‘‘ಕ್ರೀಡೆಯಲ್ಲಿ ನಡೆದು ಬಂದ ದಾರಿಯೇ ನಾವು ತಲಪಿದ ಗುರಿಗಿಂತ ತೃಪ್ತಿ ತಂದಿದೆ’’ ಕ್ರೀಡಾಪಟುಗಳಿಗೆ ಕೊಡಲಾಗುವ ರಾಷ್ಟçದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ’ ಪ್ರಶಸ್ತಿ ಪಡೆದ ಕೊಡಗಿನ ಕ್ರೀಡಾಪಟುಗಳ ಮನದಾಳದ ಮಾತುಗಳಿವು.

ನಮ್ಮ ಕ್ರೀಡಾಪಟುಗಳು ಕ್ರೀಡೆಯ ವಿವಿಧ ಕ್ಷೇತ್ರಗಳಲ್ಲಿ ಮೆಟ್ಟಿದ ಹೆಜ್ಜೆಯ ಗುರುತುಗಳು ಅಳಿಸಿ ಹೋಗಿಲ್ಲ, ಹೋಗುವುದು ಇಲ್ಲ. ಬಾನಂಚಿನಲ್ಲಿ ಮೂಡಿದ ನಗುವಿನ ಚಿತ್ತಾರ ಇನ್ನೂ ಮಾಸಿಲ್ಲ.

ಇಲ್ಲಿಯವರೆಗೆ ಜಿಲ್ಲೆಯ ಹದಿಮೂರು ಮಂದಿ ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ್ದಕ್ಕಾಗಿ ಭಾರತ ಸರ್ಕಾರ ನೀಡುವ ಅರ್ಜುನ ಪ್ರಶಸ್ತಿಗೆ ಬಾಜನರಾಗಿದ್ದಾರೆ. ರಾಷ್ಟಿçÃಯ, ಅಂತರರಾಷ್ಟಿçÃಯ ಹಾಗೂ ಒಲಿಂಪಿಕ್ ಕ್ರೀಡಾರಂಗದ ಕಣದಲ್ಲಿ ಹೋರಾಡಿದಷ್ಟು ದಿನವೂ ಕಲಿಗಳಂತೆ ಹೋರಾಡಿದ ನಮ್ಮವರು ತಮ್ಮದೇ ಛಾಪು ಒತ್ತಿದ್ದಾರೆ. ಜೊತೆಗೆ ಅರ್ಜುನ ಪ್ರಶಸ್ತಿ ಪಡೆಯುವ ಮೂಲಕ ಕೊಡಗಿನ ಮುಕುಟಮಣಿ ಗಳಾಗಿದ್ದಾರೆ.

೧೯೬೧ರಲ್ಲಿ ಆರಂಭವಾದ ಅರ್ಜುನ ಪ್ರಶಸ್ತಿಗೆ ಈಗ ೬೦ ವರ್ಷಗಳು. ೬೦ ವರ್ಷಗಳ ಇತಿಹಾಸದಲ್ಲಿ ರಾಷ್ಟçದ ಪುಟ್ಟ ಜಿಲ್ಲೆಯಾದ ಕೊಡಗಿನಿಂದ ಹದಿಮೂರು ಮಂದಿ ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆದಿರುವುದು ಇದೇ ಮೊದಲು ಎನ್ನಬಹುದು.

