ಶ್ರೀಭಗಂಡೇಶ್ವರ ಸುಪ್ರಭಾತಮ್
ಉತ್ತಿಷ್ಠೋತ್ತಿಷ್ಠ ಗೌರೀಶ ಉತ್ತಿಷ್ಠ ವೃಷಭಧ್ವಜ |
ಭಗಂಡೇಶ್ವರ ಸಮುತ್ತಿಷ್ಠ ತ್ರೆöÊಲೋಕ್ಯಂ ಮಂಗಲA ಕುರು |
ಪಾರ್ವತಿಯ ಒಡೆಯನೇ, ವೃಷಭ (ಎತ್ತು) ವೇ ವಾಹನವಾಗಿ ಉಳ್ಳವನೇ, ಎದ್ದೇಳು. ಭಗಂಡಮುನಿಯಿAದ ಪೂಜಿತನಾದ ಈಶ್ವರನೇ, ಎದ್ದೇಳು, ಮೂರು ಲೋಕಗಳಿಗೂ ಮಂಗಳವನ್ನು ಉಂಟುಮಾಡು.
ಸೃಷ್ಟಿಸ್ಥಿತಿಪ್ರ್ರಲಯನಾಟಕ ಸೂತ್ರಧಾರ
ಸ್ವಾಮಿನ್ ಪ್ರತಿಷ್ಠಿತ ಭಗಂಡ ಮುನೀಶ್ವರೇಣ |
ತ್ವತ್ಕಿçÃಡನಂ ಜಗದಿದಂ ಸಕಲಂ ಕಪಾಲಿನ್
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ ||
ವಿಶ್ವದ ಸೃಷ್ಟಿ, ಪರಿಪಾಲನೆ ಮತ್ತು ನಾಶವೆಂಬ ನಾಟಕಕ್ಕೆ ಸೂತ್ರಧಾರನಾಗಿರುವವನೇ, ಸ್ವಾಮಿಯೇ, ಭಗಂಡಮುನಿಯಿAದ ಸ್ಥಾಪಿತನಾದ ಈಶ್ವರನೇ, ಈ ಸಕಲ ಪ್ರಪಂಚವು ನಿನ್ನ ಆಟಿಕೆ ( ಆಟದ ವಸ್ತು)ವಾಗಿದೆ. ಕಪಾಲ ಮಾಲಾಧಾರಿಯೇ, ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಗಂಗಾತರAಗಸುಮಜಾಲಲಸತ್ಕಪರ್ದಿನ್
ನಾಗಾಧಿರಾಜವಿಲಸದ್ಗಲಚAದ್ರಮೌಲೇ |
ಭಸ್ಮಾಂಗರಾಗಸುವಿಲಿಪ್ತ ಸಮಸ್ತಗಾತ್ರ
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಗAಗೆಯ ಅಲೆಗಳೆಂಬ ಹೂಗಳ ಗುಂಪಿನಿAದ ಶೋಭಿಸುವ ಜಡೆಗಳುಳ್ಳವನೇ, ಆದಿಶೇಷನಿಂದ ಶೋಭಿಸುವ ಕತ್ತುಳ್ಳುವನೇ, ಚಂದ್ರನನ್ನು ಕಿರೀಟದಲ್ಲಿ ಧರಿಸಿದವನೇ, ಇಡೀ ದೇಹದಲ್ಲಿ ಭಸ್ಮವನ್ನು ಅಂಗರಾಗ (ಪರಿಮಳದ ಹುಡಿ) ವನ್ನಾಗಿ ಲೇಪಿಸಿಕೊಂಡವನೇ, ಭಗಂಡಮುನಿ ಪೂಜಿತನಾದ ಈಶ್ವರನೇ ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ನೇತ್ರಾಗ್ನಿದಗ್ಥರತಿವಲ್ಲಭ ಪಂಚವಕ್ತç
ಗೌರೀಮುಖಾAಬುಜದಿವಾಕರ ನೀಲಕಂಠ |
ಮೃತ್ಯುಂಜಯಾಮರಗಣಸ್ತುತ ವಿಶ್ವಬಂಧೊ
ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ||
