ಮಡಿಕೇರಿ, ನ. ೨೯: ಯುವಕರನ್ನು ದುಶ್ಚಟಗಳಿಂದ ದೂರವಾಗಿಸಿ ಸರಿದಾರಿಗೆ ತರುತ್ತೇನೆ ಎಂದು ಜನರನ್ನು ನಂಬಿಸುತ್ತಿದ್ದ ವ್ಯಕ್ತಿಯ ಬಣ್ಣ ಬಾಲಕನ ಅಪಹರಣ ಪ್ರಕರಣದ ಮೂಲಕ ಬಯಲಾಗಿದೆ.
ಕೇರಳ ರಾಜ್ಯದ ಇಡುಕಿ ಜಿಲ್ಲೆಯ ನಿವಾಸಿ ಸಯ್ಯದ್ ಮಹಮ್ಮದ್ ರಫಿ ತಂಞಳ್ ಈ ಎಲ್ಲಾ ಅಪರಾಧ ಕೃತ್ಯಗಳ ಸೂತ್ರದಾರ. ಈತನ ಕೃತ್ಯ ಇದೀಗ ಬಯಲಾಗಿ ಬಂಧನಕೊಳಗಾಗಿದ್ದಾನೆ. ವಯಕೋಲ್ನ ಬಾಲಕನನ್ನು ಮರಳು ಮಾಡಿ ಅಪಹರಣ ನಡೆಸುವ ಸಂದರ್ಭ ಈತ ಸಿಕ್ಕಿಬಿದ್ದಿದ್ದಾನೆ. ಈತನ ಬಣ್ಣದ ಮಾತಿಗೆ ಮರುಳಾಗಿ ಈತನ ಜೊತೆ ಕೈಜೋಡಿಸಿದ್ದ ಕುಂಜಿಲ ಗ್ರಾಮದ ವಯಕೋಲ್ ನಿವಾಸಿಗಳಾದ ಶಿಯಾಬ್, ರಿಯಾಜ್, ಎಮ್ಮೆಮಾಡು ಗ್ರಾಮದ ಹಂಸ, ಉಬೈದ್, ಬಷೀರ್ ಕೂಡ ಆರೋಪಿಗಳಾಗಿದ್ದಾರೆ.
ಈತ ಬಲ್ಲಮಾವಟಿ ಗ್ರಾಮದಲ್ಲಿ ನಿಧಿ ಶೋಧನೆಗೆ ತಯಾರಿ ನಡೆಸುತ್ತಿದ್ದ ಎಂಬ ಬಗ್ಗೆಯೂ ತಿಳಿದು ಬಂದಿದೆ. ಒಟ್ಟಿನಲ್ಲಿ ನಾಪೋಕ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂದು ಬೆಚ್ಚಿ ಬಿದ್ದಿದ್ದ ಜನ ಈ ತಂಡದ ಬಂಧನದಿAದ ಅಲ್ಪ ಮಟ್ಟಿಗೆ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಗ್ರಾಮದಲ್ಲಿರುವ ಜನರೇ ಇಂತವರಿಗೆ ಬೆಂಬಲವಾಗಿ ನಿಂತರೆ ಮುಂದೇನು ಎನ್ನುವ ಭೀತಿಯೂ ಸೃಷ್ಟಿಯಾಗಿದೆ.
ಜನರು ಭಯಪಡುವ ಅಗತ್ಯವಿಲ್ಲ. ಅಪರಿಚಿತರು ಗ್ರಾಮದಲ್ಲಿ ಕಂಡುಬAದರೆ ಕೂಡಲೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ತಿಳಿಸಿದ್ದಾರೆ.