ಮಡಿಕೇರಿ, ನ. ೨೭: ಗ್ರಾಮ ಮಟ್ಟದಿಂದ ಅಭಿವೃದ್ಧಿಯಾದಲ್ಲಿ ಆ ಜಿಲ್ಲೆ ಪ್ರಗತಿಯ ಹಾದಿಯಲ್ಲಿ ಸಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಭ್ಯರ್ಥಿ ಎಂ.ಪಿ. ಸುಜಾ ಕುಶಾಲಪ್ಪ ಅವರು ಭರವಸೆ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಸ್ವಚ್ಛ-ದಕ್ಷ ಹಾಗೂ ಪ್ರಾಮಾಣಿಕ ರೀತಿಯಲ್ಲಿ ಸ್ಪಂದಿಸಿ ಕೆಲಸ ನಿರ್ವಹಿಸುವ ಅಭಿಲಾಷೆ ತಮ್ಮದಾಗಿದೆ. ಸುಮಾರು ೪೦ ವರ್ಷಗಳಿಂದ ರಾಜಕೀಯ ಜೀವನದಲ್ಲಿ ತಾವಿದ್ದು, ಸಾರ್ವಜನಿಕ ಕೆಲಸ ನಿರ್ವಹಿಸಿರುವು ದಾಗಿ ಹೇಳಿದರು. ಅಧಿಕಾರ ಇರಲಿ ಅಥವಾ ಇಲ್ಲದಿದ್ದರೂ ಜನಸಾಮಾನ್ಯರಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ೧೯೮೯ ರಲ್ಲಿ ವೀರಾಜಪೇಟೆ ಪಟ್ಟಣದ ಸದಸ್ಯರಾಗಿ ಆಯ್ಕೆಗೊಂಡು, ನಂತರದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು ಈ ಸಂದರ್ಭದಲ್ಲಿ ಹಲವಷ್ಟು ಅಭಿವೃದ್ಧಿ ಕೆಲಸಗಳಿಗೆ ಒತ್ತುನೀಡಲಾಗಿದೆ. ಪಕ್ಷದ ಶಾಸಕರು - ಸಂಸದರ ಸಹಕಾರದೊಂದಿಗೆ ಹಾಗೂ ಅವರುಗಳಿಗೆ ಒತ್ತಡವನ್ನು ಹಾಕುವ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಗಮನಕ್ಕೆ ತಂದು ಜನತೆಗೆ ಸ್ಪಂದಿಸಲಾಗಿದೆ.

(ಮೊದಲ ಪುಟದಿಂದ)

ಪ್ರಸ್ತುತ ನಮ್ಮದೇ ಸರಕಾರವೂ ಇದ್ದು, ಪಕ್ಷದಿಂದ ಶಾಸಕರಾಗಿರುವ ಜಿಲ್ಲೆಯ ಪ್ರತಿನಿಧಿಗಳು - ಸಂಸದರು ಕೂಡ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಇದೂ ಕೂಡ ತಮಗೆ ಪೂರಕವಾಗಿದೆ ಎಂದ ಸುಜಾ ಕುಶಾಲಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಜಾತಿ - ಧರ್ಮದವರಿಗೆ ಸ್ಪಂದಿಸಿದೆ. ಹಲವಷ್ಟು ಯೋಜನೆಗಳನ್ನು ಒದಗಿಸಿದೆ ಎಂದ ಅವರು, ಜಯಗಳಿಸಿದಲ್ಲಿ ಭವಿಷ್ಯದ ಕೊಡಗಿನ (ಈuಣuಡಿe ಏoಜಚಿgu) ಪರಿಕಲ್ಪನೆಯೊಂದಿಗೆ ಕೆಲಸ ನಿರ್ವಹಿಸುವುದಾಗಿ ಹೇಳಿದರು. ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಅನುದಾನ ಪ್ರಸ್ತುತ ನೇರವಾಗಿ ಸರಕಾರದಿಂದ ಬರುತ್ತಿದೆ. ಇದನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸುವುದು ಹಾಗೂ ಇನ್ನೂ ಹೆಚ್ಚು ಅನುದಾನದೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿ ತಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಜವಾಬ್ದಾರಿ ಮಹತ್ವದ್ದಾಗಿದೆ. ಆದರೆ ಈ ಸದಸ್ಯರಿಗೆ ಸಿಗುತ್ತಿರುವ ಗೌರವಧನ ಕಡಿಮೆ ಇದೆ. ಇದನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿಯೂ ಸುಜಾ ತಿಳಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಹೊರ ಭಾಗದ ಅಭ್ಯರ್ಥಿಯನ್ನು ತಂದು ನಿಲ್ಲಿಸಿರುವುದನ್ನು ಟೀಕಿಸಿದರು. ಪ್ರಸ್ತುತ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಶೇ. ೭೦ ರಷ್ಟು ಬಿ.ಜೆ.ಪಿ. ಪ್ರತಿನಿಧಿಗಳೇ ಚುನಾಯಿತರಾಗಿದ್ದಾರೆ ಇದು ಪಕ್ಷದ ಪರವಾಗಿ ಜನರಲ್ಲಿ ಇರುವ ಅಭಿಪ್ರಾಯವನ್ನು ಪ್ರತಿಬಿಂಬಿಸಿದೆ ಎಂದೂ ಅವರು ಹೇಳಿದರು.