ಮೂರನೇ ಕಣ್ಣಿನ ಬೆಂಕಿಯಿAದ ರತಿಯ ಒಡೆಯನಾದ ಮನ್ಮಥನನ್ನು ದಹಿಸಿದವನೇ, ಐದು ಮುಖಗಳುಳ್ಳವನೇ, ಗೌರಿಯ ಮುಖಕಮಲವನ್ನು ಅರಳಿಸುವ ಸೂರ್ಯದೇವನೇ, (ವಿಷ ಪಾನದಿಂದ) ಕಪ್ಪಾದ ಕತ್ತುಳ್ಳವನೇ, ಮೃತ್ಯುವನ್ನು ಗೆದ್ದವನೇ, ದೇವತೆಗಳ ಗುಂಪಿನಿAದ ಸ್ತುತಿಸಲ್ಪಟ್ಟವನೇ, ಪ್ರಪಂಚಕ್ಕೆ ಬಂಧುವಾದವನೇ, ಭಗಂಡಮುನಿಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ವಾಮಾಂಕಸAಸ್ಥಿತಹಿಮಾದ್ರಿಸುತಾನನೇAದು
ಜ್ಯೋತ್ಸಾö್ನಪಾನಪರಿತೃಪ್ತಚಕೋರಪತ್ರಿನ್ |
ಕಾಲಾಂತಕಾAಧಕರಿಪೋ ಪ್ರಮಥಾಧಿರಾಜ
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಎಡತೊಡೆಯ ಮೇಲೆ ಕುಳಿತಿರುವ ಶೈಲರಾಜ (ಹಿಮಾಲಯ)ನ ಮಗಳಾದ ಪಾರ್ವತಿಯ ಮುಖವೆಂಬ ಚಂದ್ರನ ಬೆಳಕನ್ನು ಕುಡಿಯುವುದರಿಂದ ತೃಪ್ತಿ ಹೊಂದಿದ ಚಕೋರಪಕ್ಷಿಯೇ, ಯಮನಿಗೆ ಅಂತಕನಾದವನೇ, ಅಂಧಕಾಸುರನನ್ನು ಕೊಂದವನೇ, ಪ್ರಮಥಗಣಗಳಿಗೆ ಅಧಿರಾಜನಾದವನೇ, ಭಗಂಡ ಮುನಿಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಶ್ರೀಕಂಠ ಶಂಕರ ಕುಮಾರಗಣೇಶವಿಷ್ಣು
ಸಂಯುಕ್ತ ಸಹ್ಯತನಯಾಕನಕಾತಟಸ್ಥ |
ಪ್ರೇತಾಟವೀಭುಜಗಕಾನನಸಮ್ಮುಖಸ್ಥ
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಶ್ರೀಕAಠನೇ, ಶಂಕರನೇ, ಸುಬ್ರಹ್ಮಣ್ಯ, ಗಣಪತಿ ಮತ್ತು ವಿಷ್ಣುಮೂರ್ತಿ ಇವರಿಂದ ಕೂಡಿದವನೇ ಕಾವೇರಿ ಮತ್ತು ಕನ್ನಿಕಾನದಿಗಳ ದಡದಲ್ಲಿರು ವವನೇ, ಪ್ರೇತಾರಣ್ಯ ಮತ್ತು ತಕ್ಷಕವನಗಳ ಸಮ್ಮುಖದಲ್ಲಿರು ವವನೇ, ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಪೂರ್ವಾದ್ರಿಶೃಂಗಮಧಿರೋಹತಿ ಸೂರ್ಯದೇವ
ಕ್ಷತ್ತಾರುಣಾಂ ಜವನಿಕಾಮಪಸಾರ್ಯ ತಸ್ಯ |
ಪಂಥಾನಮದ್ಯ ಕುರುತೇ ವಿಶದಂ ಪ್ರಕಾಮಂ
ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ||