ಅರ್ಜುನ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಹೀರೊ ಮೊಳ್ಳೇರ ಪಿ. ಗಣೇಶ್ (ಹಾಕಿ ೧೯೭೩) ಆನಂತರ ಬಿಳಿಮಗ್ಗ ಪುಟ್ಟಸ್ವಾಮಿ ಗೋವಿಂದ (ಹಾಕಿ ೧೯೭೫), ಚೇನಂಡ ಸಿ. ಮಾಚಯ್ಯ (ಬಾಕ್ಸಿಂಗ್ (೧೯೭೮), ಮನೆಯಪಂಡ ಎಂ. ಸೋಮಯ್ಯ (ಹಾಕಿ ೧೯೮೫), ಮನೆಯಪಂಡ ಅಶ್ವಿನಿ ಕರುಂಬಯ್ಯ (ಅಥ್ಲೆಟಿಕ್ಸ್ ೧೯೮೮), ಅಂಜಪರವAಡ ಬಿ. ಸುಬ್ಬಯ್ಯ (ಹಾಕಿ ೧೯೯೬), ಬಲ್ಲಚಂಡ ರೀತ್ ದೇವಯ್ಯ (ಅಥ್ಲೆಟಿಕ್ಸ್ ೧೯೯೮), ಮಾಚಿಮಂಡ ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂಟನ್ ೨೦೧೨), ಕುಟ್ಟಂಡ ಜೋತ್ಸಾö್ನ ಚಿಣ್ಣಪ್ಪ (ಸ್ಕಾ÷್ವಶ್ ೨೦೧೩), ಮಾಚೆಟ್ಟಿರ ಆರ್. ಪೂವಮ್ಮ (ಅಥ್ಲೆಟಿಕ್ಸ್ ೨೦೧೫), ಒಕ್ಕಲಿಗರ ರಾಮಚಂದ್ರ ರಘುನಾಥ್ (ಹಾಕಿ ೨೦೧೬), ಸೋಮವಾರಪೇಟೆ ವಿಠಲಾಚಾರ್ಯ ಸುನಿಲ್ (ಹಾಕಿ ೨೦೧೭) ಹಾಗೂ ಮಚ್ಚಂಡ ರೋಹನ್ ಬೋಪಣ್ಣ (ಟೆನ್ನಿಸ್ ೨೦೧೮) ಕೊಡಗಿನ ದ್ರುವ ತಾರೆಯರು.

ಒಲಿಂಪಿಕ್ಸ್ ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾ, ವಿಶ್ವಕಪ್ ಹಾಗೂ ವಿಶ್ವಚಾಂಪಿಯನ್‌ಷಿಪ್, ಏಷ್ಯನ್ ಟ್ರಾö್ಯಕ್ ಮತ್ತು ಫೀಲ್ಡ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಯಾವುದಾದರೂ ಒಂದು ಪದಕ ಗೆದ್ದರೆ ಮಾತ್ರ ಅರ್ಜುನ ಪ್ರಶಸ್ತಿಗೆ ಬಾಜನರಾಗುತ್ತಾರೆ. ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಒಂದು ಸಮಿತಿಯನ್ನು ಪ್ರತಿವರ್ಷ ರಚಿಸುತ್ತದೆ.

ಅರ್ಜುನ ಪ್ರಶಸ್ತಿ ಮೊದಲು ಪಡೆದ ಹಾಕಿಯ ದಂತಕಥೆ ಮೊಳ್ಳೆರ ಪಿ. ಗಣೇಶ ಅವರಿಗೆ ಸಲ್ಲುತ್ತದೆ ಅದೇ ರೀತಿ ೨೦೨೦ರಲ್ಲಿ ‘ಪದ್ಮಶ್ರೀ’ ಪಡೆದ ಅವರು ಕೊಡಗಿನವರಲ್ಲಿ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

೧೯೭೦ರ ಬ್ಯಾಂಕಾಕ್ ಹಾಗೂ ೧೯೭೪ರ ತೆಹರಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಎಂ. ಪಿ. ಗಣೇಶ್ ೧೯೭೧ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ವಿಶ್ವಕಪ್ ಹಾಕಿಯಲ್ಲಿ ಕಂಚಿನ ಪದಕ, ೧೯೭೨ ಮ್ಯೂನಿಚ್‌ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ, ೧೯೭೩ರ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಗಣೇಶ್ ಅವರಿಗೆ ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು ಕೊಡಗಿನ ಇತಿಹಾಸದಲ್ಲೇ ಮೊದಲು.

ಕಲಾತ್ಮಕ ಹಾಗೂ ಅತ್ಯಂತ ವೇಗದ ಆಟಕ್ಕೆ ಹೆಸರಾಗಿದ್ದ ಸೋಮವಾರಪೇಟೆಯ ಬಿ. ಪಿ. ಗೋವಿಂದ ಅವರು ಒಂದು ಕಾಲದಲ್ಲಿ ಹೆಸರು ಮಾಡಿದವರು. ಇವರ ಕಲಾತ್ಮಕ ಆಟಕ್ಕೆ ವಿಶ್ವವೇ ಬೆರಗಾಗಿತ್ತು.

