ಸೋಮವಾರಪೇಟೆ, ನ. ೨೯: ಪಟ್ಟಣದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧ ರಿಂದ ೧೦ನೇ ತರಗತಿಯ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಇಲ್ಲಿನ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಛದ್ಮವೇಷ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯ ಎ.ಎಸ್.ಮಹೇಶ್, ಶಾಲಾ ಮುಖ್ಯೋಪಾಧ್ಯಯಿನಿ ಪಿ.ಕೆ.ಲಕ್ಷಿö್ಮ, ಇನ್ನರ್‌ವೀಲ್ ಪದಾಧಿಕಾರಿಗಳಾದ ಕವಿತವಿರೂಪಾಕ್ಷ, ಪದಾಧಿಕಾರಿಗಳಾದ ಆಶಾ ಯೋಗೇಂದ್ರ, ಕಾವೇರಿ, ಲತ ನಾಗೇಶ್, ವೀಣಾ ಮನೋಹರ್ ಮತ್ತಿತರರು ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು.