ಗುಡ್ಡೆಹೊಸೂರು, ನ. ೨೮: ಗುಡ್ಡೆಹೊಸೂರು ಮತ್ತು ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ಜೆ.ಪಿ ಸಭೆಯು ಇಲ್ಲಿನ ಫಾಮ್‌ಇರಾ ರೆಸಾರ್ಟ್ನಲ್ಲಿ ನಡೆಯಿತು.

ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಾಯಿತು. ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಅಪ್ಪಚ್ಚುರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಬಿ.ಜೆ.ಪಿ ಮಾಜಿ ಅಧ್ಯಕ್ಷರು ಮತ್ತು ದ.ಕ. ಜಿಲ್ಲಾ ಪ್ರಭಾರಿಯಾಗಿರುವ ಬಿ.ಬಿ.ಭಾರತೀಶ್, ಪಕ್ಷದ ಅಭ್ಯರ್ಥಿ ಸುಜಾಕುಶಾಲಪ್ಪ, ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.