ಉದಯಪರ್ವತದ ಶಿಖರವನ್ನು ಸೂರ್ಯನು ಏರುತ್ತಿದ್ದಾನೆ. ಈಗ ಆ ಸೂರ್ಯನ ಸಾರಥಿಯಾದ ಅರುಣನು ಕೆಂಪಾದ ಪರದೆಯನ್ನು ತೆರೆದು ಅವನ ದಾರಿಯನ್ನು ಸಾಕಷ್ಟು ವಿಶದಗೊಳಿಸುತ್ತಿದ್ದಾನೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಸುಸ್ವಾಗತಂ ತವ ವಿಧಾತುಮಿವ ಪ್ರವೃತ್ತಾ
ಗುಂಜAತಿ ಸಾರಸಗತಾ ಮಧುಪಾಸ್ಸುಮಾನಿ |
ವೃಕ್ಷಾಃ ಕಿರಂತಿ ವಿವಿಧಾಶ್ಚ ಖಗಾ ರುವಂತಿ
ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ||
ನಿನಗೆ ಸುಖಾಗಮನವನ್ನು ಮಾಡುವುದಕ್ಕೆ ತೊಡಗಿವೆಯೋ ಎಂಬAತೆ ಸರೋವರದಲ್ಲಿರುವ ಕಮಲದಲ್ಲಿ ಸೇರಿರುವ ಜೇನುನೋಣಗಳು ಝೇಂಕಾರ ಮಾಡುತ್ತಿವೆ. ಮರಗಳು, ಹೂಗಳನ್ನು ಚೆಲ್ಲುತ್ತಿವೆ. ಬೇರೆ-ಬೇರೆ ಜಾತಿಯ ಹಕ್ಕಿಗಳು ಧ್ವನಿಗೈಯುತ್ತಿವೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಕುಂಜಾದ್ರಿ ಕಂದರಮಹೀರುಗ ಕೋಟಿರೇಷು
ಲೀನಂ ಪತಂಗಮೃಗಭೋಗಿಕುಲA ಪ್ರಭಾತೇ |
ಅನ್ವೀಕ್ಷಣಾಯ ನಿರತಂ ದಿನಜೀವಿಕಾನಾಂ
ಭವ್ಯA ಭಗಂಡಮಹಿತೇಶ ಕುರು ಪ್ರಭಾತಂ||
ಪೊದರುಗಳಲ್ಲಿ ಮತ್ತು ಬೆಟ್ಟದ ಗುಹೆಗಳಲ್ಲಿ ಅಲ್ಲದೆ ಮರಗಳ ಪೊಟರೆ ಗಳಲ್ಲಿ ಅಡಗಿರುವ ಹಕ್ಕಿಗಳು, ಮೃಗಗಳು ಮತ್ತು ಹಾವುಗಳ ಗುಂಪು ಬೆಳಿಗ್ಗೆ ತಮ್ಮ ದಿನನಿತ್ಯದ ಆಹಾರವನ್ನು ಹುಡುಕಲು ತೊಡಗಿವೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಉತ್ತಿಷ್ಠ ವೇದನಿಗಮಾಂತಪುರಾಣಶಾಸ್ತç
ಸAಕೀರ್ತ್ಯಮಾನ ಮಹಿಮನ್ ಭುವನಸ್ಯಗೋಪ್ತಃ |
ವ್ಯಾಘ್ರಾಜಿನಾಂಬರಧರ ಪ್ರಣವಸ್ವರೂಪಿನ್
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ವೇದ, ವೇದಾಂತ, ಪುರಾಣ ಮತ್ತು ಶಾಸ್ತçಗಳಿಂದ ಹೊಗಳಲ್ಪಟ್ಟವನೇ, ಮಹಾತ್ಮನೇ, ವಿಶ್ವ ರಕ್ಷಕನೇ, ಹುಲಿಯ ಚರ್ಮವನ್ನು ಧರಿಸಿದವನೇ, ಓಂಕಾರ ಸ್ವರೂಪನೇ, ಭಗಂಡಮುನಿಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಕಾವೇರಿಕಾತಟವಿರೂಢತರುಪ್ರಸೂನ
