ಸೋಮವಾರಪೇಟೆ, ನ.೨೭: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದ್ದು, ಎಲ್ಲಾ ಬೆಳೆಗಾರರಿಗೂ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿ ಬಂದಿರುವ ನಡುವೆಯೇ ತಾಲೂಕು ಆಡಳಿತದಿಂದ ಪರಿಹಾರಕ್ಕೆ ಅರ್ಜಿ ಸ್ವೀಕರಿಸಲು ಕ್ರಮ ವಹಿಸಲಾಗಿದೆ.
ಪ್ರಸಕ್ತ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಅತೀವೃಷ್ಟಿಯಲ್ಲಿಯೂ ಫಸಲು ನಷ್ಟ ಅನುಭವಿಸಿದ್ದು, ಕಾಫಿ ಮಂಡಳಿ ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕಾ ಇಲಾಖಾಧಿಕಾರಿಗಳು ಸರ್ವೆ ನಡೆಸಿ ತಾಲೂಕಿನ ಕೆಲವೇ ಕೆಲವು ಗ್ರಾಮಗಳಲ್ಲಿ ಮಾತ್ರ ಶೇ.೩೩ರಷ್ಟು ಹಾನಿಯಾಗಿರುವ ಬಗ್ಗೆ ವರದಿ ಸಲ್ಲಿಸಿದ್ದರು.
ಈ ವರದಿಗೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಕಳೆದ ಎರಡು ತಿಂಗಳಿನಿAದ ಮತ್ತೆ ಸುರಿದ ಅಕಾಲಿಕ ಮಳೆಗೆ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ತಾಲೂಕಿನಾದ್ಯಂತ ನಷ್ಟಕ್ಕೊಳಗಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಬೆಳೆಗಳು ಹಾನಿಗೀಡಾಗಿರುವುದನ್ನು ಖುದ್ದು ಪರಿಶೀಲನೆ ನಡೆಸಿದ್ದರು.
ಈ ಸಂದರ್ಭ ಕಳೆದ ಬಾರಿ ನೀಡಿದ ವರದಿಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮತ್ತೊಮ್ಮೆ ಖುದ್ದು ಪರಿಶೀಲನೆ ನಡೆಸಿ, ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸೋಮವಾರಪೇಟೆ
(ಮೊದಲ ಪುಟದಿಂದ) ತಾಲೂಕಿನಾದ್ಯಂತ ಬೆಳೆ ನಷ್ಟ ಸಂಭವಿಸಿರುವ ಸಮೀಕ್ಷಾ ವರದಿಯನ್ನು ತಕ್ಷಣ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು.
ಅದರಂತೆ ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ತಾಲೂಕಿನಾದ್ಯಂತ ಮರು ಸಮೀಕ್ಷೆ ನಡೆಸಿದ್ದು, ಎಲ್ಲಾ ಹೋಬಳಿ ಹಾಗೂ ಗ್ರಾಮಗಳಲ್ಲೂ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ವರದಿ ನೀಡಿದ್ದಾರೆ. ಶೇ. ೩೩ಕ್ಕಿಂತಲೂ ಅಧಿಕ ಫಸಲು ನಷ್ಟ ಸಂಭವಿಸಿದ್ದು, ತಾಲೂಕಿನ ಎಲ್ಲಾ ಗ್ರಾಮಗಳ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತರು ಕಾಫಿ ಹಾಗೂ ಕರಿಮೆಣಸು ಬೆಳೆ ನಷ್ಟಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಸಬಹುದಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತರು ಕಾಫಿ, ಕಾಳುಮೆಣಸು, ಬಾಳೆ, ಶುಂಠಿ ಹಾಗೂ ಅಡಿಕೆ- ಆಲೂರು ವೃತ್ತದ ಎಲ್ಲಾ ಗ್ರಾಮಗಳ ಕೃಷಿಕರು ಜೋಳ ಹಾಗೂ ಗೆಣಸು ಬೆಳೆನಷ್ಟಕ್ಕೆ ಅರ್ಜಿ ನೀಡಬಹುದಾಗಿದೆ.
ಕೊಡ್ಲಿಪೇಟೆ ಹೋಬಳಿಯ ಎಲ್ಲಾ ಗ್ರಾಮದಲ್ಲೂ ಕಾಫಿ, ಕಾಳುಮೆಣಸು, ಶುಂಠಿ, ಅಡಿಕೆ, ಸೋಮವಾರಪೇಟೆ ಕಸಬ ಹೋಬಳಿಯ ಎಲ್ಲಾ ಗ್ರಾಮದಲ್ಲೂ ಕಾಫಿ, ಕರಿಮೆಣಸು, ಶುಂಠಿ, ಅಡಿಕೆ, ಭತ್ತ, ಜೋಳ ಹಾಗೂ ಸುಂಟಿಕೊಪ್ಪ ಹೋಬಳಿ (ಸೋಮವಾರಪೇಟೆ ತಾಲೂಕಿಗೆ ಒಳಪಡುವ ಗ್ರಾಮಗಳು)ಯ ಎಲ್ಲಾ ಗ್ರಾಮಗಳಲ್ಲೂ ಕಾಫಿ, ಕಾಳುಮೆಣಸು ಫಸಲು ನಷ್ಟ ಸಂಭವಿಸಿದ್ದು, ರೈತರು ಸಂಬAಧಿಸಿದ ನಾಡಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ೩ ದಿನಗಳೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಆರ್. ಗೋವಿಂದರಾಜು ತಿಳಿಸಿದ್ದಾರೆ.
ಈ ಗ್ರಾಮಗಳ ರೈತರು ತಾವು ನಷ್ಟ ಅನುಭವಿಸಿದ ಬೆಳೆಗಳ ಮಾಹಿತಿಯೊಂದಿಗೆ ತಕ್ಷಣ ಅರ್ಜಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಗೋವಿಂದರಾಜು ಅವರು ಪತ್ರಿಕೆ ಮೂಲಕ ಮಾಹಿತಿ ನೀಡಿದ್ದಾರೆ.