೧೯೭೨ ಮ್ಯೂನಿಕ್ ಹಾಗೂ ೧೯೭೬ರ ಮಾಂಟ್ರಿಯಾಲ್ ಒಲಿಂಪಿಕ್ಸ್ನಲ್ಲಿ ಭಾರತ ತಂಡದ ಪರ ಆಡಿದ್ದ ಗೋವಿಂದ ೧೯೭೦, ೧೯೭೪ ಹಾಗೂ ೧೯೭೮ರಲ್ಲಿ ನಡೆದ ಮೂರು ಏಷ್ಯನ್ ಕ್ರೀಡಾಕೂಟದಲ್ಲಿ ಆಡಿ ಹೆಚ್ಚಿನ ಗಮನ ಸೆಳೆದಿದ್ದರು. ಕೌಲಾಲಂಪುರದಲ್ಲಿ ೧೯೭೫ರಲ್ಲಿ ನಡೆದ ವಿಶ್ವಕಪ್ ಹಾಕಿ ಫೈನಲ್ಸ್ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಗೋವಿಂದ ಅವರು ಅತ್ಯುತ್ತಮ ಆಟದ ಪ್ರದರ್ಶನ ತೋರಿದ್ದು ಇನ್ನೂ ನೆನಪಾಗಿ ಉಳಿದಿದೆ.

೧೯೮೮ರ ಸೋಲ್ ಒಲಿಂಪಿಕ್ಸ್ನಲ್ಲಿ ಸಣ್ಣದೊಂದು ರಾಜಕೀಯ ನಡೆದಿತ್ತು. ಈ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ‘ಬೆಡಗಿನ ರಾಣಿ’ ಮನೆಯಪಂಡ ಅಶ್ವಿನಿ ಕರುಂಬಯ್ಯ (ನಾಚಪ್ಪ) ಅವರಿಗೆ ಕೊನೆಯ ಕ್ಷಣದಲ್ಲಿ ನಿರಾಸೆ ಕಾದಿತ್ತು. ೪x೪೦೦ ಮೀರ‍್ಸ್ ದೂರದ ಮಹಿಳಾ ರಿಲೇ ತಂಡದಲ್ಲಿದ್ದ ಶೈನಿ ವಿಲ್ಸನ್ ವಂದನಾರಾವ್, ಅಶ್ವಿನಿ ನಾಚಪ್ಪ ಹಾಗೂ ವಂದನಾ ಶಾನ್‌ಬಾಗ್ಃ ಓಡಲು ಸಿದ್ಧರಾಗಿದ್ದರು. (ಮರ್ಸಿಕುಟ್ಟನ್ ರಿಸರ್ವ್ ಸ್ಥಾನದಲ್ಲಿದ್ದರು) ಅಶ್ವಿನಿ ಅವರನ್ನು ಸ್ಪರ್ಧೆ ಆರಂಭÀಕ್ಕೆ ಕೆಲವೇ ಗಂಟೆಗಳಿದ್ದಾಗ ತಂಡದ ವ್ಯವಸ್ಥಾಪಕರು ಬದಲಾಯಿಸಿ ಪಿ. ಟಿ. ಉಷಾ ಅವರನ್ನು ರಿಲೇ ತಂಡಕ್ಕೆ ಸೇರಿಸಲಾಯಿತು. ಇದರಿಂದ ಅಶ್ವಿನಿಗೆ ತೀರಾ ನಿರಾಸೆ ಉಂಟಾಯಿತು. ಇದು ಕೊನೆಯ ಕ್ಷಣದಲ್ಲಿ ನಡೆದ ರಾಜಕೀಯವೂ ಹೌದು. ದೊಡ್ಡತನ ತೋರಿದ ಅಶ್ವಿನಿ ಯಾರ ಮೇಲೂ ದ್ವೇಷಕಾರದೆ ಸುಮ್ಮನಿದ್ದುದು ಅವರ ಕ್ರೀಡಾ ಮನೋಭಾವ ಎತ್ತಿ ತೋರಿಸಿತು. ಅಶ್ವಿನಿ ಕರುಂಬಯ್ಯ ಅವರಿಗೆ ೧೯೮೮ರಲ್ಲಿ ಅರ್ಜುನ ಪ್ರಶಸ್ತಿ ಬಂದಾಗ ಅಥ್ಲೆಟಿಕ್ ರಂಗದ ಕ್ರೀಡಾಪಟುಗಳು ಮತ್ತು ಅವರ ಅಪಾರ ಅಭಿಮಾನಿಗಳು ಸಂತಸ ಪಡೆದಿದ್ದರು. ಇದರ ಬೆನ್ನೆ ಹಿಂದೆಯೇ ವಿವಾದದ ಕಿಡಿಯೊಂದು ಸಿಡಿಯಿತು.

ರಾಷ್ಟçದ ಅಗ್ರಮಾನ್ಯ ಓಟಗಾರ್ತಿಯಾದ ಅಶ್ವಿನಿಗೆ ನೀಡಲಾದ ಅರ್ಜುನ ಪ್ರಶಸ್ತಿ ಅಂದು ವಿವಾದಕ್ಕೆ ಕಾರಣವಾಯಿತು. ಲಾಂಗ್‌ಜAಪ್‌ನಲ್ಲಿ ರಾಷ್ಟಿçÃಯ ದಾಖಲೆ ಹೊಂದಿದ್ದ ಕೇರಳದ ಮರ್ಸಿಕುಟ್ಟನ್ ಅರ್ಜುನ ಪ್ರಶಸ್ತಿ ತಮಗೆ ಸಿಗಬೇಕಿತ್ತು ಎಂಬ ತಕರಾರು ಎತ್ತಿದ್ದರು. ಎರಡು ವರ್ಷಗಳ ನಂತರ ಈ ವಿವಾದ ಮತ್ತೆ ಭುಗಿಲೆದ್ದಿತು. ಅಶ್ವಿನಿಗೆ ಪ್ರಶಸ್ತಿ ಕೊಡಿಸಲು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಪ್ಪು ಮಾಹಿತಿ ಒದಗಿಸಿದ್ದರು ಎಂಬ ಅಂಶ ಹೊರ ಬಿತ್ತು. ಆದರೆ ಆ ವ್ಯಕ್ತಿಯೇ ತಮಗೆ ಗೊತ್ತಿಲ್ಲ ಎಂದು ಅಶ್ವಿನಿ ಬಲವಾಗಿ ಸಮರ್ಥಿಸಿದ್ದರು.

ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲೂ ಭಾಗವಹಿಸುವ ಇರಾದೆ ಅಶ್ವಿನಿ ಅವರಿಗೆ ಇತ್ತು. ಒಲಿಂಪಿಕ್ಸ್ನಲ್ಲಿ ನಮ್ಮ ಸ್ಥಾನಮಾನ ಏನು ಎಂಬುದು ನನಗೆ ಗೊತ್ತಿದೆ. ಆದರೆ ವಿಶ್ವದ ಖ್ಯಾತ ಸ್ಪರ್ಧಿಗಳೊಡನೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದು ಒಂದು ಅನುಭವ ಅದಕ್ಕಾಗಿ ಒಲಿಂಪಿಕ್ಸ್ವರೆಗೆ ಮುಂದುವರಿಯುವ ಆಸೆ ಇತ್ತು. ಆದರೆ ಈ ವಿವಾದದಿಂದ ಬೇಸರವಾಗಿದೆ ಎಂದು ನೇರ ನುಡಿಯ ಬಿಚ್ಚು ಮನಸ್ಸಿನ ಅಶ್ವಿನಿ ಅಂದು ನನ್ನೊಂದಿಗೆ ಮಾತನಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.

ನಮ್ಮ ರಾಷ್ಟçದಲ್ಲಿ ಅಥ್ಲೀಟ್‌ಗಳಿಗೆ ಬೆಲೆ ಇಲ್ಲ. ಅಧಿಕಾರಿಗಳಿಗೆ ಅವರ ಲಾಭಕ್ಕಾಗಿ ಮಾತ್ರ ಅಥ್ಲೀಟ್‌ಗಳು ಬೇಕು. ಕ್ರೀಡಾಪಟುಗಳು ಒಂದಾಗದೇ ಇವರ ವಿರುದ್ಧ ಹೋರಾಟ ಸಾಧ್ಯವಿಲ್ಲ, ನನ್ನ ಬಗ್ಗೆ ಹಲವರಿಗೆ ಅಸೂಯೆ ಇತ್ತು ಬಹುಶ: ರಂಗು-ರAಗಿನ ಬಟ್ಟೆ ಧರಿಸಿ ಬೆಡಗಿನಂತೆ ಓಡುತ್ತಿದ್ದುದು ಅವರ ಕಣ್ಣು ಕುಕ್ಕಿರಬೇಕು. ಎಂದು ಅಶ್ವಿನಿ ಅಂದು ನೋವಿನಿಂದ ನುಡಿದಿದ್ದನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದ್ದೇನೆ ಎಂದರೆ ಒಂದು ಪ್ರಶಸ್ತಿಗಾಗಿ ಏನೆಲ್ಲಾ ವಿವಾದಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಇಲ್ಲಿ ಹೇಳಬೇಕಾಗಿತ್ತು.

ಕೊಡಗಿನ ಕ್ರೀಡಾ ಸುಂದರಿ ರೀತ್ ದೇವಯ್ಯ ಅವರಿಗೆ ೧೯೯೭ ರಲ್ಲಿ ಅರ್ಜುನ ಪ್ರಶಸ್ತಿ ಬಂದಾಗ ಅವರ ಪ್ರತಿಕ್ರಿಯೆ ವಿಭಿನ್ನ ರೀತಿಯಲ್ಲಿತ್ತು. ಭಾರತ ಕಂಡ ಅತ್ಯುತ್ತಮ ಮಹಿಳಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದ ರೀತ್ ಅವರು ೮೦ ರ ದಶಕದಲ್ಲಿ ಹೆಪ್ಟಾಧ್ಲಾನ್ ರಾಣಿಯಾಗಿ ಮಿಂಚಿದ್ದರು. ಇವರಿಗಿಂತ ಮೊದಲು ಏಂಜೆಲ್ ಮೇರಿ ಜೋಸಫ್ ಚಾಂಪಿಯನ್ನರಾಗಿ ದ್ದರು. ಇವರ ಹಳೆಯ ದಾಖಲೆಯನ್ನು ಉತ್ತಮ ಪಡಿಸಿದ ರೀತ್ ದೇವಯ್ಯ ನಾಲ್ಕು ವರ್ಷಗಳ ಹಿಂದೆಯೇ ನನಗೆ ಪ್ರಶಸ್ತಿ ಬರಬೇಕಾಗಿತ್ತು ಎಂದಿದ್ದರು. ಇಲ್ಲೇ ಅವರ ಮನದ ಅಂತರಾಳ ಹೊರ ಬಂದಿತ್ತು.

ನನ್ನ ವೃತ್ತಿ ಜೀವನದಲ್ಲಿ ಅತಿರಥ ಮಹಾರಥರು ಅಗ್ರಮಾನ್ಯ ಕ್ರೀಡಾ ಪಟುಗಳನ್ನು ಸಮೀಪದಿಂದ ನೋಡಿದ್ದೇನೆ. ಒಬೊಬ್ಬರದು ಒಂದೊAದು ಭಾವನೆ ಪ್ರಶಸ್ತಿ ಬರದಿದ್ದರೂ ಅವರಿಗೆ ನೋವು ಇರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ಕ್ರೀಡಾ ಪಟುಗಳ ಸಾಧನೆ ಶೂನ್ಯ. ಇನ್ನಾದರೂ ನಮ್ಮವರು ಪ್ರಯತ್ನ ಮುಂದುವರಿಸಲಿ ಎಂಬುದೇ ನನ್ನ ಆಸೆ. ಪ್ರಯತ್ನ ಮುಂದುವರಿದರೆ ಅರ್ಜುನ ಪ್ರಶಸ್ತಿ ತನ್ನತನಾಗಿ ಹುಡುಕಿಕೊಂಡು ಬರುತ್ತದೆ.