ಹೆಚ್.ಜೆ. ರಾಕೇಶ್
ಮಡಿಕೇರಿ, ಡಿ ೧ : ಕ್ರೀಡಾ ತವರು ಎಂದು ಖ್ಯಾತಿಗಳಿಸಿರುವ ಕೊಡಗು ಜಿಲ್ಲೆಯಲ್ಲಿ ಪ್ರತಿಭಾನ್ವಿತರಿಗೇನೂ ಕೊರತೆ ಇಲ್ಲ. ಎಲ್ಲಾ ಕ್ರೀಡೆಯಲ್ಲೂ ಕಮಾಲ್ ಮಾಡುವಂತಹ ಆಟಗಾರರನ್ನು ಕರ್ನಾಟಕ ರಾಜ್ಯದ ಪುಟ್ಟ ಜಿಲ್ಲೆಯಾಗಿರುವ ಕೊಡಗು ನೀಡಿದೆ. ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಜಿಲ್ಲೆಯ ಆಟಗಾರರು ಸಾಧನೆ ತೋರಿದ್ದಾರೆ. ಆದರೆ, ಸಾಧಕರಿರುವ ಕೊಡಗಿನ ಕ್ರೀಡಾ ಕ್ಷೇತ್ರದಲ್ಲಿ ಮೂಲಭೂತ ವ್ಯವಸ್ಥೆ ಇಲ್ಲದಿರುವುದು ಹಲವು ಪ್ರತಿಭಾನ್ವಿತ ಕ್ರೀಡಾಪಟುಗಳ ಕನಸನ್ನು ನುಚ್ಚುನೂರು ಮಾಡಿದೆ. ಇದೀಗ ಹಲವು ವರ್ಷಗಳ ಕನಸಿಗೆ ಮರುಜೀವ ಬಂದಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ‘ಸಿಂಥೆಟಿಕ್ ಅಥ್ಲೆಟಿಕ್ ಟ್ರಾö್ಯಕ್’ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅಂದುಕೊAಡAತೆ ಆದಲ್ಲಿ ಒಂದೂವರೆ ವರ್ಷಗಳಲ್ಲಿ ಟ್ರಾö್ಯಕ್ ಬಳಕೆಗೆ ಲಭ್ಯವಾಗಲಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ಜಿಲ್ಲಾ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಅಂದಾಜುಪಟ್ಟಿ ತಯಾರಿಸಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಾತ್ರ ಬಾಕಿ ಇದೆ. ಜಿಲ್ಲಾಧಿಕಾರಿ ಕೂಡ ಸೂಕ್ತ ಕ್ರಮವಹಿಸಲು ನಿರ್ದೇಶನ ನೀಡಿದ್ದಾರೆ. ಅಥ್ಲೆಟಿಕ್ ಟ್ರಾö್ಯಕ್ಗೆ ರೂ. ೩.೨೪ ಕೋಟಿ ವೆಚ್ಚ ತಗುಲಬಹುದು ಎಂದು ಇಲಾಖೆ ಅಂದಾಜಿಸಿದೆ. ಅಲ್ಲದೆ ಕ್ರೀಡಾಂಗಣದ ಕಾಯಕಲ್ಪಕ್ಕೂ ವಿವಿಧ ಯೋಜನೆಯನ್ನು ರೂಪಿಸಲಾಗಿದೆ.
ಹಲವು ವರ್ಷಗಳ ಬೇಡಿಕೆ
ಕೊಡಗು ಜಿಲ್ಲಾ ಅಥ್ಲೆಟಿಕ್ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದೆ. ಕೊಡಗು ಜಿಲ್ಲೆಗೆ ಸಿಂಥೆಟಿಕ್ ಟ್ರಾö್ಯಕ್, ಅಥ್ಲೆಟಿಕ್ ಕ್ರೀಡಾಂಗಣ ಬೇಕೆಂಬ ಕೂಗು ಎರಡು ದಶಕಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಈ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಬೇಡಿಕೆಗೆ
(ಮೊದಲ ಪುಟದಿಂದ) ಯಾವುದೇ ಮನ್ನಣೆ ದೊರೆತಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಸತೀಶ ಅವರ ವಿಶೇಷ ಆಸಕ್ತಿಯಿಂದ ಯೋಜನೆ ಪ್ರವರ್ಧಮಾನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಸೌಲಭ್ಯ ಕೊರತೆ ಹಿನ್ನೆಲೆ ಅನೇಕ ಕ್ರೀಡಾಪಟುಗಳು ಹೊರಜಿಲ್ಲೆ, ರಾಜ್ಯದಲ್ಲಿ ತರಬೇತಿ ಪಡೆಯುವ ಪರಿಸ್ಥಿತಿ ಸದ್ಯಕ್ಕಿದೆ. ಟ್ರಾö್ಯಕ್ ನಿರ್ಮಾಣವಾದಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ.
