ಮಡಿಕೇರಿ, ನ.೨೭: ಮುನವ್ವರ್ ಅಲಿ ಶಿಹಾಬ್ ತಂಙಲ್ ಪಾಣಕ್ಕಾಡ್ ಹಾಗೂ ಅಂತರಾಷ್ಟಿçÃಯ ಪ್ರಖ್ಯಾತ ವಾಗ್ಮಿ ನೌಶಾದ್ ಬಾಖವಿ ಅವರುಗಳು ಸುಂಟಿಕೊಪ್ಪ ಎಸ್ಎಂಎಸ್ ಅರೆಬಿಕ್ ಕಾಲೇಜಿಗೆ ತಾ.೨೮ ರಂದು (ಇಂದು) ಭೇಟಿ ನೀಡಲಿದ್ದಾರೆ. ಅಂದು ಸಂಜೆ ೬ ಗಂಟೆಗೆ ಕಾಲೇಜಿನಲ್ಲಿ ನಡೆಯುವ ಏಕದಿನದ ಮತಪ್ರವಚನ ಕಾರ್ಯಕ್ರಮದಲ್ಲಿ ನೌಶಾದ್ ಬಾಕವಿ ತಿರುವನಂತಪುರ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಙಲ್ ಸಭೆಯನ್ನು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಧಾನ ವ್ಯವಸ್ಥಾಪಕ ಹಾಜಿ ಕೆ.ಎಂ.ಇಬ್ರಾಹಿA ಮಾಸ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಉಪಕಾಝಿ ಅಬ್ದುಲ್ಲ ಫೈಜಿ ಕಾರ್ಯಕ್ರಮದಲ್ಲಿ ಪ್ರಾರ್ಥನೆ ನೆರವೇರಿಸಲಿದ್ದಾರೆ.
ಕಾಲೇಜಿನ ಪ್ರಚಾರಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕ್ರಮದ ಸ್ವಾಗತ ಸಮಿತಿ ಮುಖ್ಯ ಆಯೋಜಕ ಕೆ.ಎ.ಉಸ್ಮಾನ್ ಹಾಗೂ ಪ್ರಧಾನ ಸಂಚಾಲಕ ಸಿ.ಎಂ.ಹಮೀದ್ ಮೌಲವಿ ಮನವಿ ಮಾಡಿದ್ದಾರೆ.