ಸೌರಭ್ಯಭಾರವಹನಪ್ರತಿರುದ್ಧವೇಗಃ |
ನೂನಂ ಕರೋತಿ ಭವತೀಪಚಿತಿಂ ನಭಸ್ವಾನ್
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಕಾವೇರಿಯ ದಡದಲ್ಲಿ ಬೆಳೆದ ಮರಗಳಲ್ಲಿರುವ ಹೂಗಳ ಪರಿಮಳದ ಭಾರದಿಂದ ಕುಂಠಿತವಾದ ವೇಗವುಳ್ಳ ಗಾಳಿಯು ನಿನ್ನ ಪೂಜೆಯನ್ನು ಮಾಡುತ್ತಿದೆಯೋ ಎಂಬAತಿದೆ. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಗೋಷ್ಠೇಷು ತರ್ಣಕಕುಲಂ ಹ್ವಯತಿ ಸ್ವಮಾತೃ
ಸ್ತನ್ಯಂ ಪಿಪಾಸು ಮಧುರಂ ರಜನೀವಿರಾಮೇ |
ಭೂತೇಶ ಭೋ ಶಯನಮದ್ಯ ನ ಸಾಂಪ್ರತA ತೇ
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಬೆಳಗ್ಗಿನ ಹೊತ್ತಿನಲ್ಲಿ ಹಟ್ಟಿಗಳಲ್ಲಿ ತಮ್ಮ ತಮ್ಮ ತಾಯಂದಿರ ಮಧುರವಾದ ಸ್ತನ್ಯಕ್ಷೀರವನ್ನು ಕುಡಿಯಲಿಚ್ಛಿಸುವ ಕರುಗಳ ಗುಂಪು, ತಾಯಂದಿರನ್ನು ಕರೆಯುತ್ತಿದೆ. ದೇವ, ಪ್ರಾಣಿಗಳ ಒಡೆಯನೇ, ಈ ಸಮಯದಲ್ಲಿ ನೀನು ನಿದ್ರಿಸುವುದು ಯೋಗ್ಯವಲ್ಲ, ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು.
ಕೋಕಾಂಗನಾ ವಿರಹಶೋಕವಿಮುಕ್ತವಿತ್ತಾಃ
ತಾರಾಣಿ ಸಂತಿ ವಿರಲಾನಿ ಶಶೀ ಗತಶ್ರೀಃ |
ರಾತ್ರಿರ್ಗತಾ ಶಯನಮದ್ಯ ವಿಮುಂಚ ಶೂಲಿನ್
ಭವ್ಯಂ ಭಗಂಡಮಹಿತೇಶ ಕುರು ಪ್ರಭಾತಂ||
ಹೆಣ್ಣು ಚಕ್ರವಾಕಗಳು ಈಗ ತಮ್ಮ ಗಂಡAದಿರ ಅಗಲಿಕೆಯ ದುಃಖದಿಂದ ವಿಮುಕ್ತವಾಗಿವೆ. ನಕ್ಷತ್ರಗಳು ಆಕಾಶದಲ್ಲಿ ಕಡಿಮೆಯಾಗುತ್ತಿವೆ. ಚಂದ್ರನು ತನ್ನ ಕಾಂತಿಯನ್ನು ಕಳೆದುಕೊಂಡಿದ್ದಾನೆ. ರಾತ್ರಿಯು ಹೋಯಿತು, ಶೂಲಧಾರಿಯಾದ ಈಶ್ವರನೇ ಈಗ ನಿದ್ದೆಯಿಂದ ಎದ್ದೇಳು. ಭಗಂಡಮುನಿ ಪೂಜಿತನಾದ ಈಶ್ವರನೇ, ಬೆಳಗ್ಗಿನ ಸಮಯವನ್ನು ಕ್ಷೇಮಪ್ರದವನ್ನಾಗಿ ಮಾಡು. (ಮುಂದುವರಿಯುವುದು)
ಸAಗ್ರಹ : ಜಿ. ರಾಜೇಂದ್ರ
ಚಿತ್ರ : ಸಂಪತ್ಕುಮಾರ್