ಗುಲ್ಬರ್ಗ ಮಾದರಿಯ ಟ್ರಾö್ಯಕ್
ರೂ. ೩.೨೪ ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರಾö್ಯಕ್ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಇತ್ತೀಚಿಗೆ ಗುಲ್ಬರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಗುಣಮಟ್ಟದ ಟ್ರಾö್ಯಕ್ ನಿರ್ಮಿಸಲಾಗಿದ್ದು, ಇದೇ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲೂ ಮೈದಾನ ನಿರ್ಮಿಸಲಾಗುತ್ತದೆ. ಗುಲ್ಬರ್ಗದ ಕ್ರೀಡಾಂಗಣದ ಸಂಪೂರ್ಣ ಯೋಜನಾ ವರದಿ (ಡಿ.ಪಿ.ಆರ್) ಆಧಾರದಲ್ಲಿ ಪ್ರಸ್ತಾವನೆಯನ್ನು ತಯಾರಿಸಲಾಗಿದೆ.
ಒಟ್ಟು ೪೦೦ ಮೀಟರ್ ಸುತ್ತಳತೆಯ ಟ್ರಾö್ಯಕ್ನಲ್ಲಿ ೮ ಲೈನ್ಗಳು ಇರಲಿವೆ. ಏಕಕಾಲದಲ್ಲಿ ೮ ಓಟಗಾರರು ಓಡಬಹುದಾಗಿದೆ. ಕ್ರೀಡಾಂಗಣದಲ್ಲಿ ಉತ್ತಮ ಗುಣಮಟ್ಟದ ಕೆಂಪು ಬಣ್ಣದ ಸಿಂಥೆಟಿಕ್ ಟ್ರಾö್ಯಕ್ ಅಳವಡಿಸಲಾಗುತ್ತದೆ. ಇದಕ್ಕೂ ಮುನ್ನ ಮೈದಾನವನ್ನು ನವೀಕರಣ ಮಾಡಬೇಕಾಗಿದೆ. ಮೈದಾನವನ್ನು ಸಮತಟ್ಟುಗೊಳಿಸಿ ಕೆಲವೊಂದು ಕಾಮಗಾರಿ ನಡೆಸಬೇಕಾಗಿದೆ. ಅದಾದ ಬಳಿಕವಷ್ಟೆ ಟ್ರಾö್ಯಕ್ ಅಳವಡಿಸಬೇಕಾಗಿದೆ.
೪೦೦ ಮೀಟರ್ ಸುತ್ತಳತೆಯ ಟ್ರಾö್ಯಕ್ನ ಮಧ್ಯಭಾಗದಲ್ಲಿ ‘ಡಿ.ಏರಿಯಾ’ ಒಂದನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಅಥ್ಲೆಟಿಕ್ನ ಭಾಗವಾದ ಶಾಟ್ಪುಟ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ ಕ್ರೀಡೆಗಳನ್ನು ಆಡಬಹುದಾಗಿದೆ. ಡಿ.ಏರಿಯಾ ಭಾಗವು ಹುಲ್ಲಿನಿಂದ ಕೂಡಿರುತ್ತದೆ. ಅದಲ್ಲದೆ ಒಳಚರಂಡಿ, ಟ್ರಾö್ಯಕ್ನ ಸುತ್ತ ಫೆನ್ಸಿಂಗ್ ಮಾಡಿ ಕ್ರೀಡಾಪಟುಗಳಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಂದಾಜುಪಟ್ಟಿ ವರದಿಯನ್ನು ಸರಕಾರಕ್ಕೆ ಕಳುಹಿಸುವುದೊಂದೆ ಬಾಕಿ ಉಳಿದಿದ್ದು, ಎಲ್ಲವೂ ಅಂದುಕೊAಡ ರೀತಿಯಲ್ಲಿ ಆದಲ್ಲಿ ಒಂದೂವರೆ ವರ್ಷಗಳಲ್ಲಿ ಟ್ರಾö್ಯಕ್ ನಿರ್ಮಾಣ ಮಾಡಬಹುದಾಗಿದೆ. ಆಡಳಿತಾತ್ಮಕ ಅನುಮೋದನೆ ದೊರೆತ ಬಳಿಕ ಟೆಂಡರ್ ಮೂಲಕ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗುವುದು.
