ಸುಂಟಿಕೊಪ್ಪ, ಡಿ. ೧: ಅಕಾಲಿಕ ಮಳೆ ಅತಿವೃಷ್ಟಿಯಿಂದ ಬೆಳೆ ನಷ್ಟವಾದ ಬೆಳೆಗಾರರಿಗೆ ಸರಕಾರ ಪರಿಹಾರ ನೀಡಲು ಅರ್ಜಿ ಆಹ್ವಾನಿಸಿದ್ದು, ಮಂಗಳವಾರ ನಾಡ ಕಚೇರಿಯಲ್ಲಿ ದೂರದ ಕುಗ್ರಾಮದಿಂದ ಬಂದು ಬೆಳೆಗಾರರು ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿದರು.
ಗರ್ವಾಲೆ, ಸೂರ್ಲಬ್ಬಿ, ಮಂಕ್ಯ, ಶಿರಂಗಳ್ಳಿ, ಮೂವತೋಕ್ಲು, ಕಾಂಡನಕೊಲ್ಲಿ, ಹಟ್ಟಿಹೊಳೆ, ಹಾಲೇರಿ, ಮಾದಾಪುರ, ಗರಗಂದೂರು, ಹರದೂರು, ಕೆದಕಲ್, ತೊಂಡೂರು, ನಾಕೂರು, ಕಲ್ಲೂರು, ಹೆರೂರು, ಹಾದ್ರೆ ಹೆರೂರು, ಕುಂಬೂರು, ಕಂಬಿಬಾಣೆ, ಕೊಡಗರಹಳ್ಳಿ, ನಾರ್ಗಾಣೆ ಹಾಗೂ ಉಲುಗುಲಿ ಮೊದಲಾದ ಕಡೆಗಳಿಂದ ಬಂದ ಬೆಳೆಗಾರರು ಕಾಫಿ, ಕರಿಮೆಣಸು, ಶುಂಠಿ, ಬಾಳೆ ಹಾಗೂ ಭತ್ತ ಮಳೆಯಿಂದ ನೆಲಕಚ್ಚಿದ್ದು ಭಾರೀ ನಷ್ಟ ಅನುಭವಿಸಿದ್ದಾರೆ. ಜಮೀನು ಆರ್‌ಟಿಸಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಂಬರ್‌ನ ನಕಲನ್ನು ಕಂದಾಯ ಕಚೇರಿಗೆ ನೀಡಲು ಬೆಳೆಗಾರರ ನೂಕುನುಗ್ಗಲು ಕಂಡು ಬಂತು.
ಉಪತಹಶೀಲ್ದಾರ್ ಮಾತನಾಡಿ, ಕೃಷಿಕರು ಅದಷ್ಟು ಬೇಗನೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತ್ವರಿತವಾಗಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.