ಮಡಿಕೇರಿ, ಡಿ. ೧: ೨೦೨೧-೨೨ ನೇ ಸಾಲಿನ ಬೆಳೆಹಾನಿ ಸಂಬAಧ ಕೊಡಗು ಜಿಲ್ಲೆಯ ೧೧೬ ರೈತರ ಬ್ಯಾಂಕ್ ಖಾತೆಗೆ ರೂ. ೨೫,೮೩,೩೨೨ ನಗದು ನೇರ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಆದ್ಯತೆ ಮೇರೆ ಬೆಳೆ ಹಾನಿ ಮಾಹಿತಿಯನ್ನು ದಾಖಲಿಸಲಾಗುತ್ತಿದ್ದು, ಶೀಘ್ರದಲ್ಲೇ ಬೆಳೆಹಾನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.