ಸೋಮವಾರಪೇಟೆ, ಡಿ. ೧: ಪಟ್ಟಣದ ಟೀಂ ಎಬಿಡಿ ವತಿಯಿಂದ ಇದೇ ಪ್ರಥಮವಾಗಿ ಲಂಡನ್‌ನಲ್ಲಿ ನಡೆಯುವಂತಹ ವಿನೂತನ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ಪೂರ್ಣ ಗೊಂಡಿದ್ದು, ವಿಜೇತ ತಂಡಗಳಿಗೆ ರೋಲಿಂಗ್ ಟ್ರೋಫಿಯೊಂದಿಗೆ ನಗದು ಹಾಗೂ ವೈಯುಕ್ತಿಕ ಬಹುಮಾನ ನೀಡಲಾಗುವುದು ಎಂದು ಟೀಂ ಎಬಿಡಿ ಅಧ್ಯಕ್ಷ ಬಿ.ಆರ್. ಹರೀಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದ ಅವರು, ಡಿಸೆಂಬರ್ ೧೮ ಹಾಗೂ ೧೯ ರಂದು ಸೋಮವಾರಪೇಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಿನಿ ಪ್ರಿಮಿಯರ್ ಲೀಗ್ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಸ್ಥಳೀಯ ಮೈದಾನದಲ್ಲಿ ಆಟವಾಡಿದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ಈಗಾಗಲೇ ಐಪಿಎಲ್ ಮಾದರಿಯಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆರ್‌ಸಿಬಿ ಬಜೆಗುಂಡಿ, ಸಿಕೆಎಸ್ ಗಾಂಧಿನಗರ, ಕೆ.ಕೆ.ಆರ್. ಬಳಗುಂದ, ಡಿ.ಸಿ. ಹೊಸಬೀಡು, ಎಂ.ಐ. ಕಕ್ಕೆಹೊಳೆ, ಎಸ್‌ಆರ್‌ಕೆ ಕರ್ಕಳ್ಳಿ, ಆರ್.ಆರ್. ಕ್ಲಬ್ ರಸ್ತೆ, ಪಂಜಾಬ್ ಇಲೆವೆನ್ ಕಲ್ಕಂದೂರು ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.

ವಿಜೇತ ತಂಡಗಳಿಗೆ ರೋಲಿಂಗ್ ಟ್ರೋಫಿಯೊಂದಿಗೆ ವಿನ್ನರ್ ಹಾಗೂ ರನ್ನರ್ ಟ್ರೋಫಿ, ಪ್ರಥಮ ರೂ. ೬೬೬೬ ನಗದು, ದ್ವಿತೀಯ ರೂ. ೩೩೩೩ ನಗದು ಹಾಗೂ ವೈಯಕ್ತಿಕ ಟ್ರೋಫಿಗಳನ್ನು ನೀಡಲಾಗುವುದು. ಲಂಡನ್‌ನಲ್ಲಿ ನಡೆಯುವಂತಹ ಮಿನಿ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು, ಅದಕ್ಕೆ ತಕ್ಕಂತೆ ಮೈದಾನವನ್ನು ಸಜ್ಜುಗೊಳಿಸಲಾಗುವುದು. ಹೊನಲು ಬೆಳಕಿನಲ್ಲೂ ಪಂದ್ಯಗಳು ನಡೆಯಲಿವೆ ಎಂದರು.

ಇದರೊAದಿಗೆ ಪ್ರತ್ಯೇಕವಾಗಿ ಅಫೀಶಿಯಲ್ ಟೂರ್ನಮೆಂಟ್ ಆಯೋಜಿಸಿದ್ದು, ತಾಲೂಕು ಕಚೇರಿ, ಪೊಲೀಸ್, ವಕೀಲರು, ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ಇತರ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಬಹುದು. ವಿಜೇತ ತಂಡಗಳಿಗೆ ಟ್ರೋಫಿ ನೀಡಲಾಗುವುದು. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಡಿಸೆಂಬರ್ ೫ ರೊಳಗೆ ಮೊ: ೯೫೩೫೫೩೦೨೪೮ ಸಂಖ್ಯೆಯ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹರೀಶ್ ತಿಳಿಸಿದರು.

ತಾ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ಪಂದ್ಯಾವಳಿಯನ್ನು ಗಜಾನನ ಗ್ಯಾಸ್ ಏಜೆನ್ಸಿ ಮಾಲೀಕ ಪಿ.ಕೆ. ರವಿ ಅವರು ಉದ್ಘಾಟಿಸಲಿದ್ದಾರೆ. ನಂತರ ಪಟ್ಟಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಜಾಥಾ ನಡೆಯಲಿದೆ. ೧೦ ಗಂಟೆಯಿAದ ಮಾರುತಿ ೮೦೦ ಕಾರು ಹಾಗೂ ೨ ಸ್ಟೊçÃಕ್ ವಿಂಟೇಜ್ ವಾಹನಗಳ ಪ್ರದರ್ಶನ ಸ್ಪರ್ಧೆ, ಯಮಹಾ ಆರ್‌ಎಕ್ಸ್ ಬೈಕ್‌ಗಳ ಪ್ರದರ್ಶನ ಹಾಗೂ ನಿಧಾನಗತಿಯ ಚಾಲನೆ ಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗೆ ನಿಧಾನ ಗತಿಯಲ್ಲಿ ಬೈಸಿಕಲ್ ಚಾಲನೆ ಸ್ಪರ್ಧೆ, ೧೬ ವಯೋಮಾನ ಮೇಲ್ಪಟ್ಟವರಿಗೆ ೧೦೦೦ ಮೀಟರ್ ಓಟದ ಸ್ಪರ್ಧೆಗಳು ನಡೆಯಲಿವೆ ಎಂದು ತಂಡದ ನಾಯಕ ಎಸ್.ಐ. ಚೇತನ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ತಂಡದ ಉಪಾಧ್ಯಕ್ಷ ಬಿ.ಆರ್. ಮಂಜು, ಖಜಾಂಚಿ ಆದರ್ಶ್ ಯಡವನಾಡು, ನಿರ್ದೇಶಕ ವಿಕಾಸ್ ಅವರುಗಳು ಉಪಸ್ಥಿತರಿದ್ದರು.