ಚೆಯ್ಯAಡಾಣೆ, ನ. ೨೭: ನರಿಯಂದಡ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಿಸಲು ೧೮ ಸೆಂಟ್ಸ್ ಸ್ಥಳ ಸರಕಾರದಿಂದ ಮಂಜೂರಾಗಿದ್ದು, ಅಧಿಕೃತವಾಗಿ ಸರಕಾರ ನಿಗದಿಪಡಿಸಿದ್ದ ಜಾಗದ ಅನುಮತಿ ಪತ್ರವನ್ನು ಕಂದಾಯ ಪರಿವೀಕ್ಷಕ ರವಿಕುಮಾರ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಹಾಗೂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ರಾಜೇಶ್ ಅಚ್ಚಯ್ಯ ಮಾತನಾಡಿ, ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಸರಕಾರ ಜಾಗ ಗೊತ್ತುಪಡಿಸಿದ್ದು, ಅದರ ಅಧಿಕೃತ ಪತ್ರ ದೊರೆತಿದ್ದು ತುಂಬಾ ಸಂತೋಷಕರ. ನೂತನ ಕಟ್ಟಡದ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ತ್ವರಿತವಾಗಿ ಸ್ಥಳ ನಿಗದಿಪಡಿಸಿ ಲಿಖಿತವಾಗಿ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಹಸ್ತಾಂತರ ಪ್ರಕ್ರಿಯೆ ಸಂದರ್ಭ ಗ್ರಾಮ ಲೆಕ್ಕಿಗೆ ಪೂಜಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ಝಬೈರ್ ಸಿ.ಇ., ಮುಂಡಿಯೋಳAಡ ಈರಪ್ಪ, ಮಮ್ಮದ್, ರಾಜು, ಕೌಶಿ ಕಾವೇರಮ್ಮ, ಪುಷ್ಪ, ರಜೀನಾ, ರಾಣಿ, ನೇತ್ರಾವತಿ, ಕವಿತಾ, ವಾಣಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.