ಕಣಿವೆ, ನ. ೩೦: ಕುಶಾಲನಗರದ ಐತಿಹಾಸಿಕ ಗಣಪತಿ ದೇವರ ವಾರ್ಷಿಕ ರಥೋತ್ಸವದ ಅಂಗವಾಗಿ ಶನಿವಾರ ರಾತ್ರಿ ಕಾವೇರಿ ನದಿಯಲ್ಲಿ ಶ್ರೀ ಗಣಪತಿ ದೇವರ ತೆಪ್ಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದ ಅರ್ಚಕರ ತಂಡ ಪೂಜಾ ವಿಧಿಗಳನ್ನು ನೆರವೇರಿಸಿತು.

ತೆಪ್ಪೋತ್ಸವದ ಅಂಗವಾಗಿ ಗಣಪತಿ ದೇವಾಲಯದಿಂದ ರಥಬೀದಿಯುದ್ದಕ್ಕೂ ಕಾವೇರಿ ನದಿಯ ದಂಡೆಯವರೆಗೂ ದೇವರ ಉತ್ಸವ ಮೂರ್ತಿ ಸಾಗುವ ಮಾರ್ಗದಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿಯನ್ನು ಇಟ್ಟು ಭಕ್ತಿಭಾವ ಮೆರೆದದ್ದು ಕಂಡುಬAತು.