ಸಾಧನೆಗೆ ಸಹಕಾರಿ
ಒಳ್ಳೆಯ ಕ್ರೀಡಾಪಟುವಾಗಬೇಕಾದರೆ ಉತ್ತಮ ಮೈದಾನ ಹಾಗೂ ಅಗತ್ಯ ಸಹಕಾರ ಮುಖ್ಯವಾಗಿರುತ್ತದೆ. ರಾಷ್ಟç, ಅಂತರರಾಷ್ಟಿçÃಯ ಮಟ್ಟದ ಸಾಧನೆಗೆ ಮೈದಾನ ದೊಡ್ಡ ಪಾತ್ರ ವಹಿಸುತ್ತದೆ. ಜಿಲ್ಲೆಯಲ್ಲಿ ನೂರಾರೂ ಸಂಖ್ಯೆಯಲ್ಲಿ ಅಥ್ಲೆಟ್ಗಳಿದ್ದು, ಮೈದಾನ ನಿರ್ಮಾಣವಾದಲ್ಲಿ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿದ್ದಾರೆ. ಈಗಾಗಲೇ ಇಬ್ಬರು ಅಥ್ಲೆಟ್ ತರಬೇತುದಾರರು ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿದ್ದಾರೆ. ಟ್ರಾö್ಯಕ್ ಆದಲ್ಲಿ ಮತ್ತಷ್ಟು ಪ್ರತಿಭಾನ್ವಿತರು ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುವುದಲ್ಲಿ ಅನುಮಾನವಿಲ್ಲ.
ಕ್ರೀಡಾಪಟುಗಳಿಗೆ ಮುಕ್ತ ಅವಕಾಶ
ಕೂಡಿಗೆಯ ಕ್ರೀಡಾ ಶಾಲೆ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಎಲ್ಲಿಯೂ ಸರಕಾರಿ ಸಿಂಥೆಟಿಕ್ ಟ್ರಾö್ಯಕ್ ಇಲ್ಲ. ಕೂಡಿಗೆಯಲ್ಲಿರುವ ಟ್ರಾö್ಯಕ್ ಕೇವಲ ಅಲ್ಲಿನ ವಿದ್ಯಾರ್ಥಿಗಳ ಬಳಕೆಗೆ ಮಾತ್ರ ಸೀಮಿತವಾಗಿವೆ. ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಬೇರೆಯವರಿಗೆ ಅಭ್ಯಾಸಕ್ಕೆ ಟ್ರಾö್ಯಕ್ ಬೇಕಾದಲ್ಲಿ ಸರಕಾರದ ಮಟ್ಟದಿಂದ ಅನುಮತಿ ಪಡೆಯಬೇಕಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾö್ಯಕ್ ನಿರ್ಮಾಣವಾದಲ್ಲಿ ಎಲ್ಲಾ ವಯೋಮಾನದ ಅಥ್ಲೆಟ್ಗಳಿಗೆ ಮುಕ್ತ ಅವಕಾಶ ದೊರೆಯಲಿದೆ.
ಕ್ರೀಡಾ ಶಾಲೆಯ ವಿದ್ಯಾರ್ಥಿಗಳಲ್ಲದೆ, ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರು ಮೈದಾನವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಗುರುಸ್ವಾಮಿ ಮಾಹಿತಿ ನೀಡಿದ್ದಾರೆ.