲ ಪ್ರತಿಯನ್ನು ಸಹ ತರುವುದು), ಚುನಾವಣಾ ಗುರುತಿನ ಚೀಟಿ/ ಪಡಿತರ ಚೀಟಿ/ ಬಿ.ಪಿ.ಎಲ್ ಕಾರ್ಡ್ (ಮೂಲ ಪ್ರತಿಯನ್ನು ಸಹ ತರುವುದು), ಈ ಹಿಂದೆ ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಮಾಡು ತ್ತಿರುವ ಬಗ್ಗೆ ನೀವು ಅಥವಾ ನಿಮ್ಮ ಪ್ರತಿನಿಧಿ ಕ್ಲೆöÊಮ್ ಮಾಡಿರುವ ಬಗ್ಗೆ ದಾಖಲೆ, ನೀವು ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ವೃತ್ತಿಯಲ್ಲಿ ತೊಡಗಿರುವ/ ಮಾಡಿರುವ ಬಗ್ಗೆ ಪ್ರಮಾಣ ಪತ್ರದ ದಾಖಲಾತಿ ಗಳನ್ನು ಸಮೀಕ್ಷಾ ಕ್ಯಾಂಪ್‌ಗಳಲ್ಲಿ ನೀಡುವ ಮೂಲಕ ದಾಖಲಾತಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಸಮೀಕ್ಷೆಯು ತಾ. ೩ ರಿಂದ ೮ರ ವರೆಗೆ ಮಡಿಕೇರಿ ತಾಲೂಕು ವ್ಯಾಪ್ತಿಯ ನಿಗದಿಪಡಿಸಿದ ಗ್ರಾಮ ಪಂಚಾಯತ್ ಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ರ ವರೆಗೆ ನಡೆಯಲಿದೆ.
ಹಾಕತ್ತೂರು, ಮೇಕೇರಿ, ನರಿಯಂದಡ, ಹೊದ್ದೂರು, ಪಾರಾಣೆ ಮತ್ತು ಮೂರ್ನಾಡು ಗ್ರಾಮದವರು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯುವ ಕ್ಯಾಂಪ್‌ನಲ್ಲಿ ಭಾಗವಹಿಸಬಹುದಾಗಿದೆ.
ಮದೆ ಚೆಂಬು ಪೆರಾಜೆ ಮತ್ತು ಸಂಪಾಜೆ ಗ್ರಾಮದವರು ಸಂಪಾಜೆ ಗ್ರಾಮಪಂಚಾಯತ್ ಕಚೇರಿಯಲ್ಲಿ ಬೇಂಗೂರು, ಕುಂದಚೇರಿ, ಅಯ್ಯಂಗೇರಿ, ಕರಿಕೆ, ಭಾಗಮಂಡಲ ಗ್ರಾಮದವರು ಭಾಗಮಂಡಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ, ನಾಪೋಕ್ಲು, ಬೆಟ್ಟಗೇರಿ ಗ್ರಾಮದವರಿಗೆ ನಾಪೋಕ್ಲು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಹೊಸ್ಕೇರಿ, ಕಡಗದಾಳು, ಮರಗೋಡು ಗ್ರಾಮದವರಿಗೆ ಕಡಗದಾಳು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಗಾಳಿಬೀಡು, ಮಕ್ಕಂದೂರು, ಕೆ. ನಿಡುಗಣೆ ಗ್ರಾಮದವರಿಗೆ ಕೆ.ನಿಡುಗಣೆ ಗ್ರಾಮ ಪಂಚಾಯತ್‌ನಲ್ಲಿ ಸಮೀಕ್ಷೆ ನಡೆಯಲಿದೆ.
ಸೋಮವಾರಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ತಾ. ೩ ರಿಂದ ತಾ. ೧೦ರ ವರೆಗೆ ನಿಗದಿಪಡಿಸಿದ ಗ್ರಾಮ ಪಂಚಾಯತ್‌ಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ರ ವರೆಗೆ ನಡೆಯಲಿದೆ. ಕೂಡುಮಂಗಳೂರು, ಗುಡ್ಡೆಹೊಸೂರು, ೭ನೇ ಹೊಸಕೋಟೆ, ಕೊಡಗರಹಳ್ಳಿ ಗ್ರಾಮದವರಿಗೆ ಮುಳ್ಳುಸೋಗೆ ಗ್ರಾಮ ಪಂಚಾಯತ್ ನಲ್ಲಿ, ಕೆದಕಲ್, ಕಂಬಿಬಾಣೆ, ಗರ್ವಾಲೆ, ಹರದೂರು ಗ್ರಾಮದವರಿಗೆ ಸುಂಟಿಕೊಪ್ಪ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಆಲೂರು ಸಿದ್ದಾಪುರ, ದುಂಡಳ್ಳಿ, ಗೌಡಳ್ಳಿ, ದೊಡ್ಡಮಳ್ತೆ, ನಿಡ್ತ ಗ್ರಾಮದವರಿಗೆ ಶನಿವಾರಸಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಹಂಡ್ಲಿ, ಬೆಸೂರು, ಬ್ಯಾಡಗೊಟ್ಟ ಗ್ರಾಮದವರಿಗೆ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ತೋಳೂರು ಶೆಟ್ಟಳ್ಳಿ, ಬೆಟ್ಟದಳ್ಳಿ, ಹಾನಗಲ್ಲು, ಕಿರಗಂದೂರು ಗ್ರಾಮದವರಿಗೆ ಶಾಂತಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಮಾದಾಪುರ, ಐಗೂರು, ಚೌಡ್ಲು, ನೇರುಗಳಲೆ ಗ್ರಾಮದವರಿಗೆ ಬೇಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಶಿರಂಗಾಲ, ತೊರೆನೂರು, ಕೂಡಿಗೆ, ಗಣಗೂರು ಗ್ರಾಮದವರಿಗೆ ಹೆಬ್ಬಾಲೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ನಂಜರಾಯ ಪಟ್ಟಣ ಗ್ರಾಮದವರಿಗೆ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಮೀಕ್ಷೆ ನಡೆಯಲಿದೆ.
ವೀರಾಜಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ತಾ. ೩ ರಿಂದ ತಾ. ೮ರ ವರೆಗೆ ಬೆಳಿಗ್ಗೆ ೧೦ ಗಂಟೆಯಿAದ ೫.೩೦ರ ವರೆಗೆ ನಡೆಯಲಿದೆ. ಬಿಳುಗುಂದ, ಚೆನ್ನಯ್ಯನ ಕೋಟೆ, ಹಾಲುಗುಂದ, ಕಣ್ಣಂಗಾಲ ಗ್ರಾಮದ ವರಿಗೆ ಅಮ್ಮತ್ತಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಮಾಲ್ದಾರೆ, ಪಾಲಿಬೆಟ್ಟ, ಸಿದ್ದಾಪುರ, ಹೊಸೂರು ಗ್ರಾಮದವರಿಗೆ ಕಾರ್ಮಾಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಬೇಟೋಳಿ, ಆರ್ಜಿ, ಹಾತೂರು ಗ್ರಾಮದವರಿಗೆ ಬಿಟ್ಟಂಗಾಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಚೆಂಬೆ ಬೆಳ್ಳೂರು, ಕಾಕೋಟುಪರಂಬು, ಕೆದಮುಳ್ಳೂರು ಗ್ರಾಮದವರಿಗೆ ಕದನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಹುದಿಕೇರಿ, ಬಿರುನಾಣಿ, ಕಿರುಗೂರು, ಬಲ್ಯಮಂಡೂರು ಗ್ರಾಮದ ವರಿಗೆ ಪೊನ್ನಂಪೇಟೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಬಿ.ಶೆಟ್ಟಿಗೇರಿ, ದೇವರಪುರ, ತಿತಿಮತಿ, ಅರ್ವತ್ತೊಕ್ಲು ಗ್ರಾಮದವರಿಗೆ ಗೋಣಿಕೊಪ್ಪಲು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ನಿಟ್ಟೂರು, ಕಾನೂರು, ಪೊನ್ನಪ್ಪಸಂತೆ, ಮಾಯಾಮುಡಿ ಗ್ರಾಮದವರಿಗೆ ಬಾಳೆಲೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಕುಟ್ಟ, ನಾಲ್ಕೇರಿ, ಟಿ.ಶೆಟ್ಟಿಗೇರಿ, ಕೆ.ಬಾಡಗ ಗ್ರಾಮದವರಿಗೆ ಶ್ರೀಮಂಗಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ.