*ಗೋಣಿಕೊಪ್ಪ, ನ. ೩೦: ಭತ್ತದ ಕೃಷಿಯಿಂದ ಲಾಭದಾಯಕವಲ್ಲ ಎಂಬ ನಿಲುವು ಹೊಂದಿ ಜಿಲ್ಲೆಯಲ್ಲಿ ೧೦ ಸಾವಿರ ಹೆಕ್ಟೇರ್ ಪ್ರದೇಶ ಭತ್ತ ಬೆಳೆಯದೇ ಪಾಳುಬಿಟ್ಟಿರುವುದು ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ಪೂರಕವಾದ ಕ್ರಮ ಅಲ್ಲ. ಇದು ಉತ್ತಮವಾದ ಬೆಳವಣಿಗೆಯೂ ಅಲ್ಲ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಶÀಭಾನಶೇಖ್ ಆತಂಕ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಅರಣ್ಯ ಮಹಾವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕ, ತಾಲೂಕು ಕೃಷಿ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ನಡೆದ ಭತ್ತದ ಬೆಳೆಯ ಕ್ಷೇತ್ರೋತ್ಸವ ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭತ್ತದ ಬೆಳೆಯಿಂದ ನಷ್ಟ ಸಂಭವಿಸುತ್ತದೆ ಎಂಬ ಯುವ ಸಮುದಾಯದಲ್ಲಿನ ನಿಲುವು ಮಿತ್ಯವಾಗಿದೆ. ಮಾರುಕಟ್ಟೆಯನ್ನು ಅರಿತು ಜಿಲ್ಲೆಯ ವಾತಾವರಣಕ್ಕೆ ಪೂರಕವಾದ ವಿಭಿನ್ನ ತಳಿಯ ಭತ್ತದ ಬೆಳೆಗಳನ್ನು ಬೆಳೆದಾಗ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳ ಬಹುದಾಗಿದೆ. ಕೊಡಗಿನಲ್ಲಿ ಬೆಳೆಯುವಂತಹ ಭತ್ತ ಇತರ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಸಿಗುವುದಿಲ್ಲ. ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಇಳುವರಿಯು ಅಧಿಕಗೊಳ್ಳುವುದಲ್ಲದೇ ಹೆಚ್ಚಿನ ಕೀಟಬಾಧೆಯಿಂದ ನಿಯಂತ್ರಿತ ಗೊಳ್ಳುತ್ತದೆ ಎಂದು ಹೇಳಿದರು.
ರೈತರು ವಿವಿಧ ತಳಿಗಳನ್ನು ಬೆಳೆಯುವ ಮೂಲಕ ಮಾರಾಟದ ವ್ಯವಸ್ಥೆಯನ್ನು ಸರಿದೂಗಿಸಿಕೊಳ್ಳ ಬೇಕಾಗಿದೆ. ಭತ್ತದ ಬೆಳೆಗೆ ವಿಮೆ ವ್ಯವಸ್ಥೆ ಹೊಂದುದರಿAದ ತಕ್ಷಣ ಪರಿಹಾರ ದೊರೆಯುತ್ತದೆ. ಸಾಲ ಪಡೆದ ರೈತರಿಗೆ ಪ್ರಕೃತಿ ವಿಕೋಪದಿಂದ ಉಂಟಾಗುವ ನಷ್ಟ ಪರಿಹಾರವನ್ನು ಈ ಮೂಲಕವು ಅತೀ ಶೀಘ್ರದಲ್ಲಿ ದೊರೆಯಲಿದೆ. ಬೆಳೆನಷ್ಟದಿಂದ ಸಿಗುವ ಪರಿಹಾರವೇ ಬೇರೆ. ವಿಮೆ ಮಾಡಿಸಿದಾಗ ಸಿಗುವ ಪರಿಹಾರವೇ ಬೇರೆಯಾಗಿರುತ್ತದೆ. ಈಗಾಗಲೇ ೧೦೦ ಜನ ಫಲಾನುಭವಿ ಗಳಿಗೆ ವಿಮೆ ವ್ಯವಸ್ಥೆಯಿಂದ ತಕ್ಷಣ ಪರಿಹಾರವನ್ನು ಒದಗಿಸಿಕೊಡಲಾಗಿದೆ.
ಒಂದೇ ರೀತಿಯ ಭತ್ತದಲ್ಲಿ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಿಭಿನ್ನ ತಳಿಗಳ ಬಗ್ಗೆ ಗಮನಹರಿಸಿ ಮಾರುಕಟ್ಟೆ ತೆರೆದುಕೊಳ್ಳುವ ಬಗ್ಗೆ ಚಿಂತನೆ ಹರಿಸಬೇಕಾಗಿದೆ. ಕಾಫಿ, ಕಾಳುಮೆಣಸು, ಏಲಕ್ಕಿ ಜತೆಗೆ ಭತ್ತದ ಬೆಳೆಗೂ ರೈತ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾ ನಿಲಯ ವಿಸ್ತರಣಾ ನಿರ್ದೇಶಕ ಡಾ. ಹೆಮ್ಲ ನಾಯಕ್ ಮಾತನಾಡಿ ತಾಂತ್ರಿಕತೆಯ ಬಳಕೆಯಿಂದ ಕೃಷಿ ಪ್ರಗತಿಯತ್ತ ಸಾಗುತ್ತಿದೆ. ಮಹಿಳೆಯರು ಕೃಷಿಯೆಡೆಗೆ ಹೆಚ್ಚಾಗಿ ಮನಸ್ಸು ಹಾಯಿಸುತ್ತಿರುವುದು ಉತ್ತಮ ಬೆಳವಣಿಗೆ. ರೈತರಲ್ಲಿ ಕೃಷಿ ಪದ್ಧತಿಯ ಬಗ್ಗೆ ಆಧುನೀಕರಣಕತೆಯನ್ನು ತಿಳಿಯಪಡಿಸುವ ಕಾರ್ಯ ಕೃಷಿ ಸಂಬAಧಿಸಿದ ಇಲಾಖೆಗಳ ಆದ್ಯ ಕರ್ತವ್ಯ ಎಂದು ಹೇಳಿದರು.
ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ, ಪೊನ್ನಂಪೇಟೆ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ. ಜಿ.ಎನ್. ಹೊಸಗೌಡ್ರು, ರೈತರಿಗೆ ಸಂಸ್ಥೆಗಳಿಗೆ ಉಂಟಾಗುವ ಅನುಕೂಲತೆಗಳ ಬಗ್ಗೆ ವಿವರಿಸಿದರು. ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಪ್ರಗತಿಪರ ರೈತರಾದ ಬಿ.ಪಿ. ರವಿಶಂಕರ್, ವೀಣಾ ಸುದೀರ್, ನಾಪಂಡ ಪೂಣಚ್ಚ ಇವರುಗಳನ್ನು ಸನ್ಮಾನಿಸಲಾಯಿತು.
ಕಾಫಿ ತೋಟದಲ್ಲಿ ಹಣ್ಣು ಮತ್ತು ಔಷಧೀಯ ಬೆಳೆಗಳ ಬೇಸಾಯ, ಸಮಗ್ರ ಕೃಷಿ ಪದ್ಧತಿಗಳು ಹಾಗೂ ಪಶುಪಾಲನೆ ತಾಂತ್ರಿಕತೆಗಳು, ಸಮಗ್ರ ಅಡಿಕೆ ಕೊಳೆರೋಗದ ನಿರ್ವಹಣಾ ಪದ್ಧತಿಗಳು, ಕೃಷಿ ಅರಣ್ಯ ಪದ್ಧತಿಗಳು, ಉದ್ಯಮವಾಗಿ ಕೃಷಿ ಕೋವಿಡ್ ನಂತರದಲ್ಲಿ ಯುವ ಜನತೆಗೆ ಇರುವ ಅವಕಾಶಗಳ ಬಗ್ಗೆ ತಜ್ಞರಿಂದ ವಿಚಾರಗೋಷ್ಠಿ ನಡೆಸಲಾಯಿತು. ಕ್ಷೇತ್ರೋತ್ಸವದಲ್ಲಿ ವಿವಿಧ ಸುಧಾರಿತ ಭತ್ತದ ತಳಿಗಳು, ವೈಜ್ಞಾನಿಕ ಜೇನು ಕೃಷಿ, ಎರೆಹುಳು ಗೊಬ್ಬರ ತಯಾರಿಕೆ ಕ್ಷೇತ್ರೋತ್ಸವ ಆಕರ್ಷಣೆಯಾಗಿತ್ತು.
ಮೂಡಿಗೆರೆ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಶಿವಪ್ರಸಾದ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಷಯ ತಜ್ಞರಾದ ಡಾ. ಕೆ.ವಿ. ವೀರೇಂದ್ರ ಕುಮಾರ್, ಪಶುವಿಜ್ಞಾನ ವಿಷಯ ತಜ್ಞರಾದ ಡಾ. ಸುರೇಶ್ ಸೇರಿದಂತೆ ರೈತರು, ಅಧಿಕಾರಿಗಳು, ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡ್ರೋನ್‌ನಲ್ಲಿ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆ ರೈತರನ್ನು ಗಮನ ಸೆಳೆಯಿತು. ಕೃಷಿಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳಿಂದ ಕೃಷಿ ಸಲಕರಣೆಗಳು, ಭತ್ತದ ತಳಿ, ಗೊಬ್ಬರಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮಳಿಗೆ ರೈತರಿಗೆ ಅನುಕೂಲವನ್ನು ಕಲ್ಪಿಸಿತು.
-ಎನ್.ಎನ್. ದಿನೇಶ್