ಮೈಸೂರು, ಡಿ. ೧: ೧೯೭೧ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿದ ನೆನಪಿನ ೫೦ ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಮೈಸೂರಿನ ಎನ್‌ಸಿಸಿ ಗ್ರೂಪ್ ವತಿಯಿಂದ ಆ ಸಂದರ್ಭದಲ್ಲಿ ಹುತಾತ್ಮರಾದ ಇಬ್ಬರು ಯೋಧರ ಕುಟುಂಬವನ್ನು ಗೌರವಿಸಲಾಯಿತು. ರಾಜ್ಯ ಮುಕ್ತ ವಿ.ವಿ.ಯ ಕಾವೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಯುದ್ಧದಲ್ಲಿ ಹುತಾತ್ಮರಾದ ಕೊಡಗಿನವರಾದ ರಿಸಲ್ದಾರ್ ಬಲ್ಯಂಡ ಎಂ. ಕಾವೇರಿಯಪ್ಪ ಅವರ ಸ್ಮರಣೆಯಲ್ಲಿ ಪುತ್ರ ಮಾಚಯ್ಯ ಅವರನ್ನು ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಮೇಜರ್ ಜನರಲ್ ಸಿ.ಕೆ. ಕರುಂಬಯ್ಯ ಅವರು ಗೌರವಿಸಿದರು.
ವೀರಾಜಪೇಟೆ ಕಡಂಗ ಮರೂರಿನಲ್ಲಿ ೧೯೩೧ರ ಫೆ. ೪ ರಂದು ಜನಿಸಿದ್ದ ಕಾವೇರಿಯಪ್ಪ ಅವರು ೬೬ ಆರ್ಮ್ಡ್ ರೆಜಿಮೆಂಟ್‌ಗೆ ಸೇರಿ ಟ್ರೂಪ್ ಲೀಡರ್ ಆಗಿ ನೇಮಕ ಗೊಂಡರು. ಕಾವೇರಿಯಪ್ಪ ಒಂದನೇ ಟ್ರೂಪ್ ಬ್ರಾವೊ ಸ್ಕಾ÷್ವಡ್ರರ್ನ್ ಕಮಾಂಡರ್ ಆಗಿದ್ದರು. ಅವರು ಯುದ್ಧದಲ್ಲಿ ೩ ಟ್ರೂಪ್ ಅನ್ನು ಬಲ ಪಡಿಸಲು ಹೊರಟಿದ್ದಾಗ ಅವರ ಟ್ಯಾಂಕ್‌ನ್ನು ಶತ್ರುಗಳು ಹೊಡೆದುರುಳಿಸಿ ಅವರು ತಮ್ಮ ಸಿಬ್ಬಂದಿಗಳೊAದಿಗೆ ಪ್ರಾಣತ್ಯಾಗ ಮಾಡಿದ್ದರು.
ಈ ವರ್ಷ ಈಗಾಗಲೇ ನ. ೨೮ರಿಂದ ಪ್ರಾರಂಭ ಗೊಂಡಿದ್ದು, ಡಿ. ೧೯ರವರೆಗೆ ದೇಶಾದ್ಯಂತ ‘‘ವಿಜಯ್ ಶ್ರಂಕಲಾ ಔರ್ ಸಂಸ್ಕೃತಿಯೋAಕಾ ಮಹಾ ಸಂಗ್ರಾಮ್’’ ಹೆಸರಿನಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಕಾವೇರಿಯಪ್ಪ ಸಂಬAಧಿಕರಾದ ಡೆಚು ಕರುಂಬಯ್ಯ, ಶೌರ್ಯ ಮಾಚಯ್ಯ, ವಿಜಯ್ ಮಾಚಯ್ಯ ಪಾಲ್ಗೊಂಡಿ ದ್ದರು. ಕಾವೇರಿಯಪ್ಪ ಕುಟುಂಬ ದೊಂದಿಗೆ ಮತ್ತೋರ್ವ ಯೋಧ ಹುತಾತ್ಮ ಫ್ಲೆಯಿಂಗ್ ಆಫೀಸರ್ ಕೆ.ಪಿ. ಮುರಳೀಧರ್ ಅವರ ಕುಟುಂಬವನ್ನೂ ಈ ಸಂದರ್ಭ ಗೌರವಿಸಲಾಯಿತು.